ಬಿಸಿ ಬಿಸಿ ಸುದ್ದಿ

ಚಿತ್ತಾಪುರ ಜನರು ಭಯದಿಂದ ಬದುಕುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ

ಕಲಬುರಗಿ: ತಾನು ದಾದಾಗಿರಿ ಶುರು ಮಾಡಿದರೆ ಕಾಂಗ್ರೆಸ್ ನವರು ಮನೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ ಹೇಳುತ್ತಾನೆ. ನೀನು ದಾದಾಗಿರಿ ಮಾಡುತ್ತಿದ್ದೀಯಾ ಅಂತ ತಾನೆ ನಿನ್ನ ಮೇಲೆ 40 ಕೇಸು ಬಿದ್ದಿವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕ‌ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.

ಇದೇ ಸಂದರ್ಭದಲ್ಲಿ ಪುಟ್ಟ ಬಾಲಕನೊಬ್ಬ ತಾನು ಕೂಡಿಟ್ಟಿದ್ದ ಹಣವನ್ನು ಪಕ್ಷಕ್ಕಾಗಿ ಬಳಸಿಕೊಳ್ಳಿ ಎಂದು ಶಾಸಕರಿಗೆ ನೀಡಿದ. ಆಗ ಪ್ರತಿಕ್ರಿಯಿಸಿದ ಪ್ರಿಯಾಂಕ್ ಆತನ ಪ್ರೀತಿಗೆ ತಾವು ಮಾರುಹೋಗಿದ್ದಾಗಿ ಹೇಳಿ ಸದರಿ ಹಣವನ್ನು ಆತನ ಶಿಕ್ಷಣಕ್ಕೆ ಬಳಸಿಕೊಳ್ಳಿ ಎಂದು ಆತನ ಪೋಷಕರಿಗೆ ಹೇಳಿದರು.

ಪೇಠ ಶಿರೂರು ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ ಚಿತ್ತಾಪುರದಲ್ಲಿ ಚುನಾವಣೆ ನಡೆಯುತ್ತಿದೆ ಎನಿಸುತ್ತಿಲ್ಲ ಬದಲಿಗೆ ಜನರು ಭಯದಿಂದ ಜೀವಿಸುತ್ತಿದ್ದಾರೆ ಎನಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಪೌಷ್ಠಿಕಾಂಶ ಹೊಂದಿದ ಮಕ್ಕಳಿಗಾಗಿ ವಿತರಿಸಲು ಉದ್ದೇಶಿಸಿದ ಹಾಲಿನ ಪುಡಿ ಕಳ್ಳತನ ಮಾಡಿ ಸಾಗಾಣಿಕೆ ಮಾಡಿದ್ದ ಆರೋಪ ಸಾಬೀತಾಗಿದ್ದರಿಂದ ಯಾದಗಿರಿ ಕೋರ್ಟ್ ಶಿಕ್ಷೆ ವಿಧಿಸಿದೆ ಅಂತವನಿಗೆ ಬಿಜೆಪಿಗರು ಟಿಕೇಟ್ ನೀಡಿದ್ದಾರೆ ಅವರಿಗೆ ನಾಚಿಕೆಯಾಗುವುದಿಲ್ಲವೇ? ಎಂದರು.

ಅವನಿಗೆ MLA ಎಂದರೆ ಅರ್ಥ ಗೊತ್ತಿಲ್ಲ. ಪೇಠ ಶಿರೂರು ಯಾವ ಪಂಚಾಯತ ನಲ್ಲಿ ಬರುತ್ತದೆ ಗೊತ್ತಿಲ್ಲ. ಅವನಿಗೆ ಕನ್ನಡ, ಹಿಂದಿ, ಗೋರಮಾಟಿ ಯಾವ ಭಾಷೆಯೂ ಬರಲ್ಲ. ಇಂಗ್ಲೀಷ್ ಬರುತ್ತೋ ಏನೋ ನನಗೆ ಗೊತ್ತಿಲ್ಲ ಎಂದು ತಟ್ಟನೆ ಕೇಳಿನೋಡಿ ಅವನಿಗೆ ಉತ್ತರ ಗೊತ್ತಿಲ್ಲ ಎಂದು ಛೇಡಿಸಿದರು.

ಅಭಿವೃದ್ಧಿ, ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ನನ್ನನ್ನು ಆಯ್ಕೆ ಮಾಡಿ. ಢಾಬಾ,‌ಜೈಲು‌ ಹಾಗೂ ಬೇಲ್ ಬೇಕಾದರೆ ಅವನನ್ನು ಆಯ್ಕೆ ಮಾಡಿ ಎಂದರು.

ಶರಣಗೌಡ ಮಾಲೀಪಾಟೀಲ, ಶಿವಯ್ಯ ಗುತ್ತೇದಾರ, ಭೀಮಣ್ಣ ಸಾಲಿ, ಯೂಸೂಫ್ ಸಾಬ್ ಸೇರಿದಂತೆ ಹಲವರಿದ್ದರು.

emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

1 hour ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

4 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

19 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

19 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

21 hours ago