ಕಲಬುರಗಿ; ಜನಪದ ಉಳಿಸಿ ಬೆಳೆಸುವುದು ಗ್ರಾಮೀಣ ಭಾಗದ ಜನರ ಕೈಯಲ್ಲಿ ಮಾತ್ರ ಉಳಿದಿದೆ ಇಲ್ಲದಿದ್ದರೆ ಅಳಿವು ನಿಶ್ಚಿತ ಎಂದು ಉದ್ಯಮಿ ಸಿದ್ದು ಕಾಳ ಮಂದರಗಿ ಹೇಳಿದರು.
ನಗರದ ಚಿಮ್ಮಲಗಿ ಬಡಾವಣೆಯಲ್ಲಿ ಕನ್ನಡ ಜಾನಪದ ಪರಿಷತ್ತ ಕಲಬುರ್ಗಿ ತಾಲೂಕ ಉತ್ತರ ವಲಯದಿಂದ ಹಮ್ಮಿಕೊಂಡಿರುವ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವಿಸಿ ಮಾತನಾಡುತ್ತಾ ಒಬ್ಬರ ಬಾಯಿಯಿಂದ ಮತ್ತೊಬ್ಬರ ಬಾಯಿಗೆ ಸರಳವಾಗಿ ಸಮಾಜಕ್ಕೆ ಸಂದೇಶ ನೀಡುವ ಹಾಡುಗಳೆ ಜಾನಪದ. ಜನಪದ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ಜನಪದ ಸೊಗಡಿನಲ್ಲಿ ಮನುಷ್ಯರ ಒಬ್ಬರಿಗೊಬ್ಬರ ಮನಸ್ಸು ಕಟ್ಟಿ ಉತ್ತಮವಾದ ಸಮಾಜ ನಿರ್ಮಾಣ ಮಾಡುವ ಶಕ್ತಿ ಇದೆ. ಗ್ರಾಮೀಣ ಭಾಗದಲ್ಲಿ ಹಲವಾರು ಹಿರಿಯ ಕಲಾವಿದರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಅಂಥವರ ನೆರವಿಗೆ ಸರ್ಕಾರ ಮುಂದಾಗಬೇಕು ಹಾಗೂ ಜನಪದ ಗೀತೆಗಳನ್ನು ಲಿಖಿತ ರೂಪದಲ್ಲಿ ಹೊರತಂದು ಮುಂದಿನ ಮಕ್ಕಳಿಗೆ ಪರಿಚಯಿಸುವ ಕಾರ್ಯ ಮಾಡುವುದರೊಂದಿಗೆ ಜನಪದ ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಟ್ಟೂರ ಗ್ರಾಮದ ಕಲಾವಿದರಾದ ವಿಠ್ಠಲ ನಿಂಬಾಳೆ ಹಾಗೂ ಶಿವಶರಣಪ್ಪ ಪೊಲೀಸ ಪಾಟೀಲ ಅವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರಿಂದ ಸಂಗೀತ ಸೇವೆ ನೆರವೇರಿತು. ಕಾರ್ಯಕ್ರಮದಲ್ಲಿ ಜನಪದ ಕಲಾವಿದ ರಾಜು ಹೆಬ್ಬಾಳ, ಮಲ್ಲಿಕಾರ್ಜುನ ಹರಸೂರ, ಗುರುಲಿಂಗಪ್ಪ ಬಿರಬಿಟ್ಟೆ, ಶಿವರಾಜ ಸರಡಗಿ, ರಾಜಕುಮಾರ ಹರಸೂರ, ಮೋಹನನಂದ ಪೋಸ್ತೆ, ಖಂಡೇರಾವ ಪೊಲೀಸ ಪಾಟೀಲ, ಉದಯಕುಮಾರ ಬಿರಬಿಟ್ಟೆ, ಮಹಾಂತಪ್ಪ ಪೊಲೀಸ ಪಾಟೀಲ, ಬಾಬುರಾವ ಕುನಾಳೆ, ಮಹಾಂತಪ್ಪ ಪೊಲೀಸ ಪಾಟೀಲ,ಚಂದ್ರಭಾಗ ಹರಸೂರ,ಶಿವಾನಂದ ಪೊಲೀಸ ಪಾಟೀಲ,ಶರಣಪ್ಪ ಮೂಲಗೆ, ರಾಮು ಪೊಲೀಸ ಪಾಟೀಲ, ರಿಯಾಜ್ ಪಾಶಾ, ಸ್ವಾತಿ ಬಿರಬಿಟ್ಟೆ, ವಿಜಯಲಕ್ಷ್ಮಿ ಸರಡಗಿ, ಮಲ್ಲಮ್ಮ ಗಣಜಲಖೇಡ, ಮಹಾಂತೇಶ ಅಟ್ಟೂರ, , ಸಂತೋಷ ಗಣಜಲಖೇಡ, ಆನಂದ ಗಣಜಲಖೇಡ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…