ಕಲಬುರಗಿ: ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಘೋಷಣೆ ಮಾಡಿದ್ದಕ್ಕಾಗಿ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ನಿಜಸುಖಿ ಹಡಪದ ಅಪ್ಪಣ ನವರ ಪೆÇೀಟೊಕ್ಕೆ ಹಾಲಿನ ಕ್ಷೀರಾಭಿಷೇಕ ಮಾಡಿ ಪಟಾಕಿ ಸಿಡಿಸಿ ಸಿಹಿ ತಿನ್ನಿಸುವ ಮೂಲಕ ಸಂಭ್ರಾಮಾಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಭೊಮ್ಮಾಯಿ ಅವರಿಗೆ ಹಾಗೂ ಮಾಜಿ ಸಿ.ಎಂ ಲಕ್ಷ್ಮಣ ಸವದಿ ಅವರಿಗೆ ಹಾಗೂ ಅನೇಕ ಕ್ಯಾಬಿನೆಟ್ ಸಚಿವರಿಗೆ , ಶಾಸಕರಿಗೆ, ಅನಂತ್ ಕೃತಜ್ಞತೆಗಳು ಸಲ್ಲಿಸಲಾಯಿತು.
ಶಹಾಬಾದ ಸ್ವಾಮಿಗಳು ಶ್ರೀ ಭಾಲ ಬ್ರಹ್ಮಚಾರಿ ರಾಜಶಿವಯೋಗಿ, ರಾಜ್ಯ ಕಾರ್ಯಾದ್ಯಕ್ಷ ಮತ್ತು ಕಲಬುರಗಿ ಜಿಲ್ಲಾಧ್ಯಕ್ಷ ಈರಣ್ಣ ಸಿ ಹಡಪದ ಸಣ್ಣೂರ, ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ, ಭಗವಂತ ಹೊನ್ನಕಿರಣಗಿ, ರಮೇಶ ಹಡಪದ ನೀಲೂರ, ರುದ್ರಮಣಿ ಅಪ್ಪಣ ಬಟಗೇರಾ, ಆನಂದ ಖೇಳಗಿ, ಮಹಾತೇಶ ಇಸ್ಲಾಂಪೂರೆ, ಮಲ್ಲಿಕಾರ್ಜುನ ಬಿ ಸುಗೂರ ಎನ್, ಶಿವಾನಂದ ಬಬಲಾದಿ, ಸಂತೋಷ ಬಗದುರಿ, ಸುನೀಲ ಭಾಗ ಹಿಪ್ಪರಗಾ, ಚಂದ್ರಶೇಖರ ತೋನಸನಹಳ್ಳಿ, ವಿನೋದ ಅಂಬಲಗಾ, ಶರಣು ಕೊಲ್ಲೂರ, ಶರಣು ನಂದೂರ, ರಮೇಶ ಕವಲಾಗಾ, ಸಂಗಮೇಶ ಹೊಸ್ಸಳ್ಳಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.