ನಾಳೆಯಿಂದ ಮೂರುದಿನ 21ನೇ ಕಲ್ಯಾಣ ಪರ್ವ ಕಾರ್ಯಕ್ರಮ

0
25

ಕಲಬುರಗಿ: ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿಅಂದುಕಲ್ಯಾಣದಲ್ಲಿಗಣ ಪರ್ವಗಳು ನಡೆಯುತ್ತಿದ್ದವು. ಮತ್ತೆ 21ನೇ ಶತಮಾನದಲ್ಲಿ ಕಲ್ಯಾಣ ಪರ್ವದ ಮೂಲಕ ಗಣ ಪರ್ವಗಳು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಲಿಂ. ಮಾತಾಜಿಯ ನೇತೃತ್ವದಲ್ಲಿ ಪ್ರಾರಂಭವಾಗಿವೆ. ಮಾತಾಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ಅನೇಕ ಚಟುವಟಿಕೆಗಳು ಸಧ್ಯ ನಿತ್ಯ ನಿರಂತರವಾಗಿ ಬಸವ ಧರ್ಮ ಪೀಠದಲ್ಲಿ ನಡೆಯುತ್ತಿವೆ. ಈಗ ಡಾ. ಗಂಗಾ ಮಾತಾಜಿಯವರಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಸಾಗಿ ಬರಲಿದೆ. ಇದರಒಂದು ಭಾಗವೇಕಲ್ಯಾಣ ಪರ್ವಕಾರ್ಯಕ್ರಮ. ಇದೇಅಕ್ಟೋಬರ್ 8, 9, 10 ಈ ಮೂರು ದಿವಸಗಳ ಕಾಲ ಅತ್ಯಂತ ಶಿಸ್ತು ಬದ್ಧ, ಅರ್ಥಪೂರ್ಣ, ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನ ನೆಲೆಯಲ್ಲಿ ಕಾರ್ಯಕ್ರಮಗಳು ಜರುಗಲಿವೆ ಎಂದುರಾಷ್ಟ್ರೀಯ ಬಸವ ದಳ ಜಿಲ್ಲಾಧ್ಯಕ್ಷಆರ್.ಜಿ. ಶೆಟಗಾರ ಹಾಗೂ ರವೀಂದ್ರ ಶಾಬದಿ ತಿಳಿಸಿದರು.

ಕಲ್ಯಾಣ ಪರ್ವಕ್ಕೆಕರ್ನಾಟಕ, ತೆಲಂಗಾಣ ಮಹಾರಾಷ್ಟ್ರ, ತಮಿಳುನಾಡು, ಗೋವಾ ಮೊದಲಾದ ಭಾಗಗಳಿಂದ ಸಾವಿರಾರು ಶರಣ ಬಂಧುಗಳು ಭಾವಹಿಸಲಿದ್ದಾರೆ. ಈ ಮೂರು ದಿನಗಳ ಕಾಲ ಯೋಗ , ಇಷ್ಟಲಿಂಗ ಪೂಜೆ, ಪ್ರಾರ್ಥನೆ, ಶರಣ ಸ್ಮರಣೆ, ಧರ್ಮಚಿಂತನೆ, ವಿಚಾರ ಗೋಷ್ಠಿ, ವಚನ ಸಂಗೀತ, ವಚನ ನೃತ್ಯ, ಪೀಠಾರೋಹಣ, ಪಥ ಸಂಚಲನ ಮುಂತಾದಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಅ. 8ರಂದು ಬೆಳಗ್ಗೆ 6 ಗಂಟೆಗೆ ಸಾಮೂಹಿಕ ಇಷ್ಟ ಲಿಂಗಾರ್ಚನೆಜರುಗುವುದು. 10.30ಕ್ಕೆ ಧರ್ಮಚಿಂತನ ಗೋಷ್ಠಿ ಜರುಗಲಿದೆ. ಡಾ. ಮಾತೆಗಂಗಾದೇವಿ, ಡಾ. ಅಲ್ಲಮಪ್ರಭು ಸ್ವಾಮೀಜಿ, ಜಗದ್ಗುರು ಬಸವಕುಮಾರ ಸ್ವಾಮೀಜಿ, ಹುಲಸೂರುಡಾ. ವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯಸಭೆ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಬಸವ ಗುರುಪೂಜೆ ನೆರವೇರಿಸುವರು. ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಧ್ವಜಾರೋಹಣ ನೆರವೇರಿಸಲಿದ್ದಾರೆಡಾ. ಸೋಮನಾಥ ಯಾಳವಾರ ಅನುಭಾವ ನೀಡಲಿದ್ದಾರೆ. ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ಮಲ್ಲಿಕಾರ್ಜುನ ಖೂಬಾ, ಜಿಪಂ ಮಾಜಿ ಸದಸ್ಯಅರುಣಕುಮಾರ ಎಂ.ವೈ. ಪಾಟೀಲ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆಎಂದರು.

ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಹಾ ಜಗ್ದಗುರುಡಾ. ಮಾತೆಗಂಗಾದೇವಿ, ಅನುಭವ ಮಂಟಪಅಧ್ಯಕ್ಷಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡಡಾ. ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಅ.9ರಂದು ಭಾನುವಾರ ಬೆಳಗ್ಗೆ 11 ಗಂಟೆಗೆಉದ್ಘಾಟನಾ ಸಮಾರಮಭಜರುಗಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಗಾಟಿಸಲಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ಶರಣು ಸಲಗರಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿಡಾ. ಟಿ.ಆರ್. ಚಂದ್ರಶೇಖರಅವರುಕಲ್ಯಾಣ ಮಾನವೀಯತೆಯ ಪುಣ್ಯಕ್ಷೇತ್ರ ವಿಷಯಕುರಿತುಉಪನ್ಯಾಸ ನೀಡಲಿದ್ದಾರೆ. ರಾಷ್ಟ್ರೀಯ ಬಸವ ದಳ ಅಧ್ಯಕ್ಷ ಬಸವರಾಜಧನ್ನೂರ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಸಚಿವ ಪ್ರಭುಚವ್ಹಾಣ, ಸಬಾಪತಿರಘುನಾಥ ಮಲ್ಕಾಪುರೆ, ಸಂಸದಡಾ. ಉಮೇಶ ಜಾಧವ, ಶಾಸಕ ಮಾಜಿ ಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದಅಪ್ಪುಗೌಡ, ಬಿ.ಜಿ. ಪಾಟೀಲ. ಶಸೀಲ್ ಜಿ. ನಮೋಶಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಎಂದು ಹೇಳಿದರು.

ಮಹಿಳಾ ಗೋಷ್ಠಿ, ರಾಷ್ಟ್ರೀಯ ಬಸವಧಳ ಅಧಿವೇಷನ, ಶರಣರ ಸ್ಮರಣೆ, ಸಮುದಾಯ ಪ್ರಾರ್ಥನೆ, ವೈಚಾರಿಕಚಿಂತನ ಗೋಷ್ಠಿ ನಡೆಯಲಿವೆ. ಜ್ಞಾನದಾಸೋಹದೊಡನೆಅನ್ನದಾಸೋಹವನ್ನು ಸಹ ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ. ಅಲ್ಲಮಪ್ರಭು ಪೀಠಾರೋಹಣಕಾರ್ಯಕ್ರಮ, ಮತ್ತು ಸಮಾರೋಪ ಸಮಾರಂಭಜರುಗಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರುಆಗಮಿಸುವಂತೆಕೋರಿದರು. ಆರ್.ಕೆ. ಹೆಗ್ಗಣೆ, ಶಾಂತಪ್ಪ ಪಾಟೀಲ, ಬಸವರಾಜಧೂಲಾಗುಂಡಿ, ಹಣಮಂತರಾವ ಪಾಟೀಲ ಕುಸನೂರಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here