ಬಸವಕಲ್ಯಾಣದಲ್ಲಿ ಪರುಷ ಕಟ್ಟೆ ಕಟ್ಟಡ ಕಾಮಗಾರಿ ನಡೆದಿದ್ದು, ಇನ್ನು 4 ತಿಂಗಳಯೊಳಗಾಗಿ ಕಟ್ಟಡ ಪೂರ್ಣಗೊಳ್ಳಲಿದೆ. ಜತ್ತಿ ಅವರು ಮೈಗೂಡಿಸಿಕೊಂಡ ಬಸವ ತತ್ವ, ವಿಚಾರ, ಆಚಾರ ಸ್ಮರಿಸುವಂತಹದ್ಧು. ಮುಂದಿನ ಐದು ವರ್ಷಗಳಲ್ಲಿ 25 ಲಕ್ಷ ಬಸವಾಭಿಮಾನಿಗಳು ಬಸವಕಲ್ಯಾಣಕ್ಕೆ ಕರೆತರುವ ಗುರಿ ಇಟ್ಟುಕೊಳ್ಳಲಾಗಿದೆ. -ಬಸವರಾಜ್ ಪಾಟೀಲ್ ಸೇಡಂ, ರಾಜ್ಯಸಭೆ ಮಾಜಿ ಸದಸ್ಯ
ಕಲಬುರಗಿ: ಹಳ್ಳಿಗಾಡಿನ ಕೃಷಿ ಕುಟುಂಬದಲ್ಲಿ ಹುಟ್ಟಿದ ಹುಡುಗನೊಬ್ಬ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದಗೇರುವುದು ಸಣ್ಣ ಮಾತಲ್ಲ. ಆದರೆ ಬಿ.ಡಿ. ಜತ್ತಿ ಅಂತಹ ಮೇರು ಸಾಧನೆ ಮಾಡಿದ್ದರು ಎಂದು ಬೆಂಗಳೂರಿನ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಅನುಭವ ಮಂಟಪದಲ್ಲಿ ಬಸವ ಸಮಿತಿ, ಡಾ. ಬಿ.ಡಿ. ಜತ್ತಿ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಆಶ್ರಯದಲ್ಲಿ ಶನಿವಾರ ಸಂಜೆ ನಡೆದ ಡಾ. ಬಿ.ಡಿ. ಜತ್ತಿಯವರ 110ನೇ ಜನ್ಮದಿನೋತ್ಸವ ಅಂಗವಾಗಿ ಸಂಸ್ಥಾಪನಾ ದಿನಾಚರಣೆ, ಆನ್‍ಲೈನ್ ಅರಿವಿನ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ಬಸವತತ್ವಾಧಾರಿತ ಆಡಳಿತ ಮತ್ತು ಬದುಕು ನಡೆಸಿದ ಜತ್ತಿ ಅವರು ನನಗೆ ನಾನೆ ಮಾದರಿಯಾಗಿದ್ದರು ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ರಾಜ್ಯ ಸರ್ಕಾರದಿಂದಲೇ ಬಿ.ಡಿ. ಜತ್ತಿ ಜಯಂತಿ ಘೋಷಣೆ ಆಗಿ ಅನುಷ್ಠಾನಕ್ಕೆ ಬರಬೇಕು. ಬಸವಕಲ್ಯಾಣದಲ್ಲಿ ಜತ್ತಿ ಸಂಶೋಧನಾ ಕೇಂದ್ರ ಆರಂಭಿಸಬೇಕು. ಆದರೆ ಇಲ್ಲಿವರೆಗೆ ಆಳಿದ ಸರ್ಕಾರಗಳು ನಿರ್ಲಕ್ಷ್ಯಿಸಿರುವುದು ಖೇದದ ಸಂಗತಿ ಎಂದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ್ ಪಾಟೀಲ್ ಸೇಡಂ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಮುಖರಾದ ಡಾ. ಜಯಶ್ರೀ ದಂಡೆ, ಅಲ್ಲಮಪ್ರಭು ಖೂಬಾ, ರಾಜೇಂದ್ರ ಖೂಬಾ, ಸಂಗಮನಾಥ ರೇವತಗಾಂವ್, ಡಾ. ಶಿವರಂಜನ ಸತ್ಯೆಂಪೇಟೆ, ಸುರೇಶ ಬಡಿಗೇರ, ಜಯತೀರ್ಥ ಪಾಟೀಲ, ಬಿ.ವಿ. ಚಕ್ರವರ್ತಿ, ದೇವಿಂದ್ರ ಆವಂಟಿ ವೇದಿಕೆಯಲ್ಲಿದ್ದರು. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ವಂದಿಸಿದರು.