ಕಲಬುರಗಿ: ಬಿಸಿಯೂಟ ನೀಡುವವರೆಗೆ ಉಪವಾಸ ಹಾಕುತ್ತಿರುವ ಸರಕಾರದ ಕ್ರಮ ಖಂಡನೀಯವಾಗಿದೆ ಎಂದು ಜಿಲ್ಲಾ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪ್ರಭುದೇವ ಯಳಸಂಗಿ ಹೇಳಿದರು.
ಕಮಲಾಪುರ ನಗರದ ಸರಕಾರಿ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ತಾಲ್ಲೂಕ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ಸರಕಾರವು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಸಮಯಕ್ಕೆ ಸರಿಯಾಗಿ ವೇತನ ಕೊಡದೆ ಕಾರ್ಮಿಕರ ಕುಟುಂಬ ಬೀದಿ ಪಾಲಾಗುತ್ತಿರುವದು ವಿಷಾದನೀಯ ಸಂಗತಿ ಎಂದು ಮಾರ್ಮಿಕವಾಗಿ ನುಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ತಾಲ್ಲೂಕಾ ಅಧ್ಯಕ್ಷರಾದ ಮಹಾದೇವಿ ಜಾಧವ ಮಾತನಾಡಿ ಬಿಸಿಯೂಟ ತಯಾರಕರಿಗೆ ಸರಕಾರ ಕನಿಷ್ಠ ವೇತನವೂ ಸರಿಯಾದ ಸಮಯಕ್ಕೆ ನೀಡದೆ, ಸಂಕಷ್ಟದಲ್ಲಿದ್ದ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ಮಾಡುತ್ತಿಲ್ಲ ಎಂದು ಹೇಳಿದರು.
ವೇತನ ಸೇರಿದಂತೆ ಇತರ ಬೇಡಿಕೆಗಳು ಈಡೇರಿಸದಿದ್ದರೆ ಜಿಲ್ಲಾ ಜಿಲ್ಲಾ ಪಂಚಾಯತ ಕಾರ್ಯಾಲಯ ಮುತ್ತಿಗೆ ಹಾಕಲಾಗುವುದು ಎಂದು ಸಮಾವೇಶದಲ್ಲಿ ನಿರ್ಣಯಿ ಸಲಾಯಿತು.ಮುಖ್ಯ ಅತಿಥಿಗಳಾಗಿ ಎಐಟಿಯುಸಿ ಕಾರ್ಯದರ್ಶಿ ನ್ಯಾಯವಾದಿ ಹಣಮಂತರಾಯ ಅಟ್ಟೂರ,ಕಲಬುರಗಿ ಜಿಲ್ಲಾ ಕಟ್ಟಡ ಕಾರ್ಮಿಕರ ಉಪಾಧ್ಯಕ್ಷರಾದ ಶಿವಲಿಂಗಮ್ಮ ಲೇಂಗಟಿ ಕರ್,ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ತಾಲ್ಲೂಕು ಕಾರ್ಯದರ್ಶಿಯಾದ ಯಶೋಧಾ ರಾಠೋಡ, ಉಪಾಧ್ಯಕ್ಷರಾದ ಅಂಬಿಕಾ ಸರಡಗಿ ಆಗಮಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಪದ್ಮಾವತಿ ಇಟಿ, ಕಾರ್ಯದರ್ಶಿಯಾಗಿ ಪಾರ್ವತಿ ಜಾಧವ, ಉಪಾಧ್ಯಕ್ಷರಾಗಿ ಕವಿತಾ ಚವ್ಹಾಣ, ಶರಣಮ್ಮ ಸೋನಾರ, ಸಹ ಕಾರ್ಯದರ್ಶಿಗಳಾಗಿ ಅನೀಲಾವತಿ ಮಾಳೆಗಾಂವ, ಖಾಜಾಬಿ ಚಿಮ್ಮನಚೋಡ, ಖಜಾಂಚಿಯಾಗಿ ಅನಿತಾ ಪದ್ಮಾ ಣಿ,ಹಾಗೂ ತಾಲ್ಲೂಕು ಕಾರ್ಯಕಾರಿ ಸದಸ್ಯರಾಗಿ ಬಸಮ್ಮ ಜಾಂತೆ, ಚಲಿತ್ರಾ ನೂಲ್ಕರ್, ಕವಿತಾ ರಾಠೋಡ, ತೇಜಮ್ಮ ಜೀವಣಗಿ ಆಯ್ಕೆಯಾದರು.