ದ್ವಾರಕಾನಾಥ ವರದಿ ಜಾರಿಗೆಗೆ ನಿಜಾಮುದ್ದೀನ್ ಆಗ್ರಹ

0
60

ಯಾದಗಿರಿ : ಡಾ.ಸಿ ಎಸ್ ದ್ವಾರಕಾನಾಥ ಆಯೋಗದ ವರದಿ ಜಾರಿಗೆ ತರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರ್ನಾಟಕ ಪಿಂಜಾರ/ನದಾಫ/ಮನ್ಸೂರಿ ಸಂಘಗಳ ಮಹಾಮಂಡಳದ ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ನದಾಫ ಆಗ್ರಹ ಪಡಿಸಿದ್ದಾರೆ.

ಸುಮಾರು 10 ವರ್ಷಗಳಿಂದ ಪಿಂಜಾರ ಸಮುದಾಯದಿಂದ ಹೋರಾಟ ಮಾಡುತ್ತಾ ಬಂದರು ನಮ್ಮ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ ರಾಜ್ಯದಲ್ಲಿ ಅನೇಕ ಸಣ್ಣ ಸಣ್ಣ ಸಮುದಾಯದ ಸಮಾಜಗಳನ್ನು ಗುರುತಿಸಿ ಅಭಿವೃದ್ಧಿ ನಿಗಮ ರಚಿಸಿ ಅನುದಾನ ನೀಡಿ ಸಮಾಜವನ್ನು ಮೇಲೆತ್ತುವ ಕೆಲಸ ಹಿಂದಿನಿಂದಲೂ ಸರ್ಕಾರಗಳು ಮಾಡುತ್ತಾ ಬಂದಿವೆ.

Contact Your\'s Advertisement; 9902492681

ಇದೇ ರೀತಿ ಡಾ ಸಿ ಎಸ್ ದ್ವಾರಕಾನಾಥ ಆಯೋಗದ ವರದಿಯನ್ನು ಜಾರಿಗೆ ತಂದು ಪಿಂಜಾರ ಅಭಿವೃದ್ದಿ ನಿಗಮಕ್ಕೂ ಆದೇಶ ನೀಡಬೇಕು ಇಲ್ಲಾಂದ್ರೆ ಮುಂದಿನ ಚುನಾವಣೆಯಲ್ಲಿ ಸಮುದಾಯದಿಂದ ತಕ್ಕ ಉತ್ತರ ನೀಡುತ್ತವೆ ಎಂದು ಆಗ್ರಹಿಸಿದ್ದಾರೆ.

ಈ ಮೊದಲೂ ಸರ್ಕಾರಕ್ಕೆ ಪಿಂಜಾರ ಅಭಿವೃದ್ದಿ ನಿಗಮ ಜಾರಿಗೆ ತರಬೇಕೆಂದು ಹಲವಾರು ಬಾರಿ ಮನವಿ ನೀಡಿದರು ನಮ್ಮಗೆ ಸ್ಪಂದಿಸುತ್ತಿಲ್ಲ ಕರ್ನಾಟಕದಲ್ಲಿ ಒಟ್ಟು ಮುಸ್ಲಿಂ ಜನಸಂಖ್ಯೆಯ ಅರ್ಧದಷ್ಟು ಪಿಂಜಾರ ನದಾಫ, ಮನ್ಸೂರಿ, ದುದೇಕುಲಾ ಸಮುದಾಯವಿದ್ದು ಈವರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಇತರೆ ಸೌಲಬ್ಯಗಳಿಂದ ವಂಚಿತರಾಗಿದ್ದಾರೆ.

ನಮ್ಮ ಅಲೆಮಾರಿ ಪಿಂಜಾರ್, ನದಾಫ್, ಜನರು ರಾಜ್ಯದಲ್ಲಿ ಸರಿ ಸುಮಾರು 40 ಲಕ್ಷದಷ್ಟು ಇರುತ್ತಾರೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿದೆ ಈ ಸಮುದಾಯದ ವಾಸ್ತವ ಸ್ಥಿತಿಯನ್ನು ಹಿಂದುಳಿದ ವರ್ಗಗಳ ಆಯೋಗವು 2010ರಲ್ಲಿ ಡಾ.ಸಿ.ಎಸ್. ದ್ವಾರಕಾನಾಥ್ ರವರು ಸಲ್ಲಿಸಿದ ವರದಿಯಲ್ಲಿ ತೆರೆದಿಟ್ಟಿದೆ.

ಪಿಂಜಾರ/ನದಾಫ್ ಸಮುದಾಯದ ಉಳಿವು ಮತ್ತು ಬೆಳವಣಿಗೆಗೆ ಪಿಂಜಾರ/ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಅನಿವಾರ್ಯ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದು ನಿಜಾಮುದ್ದೀನ್ ಹೇಳಿದ್ದಾರೆ.

2009-10 ರಲ್ಲಿ ಡಾ. ಸಿ.ಎಸ್. ದ್ವಾರಕನಾಥ ಆಯೋಗವು ಸರಕಾರಕ್ಕೆ ವರದಿಯನ್ನು ಸಲ್ಲಿಸಿ ವರದಿಯಲ್ಲಿ ಅಲೆಮಾರಿ ಪಿಂಜಾರ್, ನದಾಫ್, ಜನರ ಉದ್ಯೋಗವು ನಸೀಶಿ ಹೋಗಿದ್ದು ಈ ಸಮುದಾಯವು ತುಂಬಾ ಸಂಕಷ್ಟದಲ್ಲಿ ಇದೆ ಎಂದು ಅಲೆಮಾರಿ ಸಮುದಾಯಕ್ಕೆ ಪಿಂಜಾರ್ ಅಭಿವೃದ್ಧಿ ನಿಗಮ ಮಾಡಬೇಕು ದ್ವಾರಕಾನಾಥ್ ಅವರು ಸಲ್ಲಿಸಿದ್ದ ವರದಿ ಆಧರಿಸಿ ಈಗಾಗಲೇ ಎಲ್ಲಾ ಸಮಾಜದ ಅಭಿವೃದ್ದಿ ನಿಗಮಗಳನ್ನು ಸ್ಥಾಪಿಸಲಾಗಿದೆ ಆದರೆ ಅಲೆಮಾರಿ ಪಿಂಜಾರ್,ನದಾಫ್ ಸಮುದಾಯಕ್ಕೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಆದರೆ ಸುಮಾರು ವರ್ಷಗಳಿಂದ ಪ್ರಾರಂಭವಾದ ನಮ್ಮ ಈ ಕೂಗು ಇಲ್ಲಿ ವರೆಗೂ ಯಾವುದೇ ಸರ್ಕಾರಕ್ಕೆ ಕೇಳಿಸಿಲ್ಲ ಬಜೇಟನಲ್ಲಿ ಪ್ರತ್ಯೇಕ ನಿಗಮ ಮಂಡಳಿ ಭರವಸೆ ನೀಡಿದ್ದರೂ ಘೋಷಿಸದಿರುವದು ನಮಗೆ ನೋವುಂಟು ಮಾಡಿದೆ.

ಪಿಂಜಾರ ಸಮುದಾಯವನ್ನು ಯಾಕೆ ಕಡೆಗಣಿಸುತ್ತಿದ್ದೀರೊ ಕೇವಲ ರಾಜಕೀಯ ಬಲ ಹಣಬಲ ಬಹುಸಂಖ್ಯಾತರಿಗೆ ಅಷ್ಟೇ ಸರ್ಕಾರದ ಸವಲತ್ತುಗಳು ಪಡೆದುಕೊಳ್ಳುವಂತೆ ಮಾಡುತ್ತಿದ್ದಿರಿ ನಮ್ಮ ಸಮಾಜವನ್ನು ಯಾಕೆ ಹೀನವಾಗಿ ಕಾಣುತ್ತಿದ್ದಿರಿ ನಮ್ಮ ಆತ್ಮ ವಿಶ್ವಾಸವನ್ನು ಬಲಗೊಳದಂತೆ ಮಾಡುತ್ತಿದ್ದಿರಿ ಕೇವಲ ನಮ್ಮ ಸಮಾಜ ಓಟಿಗಾಗಿ ಬಳಸಿ ಕೊಳ್ಳುತ್ತಿದ್ದೀರಾ ನಮ್ಮ ಸಮಾಜಕ್ಕೆ ಗೌರವ ಸಿಗುವುದು ಅಗಲುಗನಸು ಕಂಡಂತೆ ಆಗಿದೆ ಸರಕಾರದ ಇಂಥ ಮನೋಭಾವನೆಯನ್ನು ಖಂಡಿಸುತ್ತೇವೆ.

ನಮ್ಮ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ ಪಿಂಜಾರ ನದಾಫ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆಯ ಆಶಾಭಾವನೆಯನ್ನು ಇಟ್ಟುಕೊಂಡಿದ್ದ ನಮಗೆ ಅನ್ಯಾಯವಾಗಿದೆ ಚುನಾವಣೆಯ ಒಳಗಾಗಿ ಪಿಂಜಾರ ನದಾಫ ನಿಗಮ ಗೋಷಣೆ ಮಾಡಿ ಸಮಾಜಕ್ಕೆ ಶುಭಸುದ್ದಿಯನ್ನು ಸರಕಾರ ನೀಡಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್ ನದಾಫ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here