ಕಲಬುರಗಿ: ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಕಲಬುರಗಿ ಚಾಣಕ್ಯ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನೂತನವಾಗಿ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಹಾಗೂ ಉಪಾಧ್ಯಕ್ಷರಾಗಿ ಪ್ರಭುಲಿಂಗ ನಿಲೂರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಂಜುನಾಥ ಸಿರಗಾಪೂರ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಸಂಘದ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ತಲಾ ಒಂದೊಂದು ನಾಮ ಪತ್ರ ಸಲ್ಲಿಕೆಯಾಗಿದ್ದವು.ಜೊತೆಗೆ 10 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಮಹಾದೇವಪ್ಪ ಹೆಚ್.ಮಾಲಿಪಾಟೀಲ, ಸಂಜೀವಕುಮಾರ ಕರಿಕಲ್,ಶಿವರಾಜ ಜೇಮಶೆಟ್ಟಿ,ಪದಮಗುಂಡ ಕಣಮಸ,ಜಯಸಿಂಗ ಠಾಕೂರ್, ಸೂರ್ಯಕಾಂತ ಸುಜ್ಯಾತ,ಜಗದೇವಪ್ಪಾ ಕೆ.ಗೋಳಾ, ಶ್ರೀಮತಿ ಪೂಜಾ ಉಮೇಶ್ ಬಿರಬಿಟ್ಟಿ, ಶ್ರೀಮತಿ ರೇಷ್ಮಾ ಮಂಜುನಾಥ ಸಿರಗಾಪೂರ ಹಾಗೂ ಶ್ರೀಮತಿ ಸಾವಿತ್ರಿ ಈರಣ್ಣ ತಲೆಕೋಣಿ ಇವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.