ಜನಪದ ಲಿಖಿತ ರೂಪದಲ್ಲಿ ಹೊರ ಬರಲಿ

0
194

ಕಲಬುರಗಿ; ಜನಪದ  ಉಳಿಸಿ ಬೆಳೆಸುವುದು ಗ್ರಾಮೀಣ ಭಾಗದ ಜನರ ಕೈಯಲ್ಲಿ ಮಾತ್ರ ಉಳಿದಿದೆ ಇಲ್ಲದಿದ್ದರೆ  ಅಳಿವು ನಿಶ್ಚಿತ  ಎಂದು ಉದ್ಯಮಿ ಸಿದ್ದು ಕಾಳ ಮಂದರಗಿ ಹೇಳಿದರು.

ನಗರದ ಚಿಮ್ಮಲಗಿ ಬಡಾವಣೆಯಲ್ಲಿ ಕನ್ನಡ ಜಾನಪದ ಪರಿಷತ್ತ ಕಲಬುರ್ಗಿ ತಾಲೂಕ ಉತ್ತರ ವಲಯದಿಂದ ಹಮ್ಮಿಕೊಂಡಿರುವ ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಗೌರವಿಸಿ ಮಾತನಾಡುತ್ತಾ ಒಬ್ಬರ ಬಾಯಿಯಿಂದ ಮತ್ತೊಬ್ಬರ ಬಾಯಿಗೆ  ಸರಳವಾಗಿ ಸಮಾಜಕ್ಕೆ ಸಂದೇಶ ನೀಡುವ ಹಾಡುಗಳೆ ಜಾನಪದ. ಜನಪದ ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಕನ್ನಡ ಜಾನಪದ ಪರಿಷತ್ ಉತ್ತರ ವಲಯದ ಅಧ್ಯಕ್ಷರಾದ  ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ಜನಪದ ಸೊಗಡಿನಲ್ಲಿ ಮನುಷ್ಯರ ಒಬ್ಬರಿಗೊಬ್ಬರ ಮನಸ್ಸು ಕಟ್ಟಿ ಉತ್ತಮವಾದ ಸಮಾಜ ನಿರ್ಮಾಣ ಮಾಡುವ ಶಕ್ತಿ ಇದೆ.   ಗ್ರಾಮೀಣ ಭಾಗದಲ್ಲಿ ಹಲವಾರು ಹಿರಿಯ ಕಲಾವಿದರು ಸಂಕಷ್ಟದಲ್ಲಿ   ಜೀವನ ಸಾಗಿಸುತ್ತಿದ್ದಾರೆ ಅಂಥವರ ನೆರವಿಗೆ ಸರ್ಕಾರ  ಮುಂದಾಗಬೇಕು ಹಾಗೂ ಜನಪದ ಗೀತೆಗಳನ್ನು ಲಿಖಿತ ರೂಪದಲ್ಲಿ ಹೊರತಂದು ಮುಂದಿನ ಮಕ್ಕಳಿಗೆ ಪರಿಚಯಿಸುವ ಕಾರ್ಯ ಮಾಡುವುದರೊಂದಿಗೆ ಜನಪದ ಶಾಶ್ವತವಾಗಿ ಉಳಿಸುವ ಕಾರ್ಯ ಮಾಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಟ್ಟೂರ ಗ್ರಾಮದ ಕಲಾವಿದರಾದ ವಿಠ್ಠಲ ನಿಂಬಾಳೆ  ಹಾಗೂ ಶಿವಶರಣಪ್ಪ ಪೊಲೀಸ ಪಾಟೀಲ  ಅವರಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಲವಾರು ಕಲಾವಿದರಿಂದ ಸಂಗೀತ ಸೇವೆ ನೆರವೇರಿತು. ಕಾರ್ಯಕ್ರಮದಲ್ಲಿ ಜನಪದ ಕಲಾವಿದ ರಾಜು ಹೆಬ್ಬಾಳ, ಮಲ್ಲಿಕಾರ್ಜುನ ಹರಸೂರ, ಗುರುಲಿಂಗಪ್ಪ ಬಿರಬಿಟ್ಟೆ, ಶಿವರಾಜ ಸರಡಗಿ, ರಾಜಕುಮಾರ ಹರಸೂರ, ಮೋಹನನಂದ ಪೋಸ್ತೆ, ಖಂಡೇರಾವ ಪೊಲೀಸ ಪಾಟೀಲ, ಉದಯಕುಮಾರ ಬಿರಬಿಟ್ಟೆ, ಮಹಾಂತಪ್ಪ ಪೊಲೀಸ ಪಾಟೀಲ, ಬಾಬುರಾವ ಕುನಾಳೆ, ಮಹಾಂತಪ್ಪ ಪೊಲೀಸ ಪಾಟೀಲ,ಚಂದ್ರಭಾಗ ಹರಸೂರ,ಶಿವಾನಂದ ಪೊಲೀಸ ಪಾಟೀಲ,ಶರಣಪ್ಪ ಮೂಲಗೆ, ರಾಮು ಪೊಲೀಸ ಪಾಟೀಲ, ರಿಯಾಜ್ ಪಾಶಾ, ಸ್ವಾತಿ ಬಿರಬಿಟ್ಟೆ, ವಿಜಯಲಕ್ಷ್ಮಿ ಸರಡಗಿ, ಮಲ್ಲಮ್ಮ ಗಣಜಲಖೇಡ, ಮಹಾಂತೇಶ ಅಟ್ಟೂರ, , ಸಂತೋಷ ಗಣಜಲಖೇಡ, ಆನಂದ ಗಣಜಲಖೇಡ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here