ಕಾಳಗಿ : ಐತಿಹಾಸಿಕ ಸಾಂಸ್ಕೃತಿಕ ಶ್ರೀಮಂತಿಕೆ ಹಿನ್ನೆಲೆ ಹೊಂದಿರುವ ದಕ್ಷಿಣ ಕಾಶಿ ಎಂದೇ ಪ್ರಸಿದವಾಗಿರುವ ಕಾಳಗಿ ಹಿಂದೆ 1000 ನಾಡಿನ ರಾಜ್ಯಧಾನಿಯಾಗಿತ್ತು. ಕಾಳಗಿ ನೂತನ ತಾಲೂಕಾದ ಮೇಲೆ ಪ್ರಥಮ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆ ಯಶಸ್ವಿಯಾಗಿ ನಡೆಯಿತು.
ಕಲಬುರಗಿಯ ಹಿರಿಯ ಸಾಹಿತಿಗಳು ಹಾಗೂ ವಿ. ಜಿ. ಮಹಿಳಾಮಹಾವಿದ್ಯಾಲಯದ ಪ್ರಧ್ಯಾಪಕರಾದ ಡಾ. ಶಾಂತಾ ಮಠ್ ರಟಕಲ್ ಸಮ್ಮೇಳನಾಧ್ಯಾಕ್ಷರಾಗಿದರು.
ಕಾಳಗಿ ಗ್ರೇಡ್ -1 ತಹಸೀಲ್ದಾರರಾದ ಹಾಗೂ ದಂಡಧಿಕಾರಿ ಸಂಗಯ್ಯ ಸ್ವಾಮಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು, ಕಾಳಗಿ ತಾಲೂಕಾ ಕ. ಸಾ. ಪ ಅಧ್ಯಕ್ಷ ಸಂತೋಷ್ ಕುಡ್ಡಳ್ಳಿ ನಾಡ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಸಮ್ಮೇಳನದ ಅಧ್ಯಕ್ಷರನ್ನು ಅಂಬೇಡ್ಕರ್ ವೃತ್ತದಿಂದ ನೀಲಕಂಠ ಕಾಳೇಶ್ವರ ದೇವಸ್ಥಾನದ ವರೆಗೆ ಡೊಳ್ಳು, ಹಲಗೆ, ಹಾಗೂ ಪುರವಂತರ ಕುಣಿತದೊಂದಿಗೆ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ವೇದಿಕೆ ಕಾರ್ಯಕ್ರಮವನ್ನು ಶಾಸಕರಾದ ಡಾ. ಅವಿನಾಶ ಜಾದವ ಉದ್ಘಾಟಿಸಿದರು.
ನಂತರ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವಿಜಯಕುಮಾರ ತೇಗಲತ್ತಿಪ್ಪಿ ಮಾತನಾಡಿದರು.
ಕಾಳಗಿ ತಾಲೂಕಿನ ಕನ್ನಡ ಸಾಹಿತಿಯೊಬ್ಬ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷನಾಗಿರುವುದು ಇದೆ ಮೊದಲು ಹಾಗೂ ಕಾಳಗಿ ತಾಲೂಕಿನಲ್ಲಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಇದೆ ಮೊದಲು, ಕಾಳಗಿ ವಾಣಿಜ್ಯ ನಗರಿಯಾಗಿದ್ದು ಇಲ್ಲಿ ಜನರಿಗೆ ಸಾಹಿತ್ಯಾಸಕ್ತಿ ಕಡಿಮೆಯಾಗಿದ್ದು, ಕ. ಸಾ. ಪ. ಕಾಳಗಿ ತಾಲೂಕಾಧ್ಯಕ್ಷರಾದ ಸಂತೋಷ್ ಕುಡ್ದಳ್ಳಿಯವರು ತಾಲೂಕಿನಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಯುವಕರಲ್ಲಿ ಸಾಹಿತ್ಯದ ಬಗ್ಗೆ ಒಲವು ಮೂಡಿಸಿದ್ದಾರೆ ಅದಕ್ಕೆ ಇವತ್ತು ನಡೆಯುತ್ತಿರುವ ಈ ನುಡಿ ಜಾತ್ರೆಯೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಇದೆ ಸಂಧರ್ಭದಲ್ಲಿ ಹಿರಿಯ ಸಾಹಿತಿಗಳಾದ ಹನುಮಾಕ್ಷಿ ಗೋಗಿಯವರು “ಅರಿವಿನ ಸಿರಿ ” ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಿದರು ನಂತರ ಗೋಷ್ಠಿ ಹಾಗೂ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಭರತನೂರಿನ ಶ್ರೀಗಳಾದ ಶ್ರೀ ಚಿಕ್ಕ ಗುರುನಂಜೇಶ್ವರ ಮಹಾಶಿವಯೋಗಿಗಳು ಹಾಗೂ ಕಾಳಗಿಯ ಶ್ರೀ ಶಿವಬಸವ ಶಿವಾಚಾರ್ಯ ಮಠದ ಪೂಜ್ಯ ನೀಲಕಂಠ ಮರಿದೇವರು ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ: ರಾಮಲಿಂಗರೆಡ್ಡಿ ದೇಶಮುಖ, ಸುಭಾಷ ಕದಂ, ಶಿವಶರಣಪ್ಪ ಕಮಲಾಪುರ, ಶಿವಶರಣಪ್ಪ ಗುತ್ತೇದಾರ, ರೇವಣಸಿದ್ಧಪ್ಪ ಮಾಸ್ಟರ್, ರಾಜೇಶ್ ಜೆ. ಗುತ್ತೇದಾರ, ಪ್ರಶಾಂತ ಕದಂ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.