ಕಾರಂಜಾ ಸಂತ್ರಸ್ತರ ಹೋರಾಟಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಒತ್ತಾಯ

0
51

ಬೀದರ್: ನ್ಯಾಯಯುತವಾದ ಬೇಡಿಕೆ ಮುಂದಿಟ್ಟು ಕೊಂಡು  ಸುಮಾರು 163 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕಾರಂಜಾ ಸಂತ್ರಸ್ತರ ಹೋರಾಟಕ್ಕೆ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಲು ಕಲ್ಯಾಣ ಕರ್ನಾಟಕ ಜನಪರ  ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ಸಂತ್ರಸ್ತರಿಗೆ  ನ್ಯಾಯ ನೀಡುವಲ್ಲಿ ಈ ಹಿಂದೆ ವಿಶೇಷ ಆದ್ಯತೆ ನೀಡಿ ಇಚ್ಛಾಶಕ್ತಿ ವ್ಯಕ್ತಪಡಿಸಿದಲ್ಲದೆ  ಅಲ್ಲಿಯ ಬಹುತೇಕ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣಗೊಳಿಸಿ ಕಾವೇರಿ ಕಣಿವೆ ಪ್ರದೇಶದ ರೈತರ ಕನಸು ನನಸು ಮಾಡಿದಂತೆ,ಕೃಷ್ಣಾ ಮತ್ತು ಗೋದಾವರಿ ಜಲಾಶಯದ ಪ್ರದೇಶದ ನೀರಾವರಿ ಯೋಜನೆಗಳು ಇನ್ನು ಪೂರ್ತಿಗೊಳಿಸದೆ  ಸಂತ್ರಸ್ತರಿಗೂ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷತ ಧೋರಣೆ ಅನುಸರಿಸುತ್ತಿವದು ಖಂಡನೀಯ. ಕಳೆದ ನಾಲ್ಕು ದಶಕಗಳಿಂದ ಈ ಅನ್ಯಾಯ ಮಲತಾಯಿ ಧೋರಣೆ ಮುಂದುವರದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಲು ಸಮಿತಿ ಅಗ್ರಹಹಿಸುತ್ತದೆ.

Contact Your\'s Advertisement; 9902492681

ಬೀದರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಕಾರಂಜಾ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅಗ್ರಹಿಸಿ ನಾಳೆ 12 ರಂದು ಸೋಮವಾರ ಬೀದರ ನಗರದ ಕನ್ನಡ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಮಧ್ಯಾಹ್ನ 3ಗಂಟೆಗೆ  ಕರೆದಿರುವ ಎಲ್ಲಾ ಧರ್ಮ ಗುರುಗಳ ಮಠಾದೀಶರ, ಹಾಲಿ ಮಾಜಿ ಜನಪ್ರತಿನಿಧಿಗಳ,ಸಂಘ ಸಂಸ್ಥೆಗಳ ಸಭೆಗೆ ಜನಪರ ಕನ್ನಡಪರ, ದಲಿತ ಹಿಂದುಳಿದ ಅಲ್ಪಸಂಖ್ಯಾತರ, ರೈತ, ಕಾರ್ಮಿಕ  ಯುವ ವಿಧ್ಯಾರ್ಥಿಪರ ಸಂಘಟನೆಗಳು ಭಾಗವಹಿಸಿ ಸಂಘಟಿತ ಹೋರಾಟಕ್ಕೆ ಬೆಂಬಲಿಸಲು ಸಮಿತಿ ಮನವರಿಕೆ ಮಾಡುತ್ತದೆ.

ಬೀದರ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಬೇದ ಮರೆತು  ಸಂಘಟಿತವಾಗಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವದು ಅತಿ ಅವಶ್ಯವಾಗಿದೆ. ನಾಳೆಯ ಬೀದರ ಸಭೆಗೆ ಕಲ್ಯಾಣ ಕರ್ನಾಟಕದ ಎಲ್ಲಾ ಹೋರಾಟಗಾರರು ಬೆಂಬಲಿಸಲು ಸಮಿತಿ ಅಗ್ರಹಹಿಸುತ್ತದೆ.

ಪೂಜ್ಯ ಮಠಾದೀಶರು ಇಂತಹ ರಚನಾತ್ಮಕ ಕಾರ್ಯಕ್ಕೆ ತಮ್ಮ ಆಶೀರ್ವಾದ ನೀಡಿ ಬೆಂಬಲಿಸಿ ಸರ್ಕಾರದ ಕಣ್ಣು ತೆರೆಸಲು ಸಮಿತಿ ವಿನಂತಿಸಿಕೊಳ್ಳುತ್ತದೆ ಅದರಂತೆ ಈ ಮಹತ್ವದ  ಸಭೆಯಲ್ಲಿ  ಕೈಗೊಳ್ಳವ ನಿರ್ಣಯಗಳಿಗೆ ತಮ್ಮ ಸಮಿತಿ ಬದ್ಧತೆಯಿಂದ ಬೆಂಬಲಿಸುವದಾಗಿ ದಸ್ತಿಯವರು ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here