ವಾಡಿ: ಬಿಜೆಪಿ ಮೋಸಗಾರರು, ಸುಳ್ಳರು, ಭ್ರಷ್ಟರು, ಕಳ್ಳರು ಇರುವ ಪಕ್ಷ ಎಂದು ಚಿತ್ತಾಪುರ ತಾಲೂಕಿನ ವಾಡಿ ಪುರಸಭೆಯ ಮಾಜಿ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಥೋಡ್ ಆರೋಪಿಸಿದರು.
ಪಟ್ಟಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ದ ಕಿಡಿಕಾರಿದರು. ನಮ್ಮ ಮಾವನವರಾದ ಸೇವಾ ರಾಠೋಡ ಅವರಿಗೆ ವಯಸ್ಸು 90 ದಾಟಿದೆ. ಅವರಿಗೆ ಅರಳು ಮರಳು ಕಾಡುತ್ತಿದೆ. ಇಂಥಹ ಹಿರಿಯ ವ್ಯಕ್ತಿಯನ್ನು ಬಂಜಾರಾ ಸಮಾಜದ ಸಭೆ ಎಂದು ಸುಳ್ಳು ಹೇಳಿ ಬಿಜೆಪಿ ಮುಖಂಡರು ಕರೆದುಕೊಂಡು ಹೋಗಿ ಕಮಲ ಧ್ವಜ ನೀಡಿದ್ದಾರೆ.
ಇದು ಅವರ ಮನಸ್ಸಿಗೆ ವಿರುದ್ದವಾದ ಪ್ರಸಂಗವಾಗಿದ್ದು, ನಮ್ಮ ಕುಟುಂಬ ಕಾಂಗ್ರೆಸ್ ಪಕ್ಷ ದಲ್ಲಿಯೇ ಇದೆ. ಪುರಸಭೆ ಚುನಾವಣೆಯಲ್ಲಿ ಬಿಜೆಪಿ ನಮಗೆ ಟಿಕೆಟ್ ಕೊಡದೆ ದ್ರೋಹ ಮಾಡಿತ್ತು. ಶಾಸಕ ಪ್ರಿಯಾಂಕ್ ಖರ್ಗೆ ಅವರು ನಮಗೆ ಟಿಕೇಟ್ ಕೊಟ್ಟು ಪುರಸಭೆಯ ಅಧ್ಯಕ್ಷೆಯನ್ನಾಗಿ ಮಾಡಿದರು. ಖರ್ಗೆ ಅವರು ಬಂಜಾರಾ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರ. ನಾವು ಸಾಯುವ ವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೆವೆ. ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದರು.
ಚಿತ್ತಾಪುರದಲ್ಲಿ ಬಿಜೆಪಿ ಗೆಲ್ಲುವುದು ಕನಸಿನ ಮಾತು. ಪಡಿತರ ಅಕ್ಕಿ ಕಳ್ಳಗೆ ಟಿಕೇಟ್ ಕೊಟ್ಟಿದೆ. ನಲವತ್ತಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ರೌಡಿ ಶೀಟರ್ ಗೆ ಎಂಎಲ್ ಎ ಮಾಡಲು ಹೋರಟಿರುವ ಬಿಜೆಪಿಯವರು ಸ್ವತಹ ಭ್ರಷ್ಟಾಚಾರದಲ್ಲಿ ಮುಳುಗಿರುವ ಜನದ್ರೋಹಿ ಪಕ್ಷವಾಗಿದೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಕ್ಷೆತ್ರದಲ್ಲಿ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಪ್ರಿಯಾಂಕ್ ಖರ್ಗೆ ಅವರ ಗೆಲುವುನಿಂದ ಮಾತ್ರ ಜನರ ಭವಿಷ್ಯ ಉಜ್ವಲವಾಗಲಿದೆ. ನನ್ನ ಬಂಜಾರಾ ಸಮಾಜದ ಜನರೂ ಸಹ ಜಾತಿ ಸ್ವಾಭೀಮಾನಕ್ಕೆ ಬಿದ್ದು ಅಯೋಗ್ಯ ವ್ಯಕ್ತಿಗೆ ಮತ ಹಾಕದೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮೈನಾಬಾಯಿ ಮನವಿ ಮಾಡಿದರು
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೆಮೂದ್ ಸಾಹೇಬ, ಯುವ ಕಾಂಗ್ರೆಸ್ ಅದ್ಯಕ್ಷ ಶರಣು ವಾರದ್, ಮುಖಂಡರಾದ ಗೋಪಾಲ ರಾಠೋಡ, ಸೇವಾ ರಾಠೋಡ, ಅನಂದ ಸಂಕರ ರಾಠೋಡ, ಬಸವರಾಜ ಕೇಸ್ವಾರ, ಅನೀಲ ಶಿವಬೋ ಇದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…