ಬಿಸಿ ಬಿಸಿ ಸುದ್ದಿ

ಲಾಕ್ ಡೌನ್ ನಲ್ಲಿ ಜೀವನೋಪಾಯ ಕಳೆದುಕೊಂಡ ಕಾರ್ಮಿಕರಿಗೆ ಬಿಜೆಪಿ ಸರ್ಕಾರ ಎಲ್ಲಾ ಸೌಲಭ್ಯ ನೀಡಿದೆ

ಕಲಬುರಗಿ: 2020 ರಲ್ಲಿ ಲಾಕ್ ಡೌನ್ ಕಾರಣ, ಜೀವನೋಪಾಯವನ್ನು ಕಳೆದುಕೊಂಡ ಕಾರ್ಮಿಕರು, ಬಟ್ಟೆ, ಒಗೆಯುವವರು, ಕ್ಯಾಬ್ ಚಾಲಕರು ಮತ್ತು ಆಟೋ ಚಾಲಕರಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ಬಾರಿಯ ಪರಿಹಾರವಾಗಿ 5,000 ರೂ ಘೋಷಿಸಲಾಯ್ತು. 2020 ರಲ್ಲಿ ಘೋಷಿಸಲಾದ ಕೋವಿಡ್ ಪರಿಹಾರ ಪ್ಯಾಕೇಜ್ 23 ಲಕ್ಷ ಕಾರ್ಮಿಕರು, 60,000 ಬಟ್ಟೆ ಒಗೆಯುವವರು, 7.25 ಲಕ್ಷ ಆಟೋ ಮತ್ತು ಕ್ಯಾಬ್ ಚಾಲಕರಿಗೆ ಪರಿಣಾಮ ಬೀರಿದೆ. ರೈತರ ಮಕ್ಕಳ ಭವಿಷ್ಯವನ್ನು ಭದ್ರಪಡಿಸಲು ಬಿಜೆಪಿ ರಾಜ್ಯ ಸರ್ಕಾರವು 2021 ರಲ್ಲಿ ರತ ವಿದ್ಯಾನಿಧಿ ವಿದ್ಯಾರ್ಥಿವೇತನವನ್ನು ಜಾರಿಗೆ ತಂದೀತು. ನೇರ ಲಾಭ ವರ್ಗಾವಣೆಯ ಮೂಲಕ ಪ್ರತಿ ಮಗುವಿಗೆ 2,500 ರಿಂದ 11,000 ರೂ. ವರೆಗೂ ಕೊಡಲಾಯಿತು ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ್ ಹೇಳಿದರು.

ನಗರದ ಬಿಜೆಪಿ ವಿಭಾಗೀಯ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಯೋಜನೆಯನ್ನು ಭೂರಹಿತ ಕೃಷಿ ಕಾರ್ಮಿಕರು, ನೇಕಾರರು, ಮೀನುಗಾರರು, ಹಳದಿ ಬೋರ್ಡ್ ಟ್ಯಾಕ್ಸಿ ಚಾಲಕರು ಮತ್ತು ಇತ್ತೀಚೆಗೆ ಟ್ರೈಲರ್ ಮಕ್ಕಳಿಗೂ ವಿಸ್ತರಿಸಲಾಯಿತು. ಇ

ಲ್ಲಿಯವರೆಗೆ 11 ಲಕ್ಷ ವಿದ್ಯಾರ್ಥಿಗಳು ಒಟ್ಟು 75 ಕೋಟಿ ರೂ.ಗಳ ವಿದ್ಯಾರ್ಥಿ ವೇತನವನ್ನು ಪಡೆದಿದ್ದಾರೆ. ಬಿಜೆಪಿ ರಾಜ್ಯ ಸರ್ಕಾರವು ತನ್ನ 2023-24ರ ಬಜೆಟ್ನಲ್ಲಿ, ಗೃಹಿಣಿ ಶಕ್ತಿ ಯೋಜನೆಯಡಿ ಪ್ರತಿ ಮಹಿಳಾ ಭೂರಹಿತ ಕಾರ್ಮಿಕರಿಗೆ ತಿಂಗಳಿಗೆ 1,000 ರೂ.ಗಳನ್ನು ಒದಗಿಸುವುದಾಗಿ ಘೋಶಿಸಿತು ಎಂದು ತಿಳಿಸಿದರು.

20 ಕುರಿ ಮತ್ತು 1 ಮೇಕ ಘಟಕವನ್ನು ಸ್ಥಾಪಿಸಲು 20,000 ಫಲಾನುಭವಿಗಳಿಗೆ ತಲಾ 1.75 ಲಕ್ಷ ರೂ.ಗಳ ಆರ್ಥಿಕ ನೆರವು ನೀಡುವ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗೆ ಬಿಜೆಪಿ ರಾಜ್ಯ ಸರ್ಕಾರ 354 ಕೋಟಿ, ಬಿಜೆಪಿ ರಾಜ್ಯ ಸರ್ಕಾರವು 2021 22ರಲ್ಲಿ ಕಟ್ಟಡ ಕಾರ್ಮಿಕರ ಒಂದು ಲಕ್ಷ ಮಕ್ಕಳಿಗೆ 150 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ ಮತ್ತು 500 ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿದೆ. ಇದಲ್ಲದೆ, ಲಕ್ಷ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಒದಗಿಸಿದೆ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತಾತ್ಕಾಲಿಕ ವಸತಿಯನ್ನು ಒದಗಿಸಿದೆ. 72 ಲಕ್ತ ಅಸಂಘಟಿತ ಕಾರ್ಮಿಕರನ್ನು ಇ ಶ್ರಮ್ ಪೋರ್ಟಲ್ ಅಡಿಯಲ್ಲಿ ನೋಂದಾಯಿಸಲಾಗಿದ್ದು, ಅವರಿಗೆ ಸಾಮಾಜಿಕ ಭದ್ರತೆ ಪಡೆಯಲು ಅನುವು ಮಾಡಲಾಗೀದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೇ 2 ರಂದು ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರು ಕಲಬುರಗಿಯಲ್ಲಿ ಒಂದು ಐತಿಹಾಸಿಕ ರೋಡ್ ಶೋ ನಡೆಸಲಾಗುವುದು. ರೋಡ್ ಶೋನಲ್ಲಿ ಸುಮಾರ 4 ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರು ವಿದ್ಯಾಸಾಗರ್ ಕುಲ್ಕರ್ಣಿ, ಗ್ರಾಮಾಂತರ ಜಿಲ್ಲಾ ವಕ್ತಾರರು ಚಂದ್ರಶೇಖರ್ ಪರಸರೆಡ್ಡಿ, ನಗರ ಜಿಲ್ಲಾ ವಕ್ತಾರರು ಸಾಹೇಬ್ಗೌಡ, ನಗರ ಜಿಲ್ಲಾ ಸಹ ವಕ್ತಾರರು ಡಿ.ಎನ್.ಜೋಶಿ ಉಪಸ್ಥಿತರಿದ್ದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

9 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

9 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

9 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

9 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

9 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

9 hours ago