ಕಲಬುರಗಿ: ಕೆಕೆಆರ್‍ಡಿಬಿ ಅಧ್ಯಕ್ಷರ ಕರ್ಮಕಾಂಡದ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ದತ್ತಾತ್ರೇಯ ಸಿ. ಪಾಟೀಲ್ ರೇವೂರ್ ಅವರಿಗೆ ಧÀಮ್ ಇದ್ದರೆ ಜನರ ಮಧ್ಯೆ ಬಂದು ತಮ್ಮ ಮೇಲೆ ಎದುರಾಗಿರುವ ಆರೋಪ ಸುಳ್ಳುವೆಂದು ಬಹಿರಂಗಪಡಿಸಲಿ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೃμÁ್ಣರಡ್ಡಿ ಸವಾಲು ಎಸೆದರು.
ರಾಜ್ಯ ಸರಕಾರ ಕೂಡ ಆರೋಪದ ಬಗ್ಗೆ ತನಿಖೆ ನಡೆಸಲಿ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಏನಿದು ಹಗರಣ?: ಕಳೆದ 2020 ಜುಲೈ ತಿಂಗಳಲ್ಲಿ ನೆರವು ನೀಡಲು ಗುತ್ತಿಗೆ ಆಧಾರದಲ್ಲಿ ಸ್ಥಾಪಿಸಿದ ಯೋಜನಾ ಬೆಂಬಲ ಕಚೇರಿ (ಪಿಎಸ್‍ಒ) ಕೆಲಸ ಮಾಡದೆ ಇದ್ದರೂ ಸಂಸ್ಥೆಗೆ ಡಿಸೆಂಬರ್ 2021ರಿಂದ ಮಾರ್ಚ್ 2022ರ ಅವಧಿಯಲ್ಲಿ ರೂ.6 ಕೋಟಿ ಪಾವತಿಯಾಗಿದೆ. ಆದರೆ ಕರಾರು ಪತ್ರದ ಪ್ರಕಾರ ರೂ.9. 97ಕೋಟಿ ಗುತ್ತಿಗೆ ಬೆಲೆಯಲ್ಲಿ ಕೆಲಸ ಮಾಡುವುದಕ್ಕೆ ಟೆಂಡರ್ ನೀಡಲಾಗಿದೆ. ಆದರೆ, ಟೆಂಡರ್ ಕರೆಯವಲ್ಲಿ ಲೋಪವೆಸಗಿದ್ದು, 2 ಕೋಟಿಗಿಂತ ಹೆಚ್ಚಿನ ಕಾಮಗಾರಿಗಳಿಗೆ ಇ-ಪೆÇ್ರೀಕ್ಯೂರಮೆಂಟ್ ಪೆÇೀರ್ಟಲ್ ಮೂಲಕ ಮುಕ್ತ ಟೆಂಡರ್ ಆಹ್ವಾನಿಸಬೇಕಿತ್ತು ಎಂದರು.
ಇದರಲ್ಲೂ ನಿಯಮ ಗಾಳಿಗೆ ತೂರಲಾಗಿದೆ. ವಾಡಿ-ಬಳವಡಗಿವರೆಗೆ ರಸ್ತೆ ಮೆಟಲಿಂಗ್ ಸುಧಾರಣಾ ಕಾಯಿದೆಗೆ ರೂ.4.98 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಶೇ.40 ತೆಗೆದುಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಕೂಡಲೇ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೊಳಪಡಿಸಬೇಕು. ಒಂದು ವೇಳೆ ತನಿಖೆ ವಿಳಂಬವಾದರೆ ಉಗ್ರ ಹೋರಾಟ ಮಾಡಬೆಕಾಗುತ್ತದೆ ಎಂದು ಎಚ್ಚರಿಸಿದರು.