ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಮಲ್ಲಿಕಾರ್ಜುನರೆಡ್ಡಿ

0
20

ಸುರಪುರ: ಯುವ ಕಲಾವಿದರಿಗೆ ಹೊಸ ಪ್ರತಿಭೆಗಳಿಗೆ ವೇದಿಕೆ ಹಾಗೂ ಪ್ರೋತ್ಸಾಹ ಅತ್ಯಂತ ಅಗತ್ಯವಾಗಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಯಾದಗಿರಿ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಸಹಯೋಗದೊಂದಿಗೆ ರಂಗಂಪೇಟೆಯ ಬಸವಪ್ರಭು ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಇಂದು ಆಯೋಜಿಸಿದ್ದ ಜಾನಪದ ದರ್ಶನ್ ಮಾಲಿಕೆ-4 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ನಮ್ಮ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ಕಲಾವಿದರದ್ದು ಅವಕಾಶ ಮತ್ತು ವೇದಿಕೆಗಳ ಕೊರತೆಯಿಂದ ಪ್ರತಿಭೆ ಅನಾವರಣಗೊಳ್ಳುತ್ತಿಲ್ಲ, ಆ ದಿಶೆಯಲ್ಲಿ ಇಂತಹ ವೇದಿಕೆ ಸಹಕಾರಿಮಯಾಗಲಿದೆ ಎಂದರು.

Contact Your\'s Advertisement; 9902492681

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಪ್ರತಿವಾರ ಹೊಸ ಪ್ರತಿಭೆಗಳನ್ನು ಕರೆಯಿಸಿ ಅವರ ಧ್ವನಿ ದಾಖಲಿಕರಣಗೊಳಿಸುವ ಜೊತೆಗೆ ಅವರ ಸಂದರ್ಶನ ಹಾಗೂ ಆ ಕಲೆಯ ಕ್ಷೇತ್ರಕಾರ್ಯ ನಡೆಸಿಕೊಂಡು ಮುಂದಿನ ದಿನಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಹೊಂದಿದ್ದೇವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಗುರು ಸೇವಾ ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪೂರ. ಯುವ ಮುಖಂಡ ರಾಮನಗೌಡ ಪಾಟೀಲ ಅಗತಿರ್ಥ, ಪಾಲ್ಗೊಂಡಿದ್ದರು, ವಾರದ ಅತಿಥಿಗಳಾಗಿ ಕಕ್ಕೇರದ ಉದಯೋನ್ಮುಖ ಗಾಯಕರಾದ ಎಂ.ಡಿ ಸಮೀರ್ ಹಾಗೂ ನಂದು ಕಕ್ಕೇರಿ ಅನೇಕ ಗೀತೆಗಳನ್ನು ಪ್ರಸ್ತುತಪಡಿಸಿದರು, ಹಣಮಂತಿ ಮಾಲಗತ್ತಿ ಪ್ರಾರ್ಥಿಸಿದರು, ಸಲೀಂ ಪಾಷಾ ನಿರೂಪಿಸಿದರು, ಬಸವನಗೌಡ ಸೂಗುರ ಸ್ವಾಗತಿಸಿದರು ,ಅಖಿಲ ರಂಗಂಪೇಟೆ ವಂದಿಸಿದರು. ಪ್ರಮುಖರಾದ ಪ್ರವೀಣ ಜಕಾತಿ,ಸಿದ್ದಪ್ರಸಾದ ಪಾಟೀಲ, ಜಗನ್ನಾಥ ಸಜ್ಜನ್ ,ರೇಣುಕಾ ನಾಯಕ, ಸೌಭಾಗ್ಯ ಸುರಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here