ಸುರಪುರ:ತಾಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಸಾರಿಗೆ ಬಸ್‍ಗಳ ನಿಲ್ಲಿಸುವಂತೆ ಆಗ್ರಹಿಸಿ ನಗರದ ಬಸ್ ಡಿಪೋ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಮಾತನಾಡಿ,ಕವಡಿಮಟ್ಟಿ ಗ್ರಾಮವು ಬೀದರ ಬೆಂಗಳೂರು ಹೆದ್ದಾರಿಯಲ್ಲಿದ್ದು ನಿತ್ಯವು ಅನೇಕ ಬಸ್‍ಗಳು ಗ್ರಾಮದ ಮೂಲಕ ಹಾದು ಹೋಗುತ್ತವೆ,ಆದರೆ ಯಾವುದೇ ಬಸ್‍ಗಳು ಗ್ರಾಮದಲ್ಲಿ ನಿಲ್ಲಿಸದಿರುವುದರಿಂದ ನಿತ್ಯವು ಗ್ರಾಮದಿಂದ ನಗರಕ್ಕೆ ಶಾಲಾ ಕಾಲೇಜಿಗೆ ಹೋಗಲು ತೀವ್ರ ತೊಂದರೆಪಡುವಂತಾಗಿದೆ,ಅಲ್ಲದೆ ಗ್ರಾಮದ ಜನರು ಸುರಪುರ ಮತ್ತಿತರೆ ಕಡೆಗಳಿಗೆ ಹೋಗಲು ಖಾಸಗಿ ವಾಹನಗಳನ್ನೆ ಅನುಸರಿಸುವಂತಾಗಿದೆ,ವಿದ್ಯಾರ್ಥಿಗಳು ನಿತ್ಯವು ಶಾಲಾ ಕಾಲೇಜಿನ ತರಗತಿಗಳಿಗೆ ತಡವಾಗಿ ಹೋಗುವದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆಯಲ್ಲದೆ,ಹಾಜರಾತಿ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಕ್ಷೆಯನ್ನು ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.ಆದ್ದರಿಂದ ಕೂಡಲೇ ಎಲ್ಲಾ ವೇಗಧೂತ ಬಸ್‍ಗಳು ಕವಡಿಮಟ್ಟಿ ಗ್ರಾಮಕ್ಕೆ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾಮದ ಬಳಿಯಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಘಟಕ ವ್ಯವಸ್ಥಾಪಕರಿಗೆ ಬರೆದ ಮನವಿಯನ್ನು ಘಟಕದ ಸಿಬ್ಬಂದಿಗಳ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಗೋವಿಂದಪ್ಪ,ಅಂಬ್ರೇಶ,ಮಾನಪ್ಪ ಅಳೇರ್,ವಿರೇಶ,ತಾತಾ ದೊಡ್ಡಮನಿ,ಈಶ,ರಾಜೇಂದ್ರ ಕವಡಿಮಟ್ಟಿ,ರಾಜು ಬಡಿಗೇರ,ಬಲಭೀಮ ಕವಡಿಮಟ್ಟಿ,ಮಂಜುನಾಥ ಕವಡಿಮಟ್ಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.