ಸುರಪುರ:ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಧಮ್ಮ ದೀಪೋತ್ಸವ

0
19

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ದ ವಿಹಾರದಲ್ಲಿ ಟ್ರಸ್ಟ್ ಹಾಗೂ ಬೌದ್ಧ ಅನುಯಾಯಿಗಳ ಕುಟುಂಬಗಳಿಂದ ವತಿಯಿಂದ ಪ್ರಥಮಬಾರಿಗೆ ವಿಶೆಷವಾಗಿ ಧಮ್ಮ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಉಪಾಸಕ ರಾಹುಲ್ ಹುಲಿಮನಿ ತ್ರಿಸರಣ ಪಂಚಶೀಲ ಪಠಣವನ್ನು ಸಾಮೂಹಿಕವಾಗಿ ಪಠಿಸಿ ಮಾತನಾಡಿ, ಗೌತಮ ಸಿದ್ದಾರ್ಥನು ಬುದ್ಧನಾದ ನಂತರ ತನ್ನ ಅನುಯಾಯಿಗಳೊಂದಿಗೆ ಗೃಹ ನಗರ ಕಪಿಲವಸ್ತು ಗೆ ಬಂದಾಗ ಅವರ ಅನುಯಾಯಿಗಳು ಲಕ್ಷದೀಪೋತ್ಸವಗಳಿಂದ ಇಡಿ ರಾಜ್ಯವನ್ನು ದಿಪಗಳಿಂದ ಬೆಳಕಿನಿಂದ ಅಲಂಕಾರಗೊಳಿಸಿದ್ದರು ಅದಕ್ಕೆ ಭಗವಾನ್ ಬುದ್ಧರು ಅತ್ತ ದೀಪ ಭವ ಎಂದು ಕತ್ತಲಿನಿಂದ ಬೆಳಕಿನಡೆ ಎಂದು ಉಪದೇಶಿಸಿದರು ಎಂದು ದೀಪೋತ್ಸವದ ಮಹತ್ವ ತಿಳಿಸಿದರು.

Contact Your\'s Advertisement; 9902492681

ನ್ಯಾಯವಾದಿ ಆದಪ್ಪ ಹೊಸ್ಮನಿ ಮಾತನಾಡಿ, ಬೆಟ್ಟದಲ್ಲಿರುವ ಸುಂದರ ಬುದ್ಧ ವಿಹಾರದಲ್ಲಿ ಇವತ್ತಿನ ಗ್ರಹಣ ಅಂತ ಮೂಡನಂಬಿಕೆಗಳಿಂದ ಹೊರಬಂದು ಮಹಿಳೆಯರು ಮಕ್ಕಳು ಅಜ್ಞಾನದಿಂದ ವಿಜ್ಞಾನಕಡೆ ವಾಲಿರುವದು ಹೆಮ್ಮೆಯ ಸಂಗತಿ ಮತ್ತು ಸಾಮೂಹಿಕವಾಗಿ ಎಲ್ಲ ಕುಟಂಬದ ಸದಸ್ಯರು ದೀಪಗಳನ್ನು ಹಚ್ಚುವದು ಒಂದು ವಿಶೇಷತೆಯಿದೆ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ,ಮುಖಂಡರಾದ ನಾಗಣ್ಣ ಕಲ್ಲದೇವನಹಳ್ಳಿ, ಭಿಮರಾಯ ಸಿಂದಗೇರಿ, ಮಾಳಪ್ಪ ಕಿರದಳ್ಳಿ, ವೆಂಕಟೇಶ್ವರ ಸುರಪುರ, ಮರೆಪ್ಪ ತೇಲ್ಕರ್, ರಾಜು ದೊಡ್ಡಮನಿ, ರಾಜು ಕುಂಬಾರ್ ,ಚಂದಪ್ಪ ಪಂಚಮ್ ಶ್ರಿಮಂತ ಚಲವಾದಿ, ಗುರುಪಾದಪ್ಪ ಹುಲಿಮನಿ, ಸಾಯಬಣ್ನ ದೇವಿಕೇರಾ, ಹಣಮಂತ ತೇಲ್ಕರ್, ಮಂಜು ಹೊಸಮನಿ, ಶರಣು ಹಸನಾಪುರ, ಪರಶು ನಾಟಿಕಾರ್, ಮಂಜುಳಾ ಸುರಪುರ, ಶಿವಮೊಗ್ಗೆಮ್ಮ ಹೊಸಮನಿ, ಶಿಲ್ಪಾ ಹುಲಿಮನಿ, ಸುನಿತಾ ಕಿರದಳ್ಳಿ, ಶೀವಲೀಲಾ ದೇವಿಕೆರಿ, ಶ್ರೀದೇವಿ ಕರಡಕಲ್, ಬಸಮ್ಮ ಹುಲಿಮನಿ ಭಾರತಿ ಸಿಂದಗೇರಿ, ಖುತ್ಬಜಾ ಕ್ರಾಂತಿ ಸೇರಿದಂತೆ ನೂರಾರು ಜನ ಮಹಿಳೆಯರು ಮತ್ತು ಮಕ್ಕಳು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here