ಕಲಬುರಗಿ: ಅಖಿಲ ಭಾರತ ರಾಷ್ಟೀಯ ಕಾಂಗ್ರೆಸ್(ಎಐಸಿಸಿ) ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭಕ್ಕೆ ಜಿಲ್ಲೆಯ ಎಲ್ಲ ಸಂಘಟಿತ ಕಾರ್ಮಿಕರು ಆಗಮಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಕಾರ್ಮಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಅಶೋಕ ಘೂಳಿ ಮನವಿ ಮಾಡಿದರು.
ಕಾಂಗ್ರೆಸ್‍ನ ಅತ್ಯುನ್ನತ ಹುದ್ದೆ ಏರಿರುವ ಖರ್ಗೆ ಅವರು ಕಾರ್ಮಿಕ ಮುಖಂಡರಾಗಿ ರಾಜಕೀಯಕ್ಕೆ ಬಂದವರಾಗಿದ್ದಾರೆ. ಅವರು ಕಳೆದ ಯುಪಿಎ ಸರಕಾರದಲ್ಲಿ ಕೇಂದ್ರದ ಕಾರ್ಮಿಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆ ಕಾರ್ಮಿಕರಿಗೆ ಹಲವು ಅನುಕೂಲ ಮಾಡಿಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಅತಿ ದೊಡ್ಡ ಇಎಸ್‍ಐ ಆಸ್ಪತ್ರೆ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಮಿಕರಿಗೆ ಅವರು ನೀಡಿರುವ ಕೊಡುಗೆಗಳ ನೆನಪಿನಲ್ಲಿಟ್ಟುಕೊಂಡು ನಾವುಗಳು ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಮಿಕ ಮುಖಂಡರಾದ ವಾಮನರಾವ ಕಟ್ಟಿ, ಮೀರಾಜ ಕಲ್ಯಾಣವಾಲಾ, ಚಂದು ಜಾಧವ, ರಾಜಶೇಖರ ಕಲಶೆಟ್ಟಿಘಿ, ಶಿವರಾಜ ಕಾಳಗಿ, ಹುಸೇನ್ ಪಟೇಲ್, ಸೊಹೇಲ್ ಅಹ್ಮದ ಇತರರಿದ್ದರು.