ಸುರಪುರ:ನಗರದ ಝಂಡದಕೇರ ನಿವಾಸಿಯಾದ ದಿನೇಶಕುಮಾರ ಚಲುವಾದಿ ಎನ್ನುವ ವಿದ್ಯಾರ್ಥಿ ಕೇಂದ್ರ ಸರಕಾರದ ನೀಟ್ ಪರೀಕ್ಷೆಯಲ್ಲಿ 724 ಅಂಕಗಳಿಗೆ 572 ಅಂಕ ಪಡೆದು ಸಾಧನೆ ಮಾಡಿದ್ದಾನೆ.
ವಿದ್ಯಾರ್ಥಿ ದಿನೇಶ ಕುಮಾರ ಅವರ ತಂದೆ ರಾಯಪ್ಪ ಚಲುವಾದಿ ನಗರದ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಜವಾನರಾಗಿ ಕಾರ್ಯನಿರ್ವಹಿಸುತ್ತಿದ್ದು, ತಂದೆಯ ಶ್ರಮವನ್ನು ಅರಿತು ಕೊಂಡ ಮಗ ಈಗ ಸಾಧನೆ ಮಾಡಿರುವುದು ಎಲ್ಲರಲ್ಲಿ ಸಂತಸ ಮೂಡಿಸಿದೆ.ದಿನೇಶ ಕುಮಾರ ದೇಶದಲ್ಲಿಯ ಎಸ್.ಸಿ ಕೆಟಗೇರಿಯಲ್ಲಿ 1114 ನೇ ರ್ಯಾಂಕ್ ಪಡೆದಿದ್ದು, ದೇಶದ ಒಟ್ಟಾರೆ ರ್ಯಾಂಕ್‍ಲ್ಲಿ 47087ನೇ ಸ್ಥಾನದಲ್ಲಿದ್ದು ವಿದ್ಯಾರ್ಥಿಯ ಸಾಧನೆಗೆ ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸ್ಮನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ದಿನೇಶಕುಮಾರ ತಂದೆ ರಾಯಪ್ಪ ಸೇವೆ ಸಲ್ಲಿಸುತ್ತಿರುವ ನಗರದ ಡಿಸಿಸಿ ಬ್ಯಾಂಖ್ ಶಾಖೆಯಲ್ಲಿ ವ್ಯವಸ್ಥಾಪಕ ಶಿವಲಿಂಗಪ್ಪ ವೆಂಕಟಗಿರಿ,ಸಿಬ್ಬಂದಿಗಳಾದ ಚನ್ನಾರೆಡ್ಡಿ ಆನೆಸೂಗುರು,ಬಸವರಾಜ ಕುಂಬಾರ,ಸದಾಶಿವ ಮುಧೋಳ, ರಾಜಶೇಖರ, ನಾಗರಾಜ, ದೇವರಾಜ,ಮೌನೇಶ ಕಕ್ಕೇರ,ಮಲ್ಲಿಕಾರ್ಜುನ ಬಾದ್ಯಾಪುರ ಸೇರಿದಂತೆ ಅನೇಕರು ಹರ್ಷವ್ಯಕ್ತಪಡಿಸಿ ತಂದೆ ಮತ್ತು ಸಾಧನೆ ಮಾಡಿದ ಮಗ ದಿನೇಶಕುಮಾರ ಇಬ್ಬರಿಗೂ ಸನ್ಮಾನಿಸಿ ಗೌರವಿಸಿದ್ದಾರೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…
ಕಲಬುರಗಿ: ನಗರದ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ-ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನ…
ಶಹಾಬಾದ: ಮಾನವೀಯ ಮೌಲ್ಯಗಳು ವಿದ್ಯಾರ್ಥಿ ಯುವಜನರ ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕೆಂದು ಎಸ್ಎಸ್ ಮರುಗೋಳ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ.ಬಿ. ಬಿಲ್ಲವ…
ಶಹಾಪುರ : 26 : ಚಿಕ್ಕ ವಯಸ್ಸಿನಲ್ಲಿಯೆ ಹಿರಿದಾದ ಜ್ಞಾನವನ್ನು ಹೊಂದಿದ್ದ ಚೆನ್ನಬಸವಣ್ಣ ಷಟಸ್ಥಲ ಜ್ಞಾನಿ ಎಂದು ಕರೆಯಿಸಿಕೊಂಡರು. ಬಸವಣ್ಣನವರ…
ಶಹಾಬಾದ: ನಗರಸಭೆಯ ವಾರ್ಡ ನಂ.3 ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಜೀದ್ ಖಾನ್ ಜಮಾದಾರ ಅವರು ಗೆಲುವು ಸಾಧಿಸಿದ್ದಾರೆ. ನಗರದ…