ಕಲಬುರಗಿ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಮಿತಿಯ ವತಿಯಿಂದ ಆಳಂದ ಪಟ್ಟಣದ ತಾಲ್ಲೂಕು ಆಡಳಿತ ಸೌಧಧ ಮುಂದೆ ಗುರುವಾರ ” ಹಿಂಸೆ ಮುಕ್ತ ಬದುಕು ಮತ್ತು ಮೂಲ ” ಹಕ್ಕುಗಳಿಗಾಗಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಮಾತನಾಡಿ,ಮಹಿಳೆಯ ಮೇಲೆ ದೌರ್ಜನ್ಯ,ಹಳ್ಳಿಗಳಲ್ಲಿ ಶೌಚಾಲಯ,ದೌರ್ಜನ್ಯ ಕುಟುಂಬಕ್ಕೆ ಪರಿಹಾರ,ಉದ್ಯೋಗ ಖಾರ್ತಿ ಯೋಜನೆ,ಅತ್ಯಾಚಾರದ ಬಗ್ಗೆ ಗೋಡೆ, ಬರಹ ಸೇರಿದಂತೆ ವಿವಿಧ ಬೇಡಿಕೆ ಈಡೆರಿಸುವಂತೆ ಆಗ್ರಹಿಸಿದರು.
ಬಳಿಕ ತಹಶಿಲ್ದಾರ ಯಲ್ಲಪ್ಪ ಸುಬೇದಾರ ಮೂಲಕ ಮನವಿ ಸ್ವೀಕರಿಸಿ ಮಾತನಾಡಿದರ ಅವರು,ಆಳಂದನಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ,ಪೂಜಾ ರಮೇಶ್ಲ್ಲೂ ಲೋಹಾರ,ಅಧ್ಯಕ್ಷೆ,ಮಲ್ಕಮ್ಮ ಜಿಡಗಾ,ಕಾರ್ಯದರ್ಶಿ,ಸುಗಂದಾ ಮಾವಿನಕರ,ಇಂದುಮತಿ,ಲೀಲಾ,ಸುನೀತಾ ಕುಲಸಂಬಿ,ಹಸಿನಾ,ಸಂಗಮ್ಮ,ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಮಹಿಳೆಯರು ಭಾಗವಹಿಸಿದ್ದರು.