ಭಾಲ್ಕಿ: ಮನೆಗೊಂದು ಅನುಭವ ಮಂಟಪ 25ನೇ ದಿನ ಶರಣೆ ರೇಖಾ ಬಾಯಿ ರಾಜಶೇಖರ್ ಅಷ್ಟುರೆ ಮನೆಯಲ್ಲಿ ನೆರವೇರಿತು. ಪೂಜ್ಯಶ್ರೀ ಮಹಾಲಿಂಗ ದೇವರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.
ಮಹಾದೇವಿ ಅಷ್ಟುರೆ ಅವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು ಹಾಗೂ ರಾಮಚಂದ್ರ ಎರನಾಳೆ ಅವರ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ ಅಷ್ಟುರೆ ಪರಿವಾರದವರಿಂದ ಬಸವ ಗುರು ಪೂಜೆ ಶರಣೆ ರೇಖಾಬಾಯಿ ರಾಜಶೇಖರ ಅಷ್ಟುರೆ ಅವರು ಎಲ್ಲರನ್ನ ಸ್ವಾಗತಿಸಿದರು.
ಶರಣ ಸೋಮನಾಥ ಮುದ್ದ ಅವರ ಅನುಭಾವ ಅಹಂಕಾರ ಕುರಿತು ಮಾತನಾಡಿದರು. ಅಹಂಕಾರ ಮನುಷ್ಯನ ಬದುಕು ಸುಡುತ್ತದೆ. ಅವನ ಅವನತಿ ಅಲ್ಲೇ ಆರಂಭವಾಗುವುದು. ಅದಕ್ಕೆ ಅನೇಕ ನಿದರ್ಶನಗಳನ್ನು ನಾವು ಕೇಳಿದ್ದೇವೆ ನೋಡಿದ್ದೇವೆ. ಅದರಲ್ಲಿ ಶಿವನನ್ನೇ ಒಲಿಸಿಕೊಂಡವ ರಾವಣ ಅಹಂ ನಿಂದಾಗಿ ಎಲ್ಲವೂ ಕಳೆದುಕೊಂಡ. ಅದಕ್ಕಾಗಿಯೇ ಶರಣರು ತಮ್ಮ ವಿಚಾರಧಾರೆಗಳಲ್ಲಿ ವಚನಗಳಲ್ಲಿ ಅಹಂಕಾರ ವನ್ನು ಬಿಡುವ ಕುರಿತು ಅನೇಕ ಶರಣ ಶರಣೆಯರು ವಚನಗಳನ್ನು ರಚಿಸುವುದರ ಮೂಲಕ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ ಅಹಂ ಬಿಟ್ಟು ಬಾಳಿದರೆ ಸ್ವರ್ಗ ಸುಖ ಎಂದು ಹೇಳಿದರು.
ಬಸವಪ್ರಣವ ಅಷ್ಟುರೆ ಇಂಗ್ಲಿಷ್ನಲ್ಲಿ ವಚನ ಹೇಳಿ ಮಾತನಾಡಿದರು. ಖಡಕೇಶ್ವರ ಭಜನಾ ಮಂಡಳದವರಿಂದ ಭಜನೆ ನಡೆಯಿತು. ಅನೇಕರನ್ನು ಇದೇ ಸಂದರ್ಭದಲ್ಲಿ ಗೌರವಿಸಿದರು. ರಾಜಶೇಖರ್ ಅಷ್ಟುರೆ ಡಾ. ಸುಜಾತಾ ಡೋಣಗಾಪುರೆ, ವಿದ್ಯಾವತಿ ಅಷ್ಟುರೆ , ಲಲಿತಾ ಅಷ್ಟುರೇ ಇತರರು ಇದ್ದರು. ಎಂ ವಿ ಗಿರೀಶ್ ಅವರು ನಿರೂಪಿಸಿದರು. ರಾಹುಲ ಅಷ್ಟುರೆ ಅವರು ವಂದಿಸಿದರು. ಮಂಗಲ ಹಾಗೂ ಪ್ರಸಾದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು