ಕಲಬುರಗಿ: ಪ್ರಾದೇಶೀಕ ಅರಣ್ಯಇಲಾಖೆಯಲ್ಲಿ 32 ಕೋಟಿರೂ. ಅವ್ಯವಹಾರ ನಡೆದಿದೆಎಂದು 2013ರಲ್ಲಿ ಲೋಕಾಯುಕ್ತರಿಗೆದೂರು ನೀಡಲಾಗಿ ಈ ಬಗ್ಗೆ ನಾಗರಿಕ ಸಮಿತಿ ವರದಿ ಕೂಡ ಸಲ್ಲಿಸಿತ್ತು.ಆದರೆ ಲೋಕಾಯುಕ್ತಜಿಲ್ಲಾ ಪೊಲೀಸ್ ಘಟಕಗಳಿಗೆ ಪೊಲೀಸ್‍ಠಾಣೆಯ ಮಾನ್ಯತೆ ಹಿಂಪಡೆದ ನಿಟ್ಟಿನಲ್ಲಿಯಾವುದೇಕ್ರಮ ಕೈಗೊಳ್ಳು ಬರುವುದಿಲ್ಲ ಎಂದುದೂರನ್ನುಅಲ್ಲಿಗೆ ಮುಕ್ತಾಯಗೊಳಿಸಿದ್ದರು.ಈಗ ಹೊಸದಾಗಿ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಈ ದೂರನ್ನು ಮತ್ತೆ ಪರಿಶೀಲಿಸುವಂತೆ ಹೈ.ಕ. ಹೋರಾಟ ಸಮಿತಿಅಧ್ಯಕ್ಷಡಾ. ರಾಜು ಕುಳಗೇರಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಶೇ.33ರಷ್ಟು ಅರಣ್ಯ ಇಲಾಖೆ ಇರಬೇಕು.ಆದರೆ ಸದ್ಯ ಶೇ. 3.01 ಇದೆ. ಈವರೆಗೆಅರಣ್ಯ ಹೆಚ್ಚಳ ಆಗಿಲ್ಲ. ಹಾಗಾದರೆ 33 ಕೋಟಿರೂ.ಎಲ್ಲಿಗೆ ಹೋಯಿತುಎಂದು ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಸಲ್ಲಿಸಲಾಗಿತ್ತು.ರಸ್ತೆ ಬದಿಯಲ್ಲಿಗಿಡ ಹಚ್ಚುವುದನ್ನು ಸ್ವತಃ ನಾವೇ ಪರಿಶೀಲಿಸಲಾಗಿ ಶೇ.70ರಷ್ಟು ಗಿಡ ಮರಗಳಿಲ್ಲ ಎಂದುದೂರಿದರು.ಈ ಕುರಿತು ಲೋಕಾಯುಕ್ತರಿಗೆ ಸಮಗ್ರ ಮಾಹಿತಿ ನೀಡಲಾಗಿತ್ತು.ಅದರಂತೆ ವರದಿಯಲ್ಲಿಕೂಡಅವ್ಯವವಹಾರ ನಡೆದಿರುವ ಬಗ್ಗೆ ತಿಳಿದು ಬಂದಿತ್ತುಎಂದರು.
ಸದ್ಯ ಉಚ್ಛ ನ್ಯಾಯಾಲಯ ಮತ್ತು ಸರ್ಕಾರ ಲೋಕಾಯುಕ್ತಕ್ಕೆಎಲ್ಲ ಪ್ರಮಾಣದ ಪರಮಾಧಿಕಾರ ನೀಡಿ ಮರು ಸ್ಥಾಪನೆ ಮಾಡಿರುವುದರಿಂದಅವ್ಯವಹಾರದತನಿಖೆಯನ್ನು ಪುನಃ ಪ್ರಾರಂಭಿಸಿ ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಮಲ್ಲಿನಾಥ ಶಿವರಾಯ ಚಿಲ್ಲಾಇದ್ದರು.