ಕಲಬುರಗಿ: ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ನಡುವೆ ಅಶೋಕ ಚಕ್ರವಿರುವ ಭಾರತ ದೇಶದ ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೇ ಎಂದು ಸಾರುವ, ಹೆಮ್ಮೆಯ, ಗೌರವ ಹಾಗೂ ಸಮಾನತೆಯನ್ನು ಸಾರುವ ಸಂಕೇತದ ಚಿಹ್ನೆಯಾಗಿದೆ ಎಂದು ಭಾರತ ಸೇವಾದಳದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸುರೇಶ ಬಡಿಗೇರ್ ಅಭಿಮತ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪೆಕ್ಸ್‌ನಲ್ಲಿರುವ ’ಅಕ್ಕ ಮಹಾದೇವಿ ಮಹಿಳಾ ಪದವಿ ಕಾಲೇಜ್’ನಲ್ಲಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ’ಭಾರತ ಸೇವಾ ದಳ’ ಮತ್ತು ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಲಾಗಿದ್ದ ’ರಾಷ್ಟ್ರಧ್ವಜ ಅಂಗಿಕಾರ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಶೇಖರ ಜಮಾದಾರ, ರಾಷ್ಟ್ರಧ್ವಜ ದೇಶದ ಸಂಕೇತವಾಗಿದ್ದು, ಅದಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಧ್ವಜ ಅವರೋಹಣ, ಆರೋಹಣ ಪದ್ಧತಿಯ ಬಗ್ಗೆ ತಿಳಿದುಕೊಳ್ಳಬೇಕು. ಎನ್.ಎಸ್.ಹರ್ಡಿಕರ್ ಕೊಡುಗೆ ಪ್ರಮುಖವಾಗಿದೆ. ಯುವಕರು ದೇಶಪ್ರೇಮ ಬೆಳಸಿಕೊಳ್ಳಬೇಕು ಎಂದು ಧ್ವಜ, ದೇಶಭಕ್ತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಡಾ.ಅಂಬಾರಾಯ ಎಸ್.ಹಾಗರಗಿ, ಬಸಯ್ಯಸ್ವಾಮಿ ಹೊದಲೂರ, ನಾಗರಾಜ ನಾಟೀಕಾರ, ನಾಗೇಶ ತಿಮಾಜಿ ಬೆಳಮಗಿ, ನಾಗಜ್ಯೋತಿ ದೊಡ್ಡಮನಿ, ಯಶೋಧಾ, ಅಂಬಿಕಾ, ಪ್ರೀತಿ ಶೀಲವಂತ, ಮಹಾದೇವಿ, ಹಣಮಯ್ಯ ಗುತ್ತೇದಾರ, ಪ್ರಭು, ರಂಜಿತಾ ಹಿರೇಮಠ, ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.