ಸುರಪುರ:ಇದೇ ಏಪ್ರಿಲ್ 23ನೇ ತಾರೀಖು ಮುಂಜಾನೆ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಬಳಿಯ ಮುಖ್ಯ ರಸ್ತೆಯಲ್ಲಿ ನೂತನವಾದ ಅಶ್ವಾರೂಢ ಬಸವೇಶ್ವರರ ಪುತ್ಥಳಿಯನ್ನು ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಡಾ:ಸುರೇಶ ಸಜ್ಜನ್ ತಿಳಿಸಿದರು.
ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,22ನೇ ತಾರೀಖು ಬಸವೇಶ್ವರರ ಪುತ್ಥಳಿ ಸೋಲಾಪುರ ದಿಂದ ಕೆಂಭಾವಿ ಮೂಲಕ ನಗರಕ್ಕೆ ತರುವಾಗ ಕೆಂಭಾವಿಯಲ್ಲಿ ಪುತ್ಥಳಿಯ ಮೆರವಣಿಗೆ ಹಾಗೂ ಮುದನೂರ,ಗುಂಡಲಗೇರಾ ಮಾರ್ಗವಾಗಿ ಹುಣಸಗಿಗೆ ಬಂದು ಹುಣಸಗಿ ಪಟ್ಟಣದ ಮಹಾಂತಸ್ವಾಮಿ ವೃತ್ತ ದಿಂದ ಬಸವೇಶ್ವರ ವೃತ್ತದ ವರೆಗೆ ಭವ್ಯವಾದ ಮೆರವಣಿಗೆ ನಡೆಯಲಿದೆ,ನಂತರ ಅಲ್ಲಿಂದ ಸುರಪುರ ನಗರಕ್ಕೆ ತರಲಾಗುವುದು.
ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ಪಂಚಾಂಗ ಮಠದಲ್ಲಿ ಬಸವ ಜಯಂತಿಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಪಂಚಾಂಗಮಠದ ಸ್ವಾಮೀಜಿಗಳು ಹಾಗೂ ಇತರೆ ಮುಖಂಡರು ಪುತ್ಥಳಿಗೆ ಪೂಜೆ ನೆರವೇರಿಸಿದ ನಂತರ ವೀರಶೈವ ಕಲ್ಯಾಣ ಮಂಟಪದ ವರೆಗೂ ರಾತ್ರಿ 9 ಗಂಟೆಯ ವರೆಗೆ ಮೆರವಣಿಗೆ ನಡೆಯಲಿದೆ.
ನಂತರ 23ನೇ ತಾರೀಖು ಬಸವ ಜಯಂತಿಯಂದು ಮುಂಜಾನೆ 9 ಗಂಟೆಗೆ ಪುತ್ಥಳಿಗೆ ಪೂಜೆ ನೆರವೇರಿಸಿ ಪ್ರತಿಷ್ಠಾಪಿಸಲಾಗುವುದು. ಪೂಜೆಯ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸುರಪುರ ಮತ್ತು ಹುಣಸಗಿ ತಾಲೂಕಿನ ಸಮಸ್ತ ವೀರಶೈವ ಲಿಂಗಾಯತ ಬಂಧುಗಳು ಹಾಗೂ ಬಸವೇಶ್ವರರ ಅನುಯಾಯಿಗಳು ಹಾಗೂ ಅಭಿಮಾನಿಗಳ ಸಹಭಾಗಿತ್ವದಲ್ಲಿ ನಗರದಾದ್ಯಂತ ಕಾರು ಮತ್ತು ಬೈಕ್‍ಗಳ ಬೃಹತ್ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.ಅಲ್ಲದೆ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ನಂತರದಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಬಸವಲಿಂಗಪ್ಪ ಪಾಟೀಲ್,ವೀರಪ್ಪ ಆವಂಟಿ,ಶಿವರಾಜಪ್ಪ ಗೋಲಗೇರಿ,ಮನೋಹರ ಜಾಲಹಳ್ಳಿ,ಬಸವರಾಜಪ್ಪ ಜವiದ್ರಖಾನಿ,ಚಂದ್ರಶೇಖರ ದಂಡಿನ್,ಮಲ್ಲಣ್ಣ ಸಾಹು,ಜಯಲಲಿತಾ ಪಾಟೀಲ್,ಸಂಗಣ್ಣ ಎಕ್ಕೆಳ್ಳಿ,ಶಿವಶರಣಪ್ಪ ಹೆಡಗಿನಾಳ,ಪ್ರಕಾಶ ಅಂಗಡಿ,ಮಂಜುನಾಥ ಜಾಲಹಳ್ಳಿ,ಚಂದ್ರಶೇಖರ ಡೋಣೂರ,ವಿರೇಶ ನಿಷ್ಠಿ ದೇಶಮುಖ,ಮಂಜುನಾಥ ಗುಳಗಿ,ವಿರೇಶ ಪಂಚಾಂಗಮಠ,ಸಿದ್ದನಗೌಡ ಪಾಟೀಲ್,ಜಗದೀಶ ಪಾಟೀಲ್,ಪ್ರದೀಪ ಕದರಾಪುರ,ಅನ್ನಪೂರ್ಣ ಜಕ್ಕರೆಡ್ಡಿ,ಚಂದ್ರಕಾಂತ ಸಕ್ಕರಿ,ವಸಂತಕುಮಾರ ಬಣಗಾರ,ರವಿಗೌಡ ಹೆಮನೂರ,ಗುರು ಕಲ್ಮನಿ,ಅಂಬ್ರೇಶ ಸಾಹು ಜಾಲಿಬೆಂಚಿ,ಶರಣು ಬಳಿ,ರಾಘವೇಂದ್ರ ಲಕ್ಷ್ಮೀಪುರ ಸೇರಿದಂತೆ ಅನೇಕರಿದ್ದರು.
ರಂಗದಂಗಳದಲ್ಲಿ ಮಾತುಕತೆಯಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಹೇಳಿಕೆ ಕಲಬುರಗಿ: ಕೋವಿಡ್‌ನಿಂದ ರಂಗ ಚಟುವಟಿಕೆಗಳು ಮಂಕಾಗಿದ್ದವು. ಇದೀಗ ನಿಧಾನಗತಿಯಲ್ಲಿ ಅವು ಚೇತರಿಕೆ…
ಕಲಬುರಗಿ: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಸಾಧಕ-ಬಾಧಕಗಳನ್ನು ನಾಗರಿಕರಿಗೆ ಮುಟ್ಟಿಸುವ ಕಾರ್ಯ ಮಾಡುವ ಪತ್ರಿಕಾ ರಂಗವು ನಾಲ್ಕನೇ ರಂಗವಾಗಿ ಕಾರ್ಯನಿರ್ವಹಿಸುತ್ತಿದ್ದೆ.…
ಕಲಬುರಗಿ : ಭಾರತ ದೇಶ ಪ್ರಗತಿಯಲ್ಲಿ ಯುವಶಕ್ತಿ ಸಹಭಾಗಿತ್ವ ಬಹಳ ಮುಖ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸಾಗಿತ್ತು.…
ಕಲಬುರಗಿ: ನಗರದ ಪತ್ರಿಕಾ ಭವನದಲ್ಲಿ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ…
ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ …
ಕಲಬುರಗಿ: ನಮ್ಮ ತಾಲೂಕಿನ ಹೆಮ್ಮೆಯ ಹೋರಾಟಗಾರ,ಕವಿ,ಸಾಹಿತಿಯಾದ ಡಾ.ಹನುಮಂತರಾವ ಅವರಿಗೆ ಪ್ರಶಸ್ತಿ ಲಭಿಸಿದ್ದು ಸಂತೋಷ ತಂದಿದೆ ಅವರಿಗೆ ಪ್ರಶಸ್ತಿ ದೊರಕಿದ್ದು ಸರ…