ವಾಡಿ: ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷೆಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಕರ್ನಾಟಕ ಇತಿಹಾಸ ತನ್ನದೇ ಆದಂತ ಪ್ರಾಮುಖ್ಯತೆ ಹೊಂದಿದೆ ಎಂದು ಎಸಿಸಿ ವಿದ್ಯುತ್ ಕಂಪನಿಯ ವ್ಯವಸ್ಥಾಪಕ ಸುರೇಶ್ ಶೆಟ್ಟಿ ಅಭಿಪ್ರಾಯ ಪಟ್ಟರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಎಸಿಸಿ ವಿದ್ಯುತ್ ಕಂಪನಿಯಲ್ಲಿ ಕನ್ನಡದ ಕೋಟಿಕಂಠ ಗಾಯನ ಕನ್ನಡ ಭಾಷೆಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಕನ್ನಡ ಗೀತೆಗಳು ಕೇಳುವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ದಿನವನ್ನು ಪ್ರತಿ ವರ್ಷ ನವೆಂಬರ್ 1 ರಂದು ಆಚರಿಸಲಾಗುತ್ತದೆ, 1956 ರಲ್ಲಿ, ಭಾರತದಲ್ಲಿದ್ದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ರಾಜ್ಯವನ್ನು ರಚಿಸಲಾಯಿತು, ಅದಕ್ಕೆ ಕರ್ನಾಟಕ ಎಂದು ಹೆಸರಿಸಲಾಯಿತು.1973 ರಲ್ಲಿ ಕರ್ನಾಟಕ ಏಕೀಕರಣಗೊಂಡಿತು ಎಂದು ಹೇಳಿದರು.
ರವಿ ಕೋಳಕೂರ ಮಾತನಾಡುತ್ತಾ ಕನ್ನಡ ಬೆಳೆಸೋದು ಕನ್ನಡ ಬಳಸುವುದರಲ್ಲಿ ಇದೆ ಮತ್ತು ಹಲವಾರು ಭಾಷೆಗಳನ್ನು ಗೌರವಿಸಬೇಕು ಕನ್ನಡ ಭಾಷೆಯನ್ನು ಪ್ರೀತಿಸಬೇಕು. ಹಾಗೂ ಕರ್ನಾಟಕದಲ್ಲಿ ಸಾಕಷ್ಟು ಜನ ಬೇರೆ ರಾಜ್ಯದಿಂದ ಬಂದಿದ್ದಾರೆ ಇಲ್ಲಿಂದ ಏನಾದರೂ ಜೊತೆಗೆ ತೆಗೆದುಕೊಂಡು ಹೋಗಬೇಕಾದರೆ ಅದು ಕನ್ನಡ ಭಾಷೆಯನ್ನು ಕಲಿತುಕೊಳ್ಳಿ ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಿದ್ಯುತ್ ಕಂಪನಿ ವಿಭಾಗದ ಮುಖ್ಯಸ್ಥರಾದ ಸಮರ್ಪಣ ಧವನ್ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅತಿಥಿಯಾಗಿ ರಮೇಶ್ ಉಡುಪುಡಿ(ಹೆಚ್ ಆರ್ ಮ್ಯಾನೇಜರ್) ಸೂರ್ಯನಾರಾಯಣ (ಸುರಕ್ಷಾ ವಿಭಾಗದ ಮುಖ್ಯಸ್ಥರು) ಪ್ರಾಣೇಶ್ ಜೋಶಿ (ಮ್ಯಾನೇಜರ್) ವೇಣುಗೋಪಾಲ್ ಕುಲಕರ್ಣಿ, ಮನೋರಂಜನ್ ಮಾಲ್, ಧರ್ಮರಾಜ್, ಮಹಮ್ಮದ್ ಶೋಯಬ್, ಶ್ರೀಜೀಬ ಮನ್ನಾ, ನರಸಿಂಹಮೂರ್ತಿ ಪಿಟಾಣಿ, ಸಂಜಯ್ ಸಾರಂಗಿ, ಕೃಷ್ಣ ರಮೇಶ್ ರಾಥೋಡ್, ಗೋಪಾಲ್ ಪವಾರ್, ರಾಕೇಶ್ ಮಿಶ್ರಾ, ಅಮಿತ್ ಮಿಶ್ರಾ, ವೆಂಕಟೇಶ್, ಸದಾನಂದ ಗೌಡ ರಘು ಕೋಲಿ, ಅಯ್ಯಣ್ಣ, ಸಂತೋಷ್ ಕದಂ, ದಶರಥ್ ಚೌಹಾನ್, ಶ್ರೀಕಾಂತ್ ರಾಥೋಡ್, ವೀರೇಶ್ ಗೌಡ ಮೋಹನ್, ಕಿಶನ್, ರಾಜು.ಎಂ ರಾಜ್ ಕುಮಾರ್, ಹಾಗೂ ಇನ್ನಿತರ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.