ಸುರಪುರ: ನಗರದ ಡಿವೈಎಸ್‍ಪಿ ಕಚೇರಿ ಆವರಣದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಪ್ರಯುಕ್ತವಾಗಿ ಗೃಹರಕ್ಷಕ ದಳ ಮತ್ತು ಪೌರ ರಕ್ಷಣೆಯ ಮಹಾ ಸಮಾದೇಷ್ಟರ ನಿರ್ದೇಶನದಂತೆ ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ಎರಡು ದಿನಗಳ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಪಿ.ಐ ಆನಂದ ವಾಗ್ಮೊಡೆ ಮಾತನಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಂದೋಬಸ್ತು ಕರ್ತವ್ಯ ನಿರ್ವಹಣೆ ಕುರಿತು ತಿಳಿಸುತ್ತಾ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರು ಹಾಗೂ ಗೃಹ ರಕ್ಷಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಮುಂಬರುವ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯಲು ಈಗಿನಿಂದಲೇ ಸನ್ನದ್ಧರಾಗಬೇಕು ಮುಂಜಾಗೃತ ಕ್ರಮಗಳನ್ನು ನಿರ್ವಹಿಸುವ ಕುರಿತು ತಿಳಿಸಿದರು.
ಜಿಲ್ಲಾ ಬೋಧಕರಾದ ಕು.ವಿದ್ಯಾವತಿ ಮಾತನಾಡಿ ಗೃಹ ರಕ್ಷಕದಳ ಕಾರ್ಯಗಳು ಹಾಗೂ ಸೇವೆಗಳ ಕುರಿತು ತಿಳಿಸಿದರು ಅಧ್ಯಕ್ಷತೆ ವಹಿಸಿದ್ದ ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್ ಮಾತನಾಡಿ ಚುನಾವಣೆ ನೀತಿ ಸಂಹಿಂತೆ ಪ್ರಾರಂಭವಾದಾಗಿನಿಂದ ಮುಗಿಯುವ ಅವಧಿಯಲ್ಲಿ ಗೃಹ ರಕ್ಷಕರು ನಿರ್ವಹಿಸಬೇಕಾದ ಕರ್ತವ್ಯ ಕುರಿತು ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ಸೀನಿಯರ್ ಪ್ಲಾಟೂನ್ ಕಮಾಂಡರ್ ವೆಂಕಟೇಶ ಸುರಪುಕರ್, ಪ್ಲಾಟೂನ್ ಕಮಾಂಡರ್ ರಮೇಶ ಅಂಬೂರೆ, ಹುಣಸಗಿ ಘಟಕಾಧಿಕಾರಿ ಮಹ್ಮದ ಆಸೀಫ್ ಉಪಸ್ಥಿತರಿದ್ದರು. ಸುರಪುರ ತಾಲೂಕಿನ 60 ಹಾಗೂ ಹುಣಸಗಿ ತಾಲೂಕಿನ 40 ಗೃಹರಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.