ಮನೂರ ಆಸ್ಪತ್ರೆಗೆ ಎರಡನೇ ವಾರ್ಷಿಕೋತ್ಸವ; ಪತ್ರಕರ್ತರಿಗೆ ಸನ್ಮಾನ

0
27

ಕಲಬುರಗಿ: ಇಲ್ಲಿನ ಗಣೇಶ ನಗರದ ರಿಂಗ್ ರಸ್ತೆಯ ಬಾರೇ ಹಿಲ್ಸ್ನಲ್ಲಿರುವ ಪ್ರತಿಷ್ಠಿತ ಮನೂರ ಮಲ್ಟಿಸ್ಪೆμÁಲಿಟಿ ಆಸ್ಪತ್ರೆಯ ಎರಡನೇ ವಾರ್ಷಿಕೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ರಾಜಕೀಯ ಧುರೀಣರು, ಗಣ್ಯರು, ಸಮಾಜದ ವಿವಿಧ ಸ್ತರದ ಪ್ರಮುಖರು ಆಸ್ಪತ್ರೆಗೆ ಬಂದು ಶುಭ ಕೋರಿ ಹರಿಸಿ ಹಾರೈಸಿದರು.

ಆಸ್ಪತ್ರೆಯಲ್ಲಿನ ಉತ್ಕøಷ್ಟ ಮಟ್ಟದ ಆರೋಗ್ಯ ಸೇವೆ, ಚಿಕಿತ್ಸೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಶ್ಲಾಘಿಸಿದರು. ವಾರ್ಷಿಕೋತ್ಸವಕ್ಕೆ ಬಂದಿದ್ದವರೆಲ್ಲರೂ ಮನೂರ ಆಸ್ಪತ್ರೆ ಸೇವೆಯ ಬಗ್ಗೆ ಕೊಂಡಾಡಿದರು. ಇದೇ ವೇಳೆಗೆ ಆಸ್ಪತ್ರೆಯ ಜವಾನರು ಹಿಡಿದು ಪರಿಣಿತ ವೈದ್ಯರನ್ನು (ವಿವಿಧ ವಿಭಾಗಗಳ ಮುಖ್ಯಸ್ಥರು) ಅತ್ಯುತ್ತಮ ಕೆಲಸಕ್ಕೆ ಪ್ರಶಂಸೆ ಪತ್ರ ನೀಡಿ ಗೌರವಿಸಲಾಯಿತು. ಜೊತೆಗೆ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರನ್ನು ಸನ್ಮಾನಿಸಲಾಯಿತು.

Contact Your\'s Advertisement; 9902492681

ನಗರ ಪೆÇಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲ್ಕಾ ಮಹೇಶ, ಜಿಪಂ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಜಿಲ್ಲಾ ಶಸ್ತ್ರಜ್ಞ ಡಾ. ಅಂಬಾರಾಯ ರುದ್ರವಾಡಿ, ಆರ್‍ಸಿಎಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಕಾಂಗ್ರೆಸ್ ಮುಖಂಡ ಮಕ್ಬುಲ್ ಪಟೇಲ್, ಜೆಡಿಎಸ್ ಮುಖಂಡರಾದ ನಾಸೀರ್ ಹುಸೇನ, ಅಲಿಂ ಇನಾಂದಾರ, ಮಾಜಿ ಎಂಎಲ್‍ಸಿ ಅಲ್ಲಮಪ್ರಭು ಪಾಟೀಲ್, ಬಿಜೆಪಿ ಮುಖಂಡರಾದ ಶಿವಕಾಂತ ಮಹಾಜನ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಬೀಬ್ ಸರಮಸ್ತ, ಜಿಪಂ ಮಾಜಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕಾಂಗ್ರೆಸ್ ಮುಖಂಡ ಆದಿಲ್ ಸುಲೇಮಾನ್, ಮಾಜಿ ಮೇಯರ್ ಸೈಯದ್ ಅಹ್ಮದ್, ಕೆಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್, ಪ್ರಧಾನ ಕಾರ್ಯದರ್ಶಿ ಶರಣು ಪಪ್ಪಾ, ಸಿಎಆರ್ ಘಟಕದ ಡಿವೈಎಸ್ಪಿ ಶರಣಪ್ಪ, ಪೆÇಲೀಸ್ ಇನ್ಸ್ಪೆಕ್ಟರ್‍ಗಳಾದ ಶಿವಾನಂದ ಗಾಣಿಗೇರ, ಪಿ.ಬಿ. ಶಾಂತಿನಾಥ, ಅಮರೇಶ, ವಾಹಿದ್ ಕೋತ್ವಾಲ್, ಸೋಮಲಿಂಗ ಕಿರೇದಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಹಿತೈಷಿಗಳು, ಹೋರಾಟಗಾರರು ಬಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಾ. ಹುಮೇರಾ ಫಾರುಖ ಮನೂರ, ಲ್ಯಾಪೆÇ್ರೀಸ್ಕೋಪಿ ಶಸ್ತ್ರತಜ್ಞ ಡಾ. ಸಾಗರ, ತೀವ್ರ ನಿಗಾ ಘಟಕದ ತಜ್ಞ ಡಾ. ಅನಿಲ್ ಎಸ್.ಕೆ, ಆರ್ಥೊ ಸರ್ಜನ್ ಡಾ. ವಿವೇಕ, ವೀರೇಶ, ನ್ಯೂರೋ ಸರ್ಜರಿ ಡಾ. ಮೀನಾಜ್ ಹರಸೂರ, ತಜ್ಞ ವೈದ್ಯರಾದ ಡಾ. ಅನಿಲ್ ಮಲ್ಲಾರಿ, ಡಾ. ಪವನ ಪಾಟೀಲ್, ಡಾ. ರಾಜು ಮುಲ್ಲಾ, ಡಾ. ಸೌಮ್ಯ ದೇಶಮುಖ, ಪ್ರತಿಭಾ ಶಿಲ್ದಿ, ಡಾ. ಇರ್ಫಾನ ಇನಾಂದಾರ್, ಡಾ. ಮುಸ್ತಾಖ್ ಸೌದಾಗರ್ ಮತ್ತಿತರರು ಸೇರಿ ಅರೆ ವೈದ್ಯರ ತಂಡದವರು ಭಾಗವಹಿಸಿದ್ದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಣೂರ ಆಸ್ಪತ್ರೆಯು ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದು, ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಯೋಗ್ಯ, ಉತ್ಕೃಷ್ಟ ಚಿಕಿತ್ಸೆ, ಆರೋಗ್ಯ ಸೇವೆ ಒದಗಿಸಲು ನಮ್ಮ ಆಸ್ಪತ್ರೆಯ ವೈದ್ಯರ ತಂಡ ಸದಾ ಉತ್ಸುಕರಾಗಿದ್ದಾರೆ. ರೋಗಿಗಳು ಸೊಲ್ಲಾಪುರ, ಪುಣೆ, ಹೈದರಾಬಾದ್, ಬೆಂಗಳೂರಿನಂಥ ದೂರದ ಮಹಾನಗರಗಳಿಗೆ ತೆರಳದಂತೆ ಅತ್ಯಾಧುನಿಕ ತಂತ್ರಜ್ಞಾನ, ಜಾಗತಿಕ ಮಟ್ಟದ ಉತ್ಕೃಷ್ಟ ಆರೋಗ್ಯ ಸೇವೆ ನೀಡಲಾಗುತ್ತಿದೆ. ಎಂಥ ತುರ್ತು ಸಂದರ್ಭದಲ್ಲೂ ರೋಗಿಗಳು ಬಂದರೂ ವಾಸಿ ಮಾಡದೇ ಕಳುಹಿಸಲ್ಲ. ನರರೋಗ, ಅಪಘಾತ, ತುರ್ತು ಚಿಕಿತ್ಸಾ ಘಟಕ ಹೀಗೆ ಎಲ್ಲ ವಿಭಾಗದಲ್ಲಿ ಪರಿಣಿತ ವೈದ್ಯರ ಹಾಗೂ ಅರೆ ವೈದ್ಯರ ತಂಡದ ಸಹಕಾರದಿಂದ ಕೇವಲ ಎರಡು ವರ್ಷದಲ್ಲೆ ಅಲ್ಪ ಸಾಧನೆ ಮಾಡಿದ ತೃಪ್ತಿ ನನಗಿದೆ. ಮುಂದಿನ ದಿನಗಳಲ್ಲಿ ನಮ್ಮ ಆಸ್ಪತ್ರೆ ಮೇಲೆ ಸಾರ್ವಜನಿಕರ ಬೆಂಬಲ, ಆಶೀರ್ವಾದ ಸದಾ ಇರಲಿ. – ಡಾ. ಫಾರುಖ ಅಹ್ಮದ್ ಮಣೂರ, ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ, ಮಣೂರ ಆಸ್ಪತ್ರೆ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here