ಪುಸ್ತಕಗಳು ಸಮುದಾಯದ ಪ್ರಜ್ಞೆ.: ಪ್ರೊ. ಎಚ್.ಟಿ. ಪೋತೆ

0
109
  • ಮಹಿಪಾಲರೆಡ್ಡಿ ಮುನ್ನೂರ್‌ಅವರ “ಇತಿ ನಿನ್ನ ಮೈನಾ” ತಾಂಕಾ ಸಂಕಲನ ಬಿಡುಗಡೆ

ಕಲಬುರಗಿ: ವಿಭಿನ್ನತೆ ಮತ್ತು ವೈಶಿಷ್ಟತೆ ಮೈಗೂಡಿಸಿಕೊಂಡ ಲೇಖಕ ಮತ್ತಷ್ಟುಎತ್ತರಕ್ಕೆಏರಬಲ್ಲ ಎಂಬುದಕ್ಕೆತಾಂಕಾ ಸಂಕಲನ ಸಾಕ್ಷಿಯಾಗಿದೆಎಂದುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜಡೋಣೂರಅಭಿಪ್ರಾಯಪಟ್ಟರು.

ನಗರದರಂಗಾಯಣ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್‌ಅವರ “ಇತಿ ನಿನ್ನ ಮೈನಾ” ತಾಂಕಾ ಸಂಕಲನ ಕುರಿತು ಮಾತನಾಡಿದಅವರು, ಇಲ್ಲಿನ ೧೦೦ ಕವಿತೆಗಳಲ್ಲಿ ಅನೇಕ ಹೊಸತನಗಳಿವೆ. ಜಪಾನಿನಲ್ಲಿಜನಪ್ರಿಯವಾದ ಈ ಕಾವ್ಯ ಪ್ರಕಾರವು ಸುಮಾರು ೮೦೦ ವರ್ಷಗಳ ಕಾಲ ಆ ದೇಶದಕಾವ್ಯಪ್ರಕಾರವಾಗಿತ್ತು. ಇಲ್ಲಿನ ಅನೇಕ ಪದ್ಯಗಳಲ್ಲಿ ರಾತ್ರಿಯ ವರ್ಣನೆಇದೆ.ಏಕಾಂತದಲ್ಲಿಓದುವಂತಿವೆ. ಸಮಸ್ಯೆಗೆ ಪರಿಹಾರ ಸೂಚಿಸದೆಇರುವುದು ಈ ಕಾವ್ಯದ ವಿಭಿನ್ನ ಶೈಲಿ.ಅದ್ಭುತ ಭಾವ, ಅನುಭವತಂದುಕೊಡುತ್ತವೆಎಂದು ತಿಳಿಸಿದರು.

Contact Your\'s Advertisement; 9902492681
ತಾಂಕಾಜಪಾನಿನಲ್ಲಿಜನಪ್ರಿಯವಾದಕಾವ್ಯ ಪ್ರಕಾರ. ಸುಮಾರು ೮೦೦ ವರ್ಷ ಆ ದೇಶದಕಾವ್ಯ ಪ್ರಕಾರವಾಗಿತ್ತು.ಸಮರ್ಥಅಭಿವ್ಯಕ್ತಿ, ಜನಪ್ರಿಯಕಾವ್ಯ ಪ್ರಕಾರ.ಸಾಮಾನ್ಯವಾಗಿಇವೆಲ್ಲ ಪ್ರೇಮಕವಿತೆಗಳು.ಇವು ಛಿದ್ರ ಕವಿತೆಗಳು, ಜೀವನದಅಶಾಶ್ವಾತತೆಯ ಬಗ್ಗೆ, ಪ್ರೀತಿ, ಬುದ್ಧನತತ್ವಜ್ಞಾನ, ಉತ್ಕಟ ಭಾವ, ಮೋಹದ ವಿಸ್ತಾರದ ಹುಡುಕಾಟವಿದೆ, ಹುಡುಕಾಟದ ಅಲೆ, ಹದುಮಿಟ್ಟ ಮೌನ, ದುಖ ದುಮ್ಮಾನಗಳಿವೆ. ಇಲ್ಲಿನ ಅನೇಕ ಪದ್ಯಗಳಲ್ಲಿ ರಾತ್ರಿಯ ವರ್ಣನೆಇದೆ.ಏಕಾಂತದಲ್ಲಿಓದುವಂತಿವೆ. ಸಮಸ್ಯೆಗೆ ಪರಿಹಾರ ಸೂಚಿಸದೆಇರುವುದು ಈ ಕಾವ್ಯದ ಶೈಲಿ.ಅದ್ಭುತ ಭಾವ, ಅನುಭವತಂದುಕೊಡುತ್ತವೆ. -ಡಾ. ಬಸವರಾಜಡೋನೂರ, ಕುಲಸಚಿವ, ಸಿಯುಕೆ, ಕಲಬುರಗಿ.

ಮುಖ್ಯಅತಿಥಿಯಾಗಿದ್ದಗುಲ್ಬರ್ಗ ವಿವಿ ಕನ್ನಡಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ಪುಸ್ತಕಗಳು ಸಮುದಾಯದ ಪ್ರಜ್ಞೆಯಾಗಿದ್ದು, ಕಲ್ಯಾಣಕರ್ನಾಟಕದ ಈ ನೆಲವೇ ಪ್ರಯೋಗಶೀಲ ಪ್ರದೇಶವಾಗಿದೆ. ಬುದ್ಧ, ಬಸವ, ದಾಸರು, ತತ್ವಪದಕಾರgತ್ವೀ ನೆಲದಲ್ಲಿ ಪ್ರೀತಿಯನ್ನುಧಾರೆಯೆರೆಯುತ್ತ ಬಂದಿದ್ದಾರೆ. ಇಂತಹ ಸೌಹಾರ್ದ ಪರಂಪರೆ ಅಷ್ಟೇ ಉಳಿದರೆ ಪರಂಪರೆಗೆಅರ್ಥ ಬರುವುದಿಲ್ಲ. ಈ ನೆಲದಲ್ಲಿಕಾವ್ಯ ಪ್ರಯೋಗಏನೆಲ್ಲಆಗುತ್ತಿದೆ.ಆದರೆ ಮನುಷ್ಯ ಸಂಬಂಧ ಮರೆಯಾಗುತ್ತಿದೆ.ಬರಹ ಬದುಕಿಗೆಆಧಾರವಾಗಬೇಕು.ಪರಸ್ಪರ ಪ್ರೀತಿ ವಿಶ್ವಾದಿಂದ ಬದುಕುವಂತಾಗಬೇಕುಎಂದು ಹೇಳಿದರು.

ಸಾರ್ವಜನಿಕಗ್ರಂಥಾಲಯ ಇಲಾಖೆ ನಿದೇರ್ಶಕಡಾ.ಸತೀಶಕುಮಾರ ಹೊಸಮನಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಕಲಬುರಗಿರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು.ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತಾವಿಕ ಮಾತನಾಡಿದರು.ಕನ್ನಡಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಸ್ವಾಗತಿಸಿದರು.ಸಂಧ್ಯಾ ಭಟ್ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here