ಕೆ.ಎಂ.ವಿಶ್ವನಾಥ ಮರತೂರಗೆ ಏಷ್ಯೇಯಾ ಬುಕ್ ಆಫ್ ರೆಕಾರ್ಡ್ ಅವಾರ್ಡ್

0
71

ಕಲಬುರಗಿ: ಜಿಲ್ಲೆಯ ಶಾಹಾಬಾದ್ ತಾಲೂಕಿನ ಮರತೂರ ಗ್ರಾಮದ ಶಿಕ್ಷಣ ತಜ್ಞ ಹಾಗೂ ಯುವ ಬರಹಗಾರರಾದ ಕೆ.ಎಂ.ವಿಶ್ವನಾಥ ಮರತೂರ ಅವರಿಗೆ ಕರ್ನಾಟಕದಲ್ಲಿ ಏಕಕಾಲಕ್ಕೆ ಅತೀ ಹೆಚ್ಚು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಕರ್ನಾಕಟದ ವಿವಿಧ ವಿಭಾಗಗಳಲ್ಲಿ ಒಂದೇ ಬಾರಿಗೆ ಆಯೋಜಿಸಿ ಅನುಷ್ಠಾನಗೊಳಿಸಿದ್ದಕ್ಕೆ ಏಷ್ಯೇಯಾ ಬುಕ್ ಆಫ್ ರೆಕಾರ್ಡ್ ಅವಾರ್ಡ್ ನೀಡಲಾಗಿದೆ.

ಈ ರೆಕಾರ್ಡನ್ನು ಕರ್ನಾಟಕದ ಜುನಿಯರ್ ಚೆಂಬರ್ ಇಂಟರ್‍ನ್ಯಾಷನಲ್ ಕರ್ನಾಟಕ ತಂಡದಿಂದ ಆಯೋಜಿಸಿದ್ದು, ಕರ್ನಾಟಕದ 253 ಶಾಲೆಗಳಲ್ಲಿ 13 ರಿಂದ 18 ವರ್ಷದೊಳಗಿನ ಮಕ್ಕಳಿಗೆ “ಬದುಕಿನಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆ” ಕುರಿತು ತರಬೇತಿ ನೀಡಲಾಗಿದೆ. ಈ ತರಬೇತಿಯು ಮಕ್ಕಳಲ್ಲಿ ಕೌಶಲ್ಯ ಮತ್ತು ವ್ಯಕ್ತಿತ್ವ ಬೆಳವಣಿಗೆ ಹೆಚ್ಚಿಸುವಲ್ಲಿ ಕಾರಣವಾಗಿದ್ದು, ಕಲಬುರಗಿ ಜಿಲ್ಲೆಯಿಂದ ಕೆ.ಎಂ.ವಿಶ್ವನಾಥ ಮರತೂರ ಭಾಗವಹಿಸಿ ಈ ಯಶಸ್ಸು ಪಡೆದಿರುತ್ತಾರೆ. ಇತ್ತೀಚಗೆ ತುಮುಕೂರ ಜಿಲ್ಲೆಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಜೆ.ಸಿ.ಐ.ನ ಪದಾಧಿಕಾರಿಗಳಾದ ನಿರ್ದೇಶಕರಾದ ಜೆ.ಸಿ. ಜನಾರ್ಧನ, ಯೋಜನಾ ನಿರ್ದೇಶಕರಾದ ಜೆ.ಸಿ. ನಯನಾ ಜನಾರ್ಧನ, ಜೆ.ಸಿ. ಉಮಾಮಹೇಶ, ಅಧ್ಯಕ್ಷರಾದ ಜೆ.ಸಿ. ಕುನಾಲ್ ಮಾಣಿಕಚಂದ, ಇತರರು ಹಾಜರಿದ್ದರು.

ಕೆ.ಎಂ.ವಿಶ್ವನಾಥ ಮರತೂರ ಅವರ ಸಂಕ್ಷಿಪ್ತ ಪರಿಚಯ: ಬದುಕಿನ ಯಶಸ್ಸು, ಸಂತೋಷ ಮತ್ತು ಸಂತೃಪ್ತಿಯ ಹುಡುಕಾಟದಲ್ಲಿ ಬಡೆದಾಡಿದ, ವಿಫಲವಾದ ಮತ್ತು ಯಶಸ್ಸಿನತ್ತ ಮುಂದೆ ಸಾಗಿದ ಸಾವಿರಾರು ಯುವಕರಂತೆ ಕೆ.ಎಂ.ವಿಶ್ವನಾಥ ಮರತೂರ ಅವರು ಕೂಡ ಒಬ್ಬರು. ಹಿಂದೂಳಿದ ಮಧ್ಯಮ ವರ್ಗದ ಕಡು ಬಡತನದ ಕುಟುಂಬದಿಂದ ಅವರೂ ಸಹ ಅಸ್ಪಷ್ಟವಾದ ಕನಸುಗಳನ್ನು ಹೊಂದಿದ್ದರು ಮತ್ತು ಜೀವನದಲ್ಲಿ ಗುರಿಗಳ ಅಸ್ಪಷ್ಟ ದೃಷ್ಟಿಯನ್ನು ಹೊಂದಿದ್ದರು.

ಅವರು ತಾವು ಅನುಭವಿಸಿದ, ಕಂಡುಹಿಡಿದ ಅನುಭವಗಳನ್ನು ಅವರ ಯಶಸ್ಸಿನ ರಹಸ್ಯವನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಕೊಳ್ಳುತ್ತಾ ಜನರಿಗೆ ಸಹಾಯ ಮಾಡುವ ಮತ್ತು ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಈ ಪ್ರಜ್ಞಾ, ಪ್ರೇರಣೆ ಮತ್ತು ಪ್ರೋತ್ಸಾಹ ಜನರ ಜೀವನವನ್ನು ಬದಲಿಸುವತ್ತ ಒಂದು ದಿಟ್ಟ ಹೆಜ್ಜೆಯಂದು ಬಲವಾಗಿ ನಂಬಿದ್ದಾರೆ. ಸಮಾಜದ ಧನಾತ್ಮಕ ಅಂಶಗಳನ್ನು ಅನ್ವೇಷಿಸುತ್ತಾ, ಅದನ್ನು ಮಕ್ಕಳು, ಯುವಕರು, ಪಾಲಕರು, ಶಿಕ್ಷಕರು, ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಇತರೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಕೆ.ಎಂ.ವಿಶ್ವನಾಥ ಮರತೂರ ಇವರಿಂದ ಸಮಾಜದ ಅನೇಕರು ಸ್ಪೂರ್ತಿ ಪಡೆಯುತ್ತಿದ್ದಾರೆ.

ಮೂಲತ: ಕರ್ನಾಟಕದ ಕಲಬುರಗಿ ಜಿಲ್ಲೆಯ ಶಾಹಾಬಾದ್ ತಾಲೂಕಿನ ಮರತೂರ ಎಂಬ ಪುಟ್ಟ ಗ್ರಾಮದವರು. ಓದಿದ್ದು ಎಂ.ಎಸ್.ಸಿ. ಬಿ.ಈಡಿ. ಕಲಬುರಗಿ ವಿಶ್ವವಿದ್ಯಾಲಯ. ಓದು, ಬರವಣಿಗೆ, ತರಬೇತಿ, ಉಪನ್ಯಾಸ ಇತ್ಯಾದಿ ರೂಢಿಸಿಕೊಂಡ ಹವ್ಯಾಸಗಳು. ಪ್ರಸ್ತುತ 12 ಸಾಹಿತ್ಯ ಪುಸ್ತಕಗಳು, 05 ಪಠ್ಯ ಪುಸ್ತಕಗಳು (ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು), ಹಲವಾರು ಅಂಕಣಗಳು ಬರೆದಿದ್ದಾರೆ. ಸದ್ಯ “ಪ್ರಜ್ಞಾ” ಮತ್ತು “ಪ್ರೇರಣಾ” ಎಂಬ ಎರಡು ಅಂಕಣಗಳನ್ನು ಬರೆಯುತ್ತಿದ್ದಾರೆ.

ಶ್ರೀಯುತರು ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ಧಿ ಕ್ಷೇತ್ರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಎಂಟು ಶೈಕ್ಷಣಿಕ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳು, ಶಿಕ್ಷಣ ಇಲಾಖೆ, ಶಿಕ್ಷಕರು, ಮಕ್ಕಳು, ಪಾಲಕರು, ಸಮುದಾಯದೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡಿದ ಅನುಭವವಿದೆ. ಮಾನವ ಅಭಿವೃದ್ಧಿ ಸೂಚ್ಯಾಂಕ ಹಾಗೂ ಭಾರತೀಯ ಭಾಷಾ ಅಧ್ಯಯನದಲ್ಲಿ ಸದಸ್ಯನಾಗಿ ಕೆಲಸ ಮಾಡಿದ್ದಾರೆ.

ಮಾರ್ಗದರ್ಶಿ ಸಂಸ್ಥೆ , ಕಲಿಕೆ-ಟಾಟಾ ಟ್ರಸ್ಟ್ ಯಾದಗಿರಿ, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬೀದರ, ಬಿಜಾಪೂರ, ಲನಿರ್ಂಗ್ ಲಿಂಕ್ಸ್ ಫೌಂಡೇಷನ್ ಇಂತಹ ಸಂಸ್ಥೆಗಳಲ್ಲಿ ನಿರ್ಧಾರಿತ ಸ್ಥರದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಇವರು, ಡಿ.ಎಸ್.ಇ.ಆರ್.ಟಿ – ಸ್ಟರ್ ಎಜುಕೇಶನ್ (ಆಂತರಿಕ ಪ್ರೇರಣಾ ಕೇಂದ್ರ)ದ ಕಲಬುರಗಿ ವಿಭಾಗದ ಮುಖ್ಯಸ್ಥರಾಗಿ, ಶಿಕ್ಷಣ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಆಸಕ್ತಿಯ ಕ್ಷೇತ್ರವಾದ ಶಿಕ್ಷಣಕ್ಕೆ ತಮಗಿರುವ ಪರಿಮಿತಿಯೊಳಗೆ, ಮಕ್ಕಳು, ಶಿಕ್ಷಕರು ಹಾಗೂ ಸಮುದಾಯಕ್ಕಾಗಿ ಕೆಲವು ಮಹತ್ವದ ಕೆಲಸವನ್ನು ಮಾಡತ್ತಿದ್ದಾರೆ.

“ಪ್ರಜ್ಞಾ” ಸಂಸ್ಥೆ “ಪ್ರಜ್ಞಾ” ಇನ್ನೋವೇಟಿವ್ ಲನಿರ್ಂಗ್, “ಪ್ರಜ್ಞಾ” ಇನ್ಫೋ ಸಲ್ಯೂಷನ್, “ಪ್ರಜ್ಞಾ” ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ಸಂಸ್ಥಾಪಕ ನಿರ್ದೇಶಕರಾಗಿದ್ದಾರೆ. ಇಲ್ಲಿಯವರೆಗೆ “ಕೌನ ಬನೇಗಾ ಜ್ಞಾನಪತಿ” “ಕಂದನಿಂದ ಕಥೆ” “ಮಕ್ಕಳ ಹೃದಯಾಂತರಾಳ” “ಕಾವ್ಯ ಓದು ಸಂಭ್ರಮ” “ಕವಿ ಕಾವ್ಯ ಕಲರವ” “ಕಾಡಿದ ಕವಿತೆ” “ಸಾಧಕರೊಂದಿಗೆ ಸಾವಿರದ ಮಾತುಗಳು” “ಸಾಧಕ ಶಿಕ್ಷಕರೊಂದಿಗೆ ಸಂವಾದ” ಹೀಗೆ ಹತ್ತು ಹಲವು ವಿಭಿನ್ನವಾದ ಕಾರ್ಯಕ್ರಮಗಳೊಂದಿಗೆ ಸಮಾಜದ ಜನರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here