ಕಲಬುರಗಿ: ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿ ಆಸ್ಪತ್ರೆಯ ವತಿಯಿಂದ ನಾಳೆ ವಿಶ್ವ ಟ್ರಾಮಾ ಡೇ ಅಂಗವಾಗಿ ಅಪಘಾತಗಳ ಕುರಿತು ಜಾಗೃತಿ ಜಾಥ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ಡಾ. ಫಾರೂಕ್ ಮನ್ನೂರ ತಿಳಿಸಿದ್ದಾರೆ.
ಬೆಳ್ಳಿಗೆ ೯ ಗಂಟೆಗೆ ರಿಂಗ್ ರಸ್ತೆಯಲ್ಲಿರುವ ಮನ್ನೂರ ಆಸ್ಪತ್ರೆಯಿಂದ ಖರ್ಗೆ ವೃತದಿಂದ, ಅನ್ನಪೂರ್ಣ ಕ್ರಾಸ್ ಮಾರ್ಗವಾಗಿ ಜಗತವೃತದ ವರೆಗೆ ಅಪಘಾತದ ಕುರಿತು ಜಾಗೃತಿ ಜಾಥಾ ಹಾಗೂ ಕಲಾ ತಂಡದಿAದ ಬಿದಿ ನಾಟಕ ಆಯೋಜಿಸಲಾಗಿದೆ ನಂತರ ಜಗತವೃತದಲ್ಲಿ ಟ್ರಾಫಿಕ ಪೋಲಿಸ್‌ರಿಗೆ ಹೆಲ್ಮೆಟ್ ವಿತರಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೋಲಿಸ್ ಆಯುಕ್ತ ಎನ್. ರವಿ ರವಿಕುಮಾರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿಸಿಪಿ ಆಡುರು ಶ್ರೀನಿವಾಸಲು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ ರಾಜಶೇಖರ ಮಲಿ, ಎ.ಸಿ.ಪಿ ಸುಧಾ, ಜಾಕೀರ್ ಇನಾಂದಾರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.