ಚಾರಿತ್ರ್ಯವನ್ನು ವಿಕಸನಗೊಳಿಸುವ ಅಸ್ತ್ರವೆಂದರೆ ಶಿಕ್ಷಣ

0
37

ಶಹಾಬಾದ: ಶಿಕ್ಷಣ ಎಂದರೆ ಓದುವುದು ಮಾತ್ರವಲ್ಲ ಅದು ಮನುಷ್ಯನ ಜೀವನ ಹಾಗೂ ಚಾರಿತ್ರ್ಯವನ್ನು ವಿಕಸನಗೊಳಿಸುವ ಅಸ್ತ್ರ ಎಂದು ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ಮಂಗಳವಾರ ಹಳೆಶಹಾಬಾದನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಜ್ಞಾನ ವಿಕಾಸ ಯೋಜನೆಯಡಿ ಸಂಘದ ಸದಸ್ಯರಿಗೆ ಶಿಕ್ಷಣದ ಮಹತ್ವ ಮತ್ತು ಸರಕಾರಿ ಸೌಲಭ್ಯದ ಕುರಿತು ಆಯೋಜಿಸಲಾದ ಅರಿವು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಒಂದು ದೇಶವನ್ನು ನಾಶಮಾಡಲು ಯಾವುದೇ ಅಣುಬಾಂಬ ಪ್ರಯೋಗಿಸುವ ಅವಶ್ಯಕತೆಯಿಲ್ಲ.ಆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಅಸ್ತವ್ಯಸ್ತ್ಯ ಮಾಡಿದರೆ ಸಾಕು ಆ ದೇಶ ಅಧಃಪತನಗೊಳ್ಳುತ್ತದೆ ಎಂದು ಹಿರಿಯರು ಹೇಳಿದ ಮಾತು ಶಿಕ್ಷಣಕ್ಕೆ ಇರುವ ಪ್ರಾಮುಖ್ಯತೆ ತಿಳಿಸುತ್ತದೆ.ಆದ್ದರಿಂದ ಶಿಕ್ಷಣ ನಮ್ಮ ಬದುಕಿಗೆ ದಾರಿದೀಪವಾಗಬಲ್ಲದು ಹಾಗೂ ಮಾರ್ಗದರ್ಶಿಯಾಗಬಲ್ಲದು.ಒಳ್ಳೆಯ ಶಿಕ್ಷಣ ಮಕ್ಕಳಿಗೆ ನೀಡಿದರೆ ಅವರಲ್ಲಿ ಸಂಸ್ಕಾರ ಬೆಳೆಯುತ್ತದೆ.ಆಗ ಅವನ್ನನ್ನು ಸಮಾಜ ಗೌರವಿತವಾಗಿ ನಡೆದುಕೊಳ್ಳುತ್ತದೆ.ಅಲ್ಲದೇ ದೇಶ ಅಭಿವೃದ್ಧಿಯಾಗಬೇಕಾದರೂ ಶಿಕ್ಷಣ ಅವಶ್ಯಕತೆಯಿದೆ.ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದರು.

ಎಸ್.ಜಿ.ವರ್ಮಾ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ ಮಾತನಾಡಿ, ಜ್ಞಾನ ಯಾರು ಕಸಿದುಕೊಳ್ಳಲಾರದ ಅಮೂಲ್ಯ ಸಂಪತ್ತು.ಅದನ್ನು ಅಲಂಕರಿಸಿದ್ದೆಯಾದರೆ ಅವರಂತ ಸಿರಿವಂತರು ಜಗತ್ತಿನಲ್ಲಿ ಯಾರು ಇಲ್ಲ.ಗುಡಿಸಿನಲ್ಲಿ ಹುಟ್ಟಿದಂತವರು ಅರಮನೆಯಲ್ಲಿ ಮೆರೆಯುವ ಶಕ್ತಿ ಶಿಕ್ಷಣಕ್ಕಿದೆ.ಅದಕ್ಕಾಗಿಯೇ ಇಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್, ಅಬ್ದುಲ್ ಕಲಾಂ ಅವರಂತವರನ್ನು ನಾವು ಸ್ಮರಿಸುತ್ತೆವೆ.ಪಡೆದುಕೊಂಡ ವಿದ್ಯೆಯನ್ನು ಯಾರು ಕಳ್ಳತನ ಮಾಡಲು, ಪಾಲು ಕೇಳಲು ಸಾಧ್ಯವಿಲ್ಲ.ಅಂತಹ ವಿದ್ಯೆಯನ್ನು ಮಕ್ಕಳಿಗೆ ನೀಡುವ ಮೂಲಕ ಉತ್ತಮ ಸಮಾಜದ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕೆಂದು ಹೇಳಿದರಲ್ಲದೇ ಶಿಕ್ಷಣಕ್ಕೆ ಸಿಗುವ ಸರಕಾರಿ ಸೌಲಭ್ಯಗಳ ಕುರಿತು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸಂಘದ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕು.ರೇಖಾ, ಸೇವಾ ಪ್ರತಿನಿಧಿ ಅನುಜಾ, ನಿಲಾಂಬಿಕಾ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here