ಕಲಬುರಗಿ: ಮಿಲಾದ್-ಉನ್-ನಬಿ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನ) ಮುನ್ನಾದಿನದಂದು ಅಕ್ಟೋಬರ್ 9 ರಂದು ಕಲಬುರಗಿ ನಗರದ ಸಂಗಟರಾಶ್ವಾಡಿ ಜಿಡಿಎ ಲೇಔಟ್ನಲ್ಲಿರುವ ಹಿದಾಯತ್ ಸೆಂಟರ್ನಲ್ಲಿ ಒಂದು ದಿನದ ಇಸ್ಲಾಮಿಕ್ ಕಲಾ ಪ್ರದರ್ಶನವನ್ನು ಆಯೋಜಿಸಲಾಗಿದೆ. ರಾಜ್ಯದಾದ್ಯಂತ ಸುಮಾರು 24 ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ.
ಶೇಖ್ ಸಿರಾಜುದ್ದೀನ್ ಜುನೈದಿ ದರ್ಗಾ ಸಜ್ಜಾದ ನಶೀನ್ ಮುಹಮ್ಮದ್ ಅಫ್ಜಲುದ್ದೀನ್ ಜುನೈದಿ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ಕಲಾವಿದ ಡಾ.ಎ.ಎಸ್.ಪಾಟೀಲ, ಸಾಮಾಜಿಕ ಕಾರ್ಯಕರ್ತ ಅಲ್ತಾಫ್ ಇನಾಮದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕೂನ್ಹಿ ಮಂಗಳೂರು ಉಪನ್ಯಾಸ ನೀಡಲಿದ್ದಾರೆ. ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮಿನಾಕ್ಷಿ ಬಾಳಿ ಅಧ್ಯಕ್ಷತೆ ವಹಿಸುವರು.
ಪ್ರದರ್ಶನದ ಸಂಚಾಲಕ ಖ್ಯಾತ ಕಲಾವಿದ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಮಾತನಾಡಿ, ಸ್ಮಾರಕಗಳು, ಕ್ಯಾಲಿಗ್ರಫಿ, ಸಾಮಾಜಿಕ-ಸಾಂಸ್ಕøತಿಕ ಜಾಗೃತಿ ಮೂಡಿಸುವ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ನಗರದಲ್ಲಿ ಎರಡನೇ ಬಾರಿಗೆ ಇಂತಹ ಪ್ರದರ್ಶನ ನಡೆಯುತ್ತಿದೆ ಎಂದರು.
ಭಾಗವಹಿಸುವ ಕಲಾವಿದರು: ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ಸುಬ್ಬಯ್ಯ ನೀಲಾ, ರಾಜಶೇಖರ್ ಎಸ್, ವಾಜಿದ್ ಸಾಜಿದ್, ಟಿ ದೇವೇಂದ್ರ, ಹಾಜಿ ಮಲಾಂಗ್, ರೆಹಮಾನ್ ಪಟೇಲ್, ಮೊಹಮ್ಮದ್ ಸೈಯದ್, ಶಾಹೆದ್ ಪಾμÁ, ಶೇಕ್ ಅಹ್ಸಾನ್, ಹಜರತ್ ಅಲಿ, ಸಲೀಮುದ್ದೀನ್, ಶಾಫಿ ಮಶಲ್ಕರ್, ಮೊಹಮ್ಮದ್ ಜಲೀಲ್, ಮೊಹಮ್ಮದ್ ರಯೀಸ್, ಮೊಹಮ್ಮದ್ ರಯೀಸ್, ಜಲಜಾಕ್ಷಿ ಕುಲಕರ್ಣಿ, ಉಜ್ವಲಾ ಪಾಟೀಲ, ಮಹಮ್ಮದ್ ಮುಸ್ತಫಾ, ಕೆಹಕಶನ್ ನಜನೀನ್, ಶಾಹೀನ್ ಫಾತಿಮಾ, ಸಲ್ಮಾ, ಲಕ್ಷ್ಮೀ ಪೊದ್ದಾರ್ ಮತ್ತು ಕವಿತಾ ಕಟ್ಟೆ ಈ ಸಂದರ್ಭದಲ್ಲಿ ತಮ್ಮ ಕಲಾಕೃತಿಗಳೊಂದಿಗೆ ಭಾಗವಹಿಸಲಿದ್ದಾರೆ.