ಬಿಸಿ ಬಿಸಿ ಸುದ್ದಿ

ಶರಣ ತತ್ವ ಸರ್ವಕಾಲಕ್ಕು ಪ್ರಸ್ತುತ: ಲಕ್ಷ್ಮೀಪುರ ಶ್ರೀ

ಸುರಪುರ: ಬಸವಾದಿ ಶರಣರು ಈ ನಾಡಿಗೆ ಬಳುವಳಿಯಾಗಿ ನೀಡಿದ ಶರಣತತ್ವ ಚಿಂತನೆಗಳು ಸರ್ವಕಾಲಕ್ಕು ಪ್ರಸ್ತುತವಾಗಿವೆ ಎಂದು ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವಸ್ತಾನದ ಪೂಜ್ಯಶ್ರೀ ಬಸವಲಿಂಗಯ್ಯ ಸ್ವಾಮಿಗಳು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸುರಪುರ ತಾಲೂಕ ಘಟಕದ ವತಿಯಿಂದ ಶ್ರೀ ಮಠದಲ್ಲಿ ಇಂದು ಆಯೋಜಿಸಲಾಗಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದಿನ ಯುವ ಜನಾಂಗ ಮತ್ತು ವಿಧ್ಯಾರ್ಥಿ ಸಮುದಾಯ ಶರಣತತ್ವ ಚಿಂತನೆ, ವಚನ ಸಾಹಿತ್ಯ, ಅಭ್ಯಾಸಿಸುವುದು ಅತ್ಯಂತ ಅವಶ್ಯಕವಾಗಿದ್ದು ಆ ದಿಶೆಯಲ್ಲಿ ಕಳೆದ ೩ ದಶಕಗಳಿಂದ ಶರಣ ಸಾಹಿತ್ಯ ಪರಿಷತ್ ಕಾರ್ಯಾನಿರ್ವಹಿಸುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ ಎಂದ ಅವರು ಬರುವ ದಿನಗಳಲ್ಲಿ ಶ್ರೀ ಮಠದ ಮೂಲಕ ೧೦೦ ಜನ ಸದಸ್ಯರನ್ನು ಶರಣ ಸಾಹಿತ್ಯ ಪರಿಷತ್ತಿಗೆ ನೊಂದಾಯಿಸಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ತಾಲೂಕ ಘಟಕದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ, ಸೂತ್ತುರು ಶ್ರೀ ಮಠದ ಪೂಜ್ಯ ಲಿಂ. ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಜಿಗಳ ದೂರದೃಷ್ಟಿಯ ಫಲವಾಗಿ ಉದಯಿಸಿರುವ ಶರಣ ಸಾಹಿತ್ಯ ಪರಿಷತ್ತು ಕರ್ನಾಟಕ ಪ್ರತಿ ಜಿಲ್ಲೆ, ತಾಲೂಕು, ಹೊಬಳಿ, ವಲಯ ಘಟಗಳನ್ನು ಹೊಂದಿ ಕಾರ್ಯನಿರ್ವಹಿಸುವುದರ ಜೊತೆಗೆ ಕರ್ನಾಟಕದ ಆಚೆಗೆ ಅನೇಕ ಹೊರನಾಡು ಮತ್ತು ಗಡಿನಾಡು ಘಟಕಗಳನ್ನು ಹೊಂದಿ ಶರಣ ಪ್ರಸಾರದಲ್ಲಿ ತೊಡಗಿಕೊಂಡಿದೆ ಅಲ್ಲದೆ ಗೊ.ರು.ಚನ್ನಬಸಪ್ಪ, ಚಂದ್ರಕಾಂತ ಬೆಲ್ಲದ, ಬಸವರಾಜ ಸಾದರ, ಅಪ್ಪಾರಾವ ಅಕ್ಕೊಣಿ, ಜರಗನಳ್ಳಿ ಶಿವಶಂಕರ ಇವರುಗಳ ಪ್ರಯತ್ನದ ಫಲವಾಗಿ ರಾಜ್ಯದ ತುಂಬಾ ಕ್ರೀಯಾಶಿಲವಾಗಿ ಕಾರ್ಯಾನಿರ್ವಹಿಸುತ್ತಿದೆ ಅನೇಕ ಸಮ್ಮೇಳನ, ಸಮಾರಂಭ, ಕಾರ್ಯಾಗಾರ, ವಿಚಾರ ಸಂಕಿರ್ಣ, ಉಪನ್ಯಾಸ, ಸಂವಾದಗಳ ಮೂಲಕ ಜನಮಾನಸವಾಗಿರುವ ಶರಣಸಾಹಿತ್ಯ ಪರಿಷತ್ತು ರಾಜ್ಯದ ತುಂಬಾ ಸದಸ್ಯತ್ವ ಅಭಿಯಾನ ನಡೆಸುತ್ತಾ ಕ್ರೀಯಾಶಿಲವಾಗಿ ಕಾರ್ಯಾನಿರ್ವಹಿಸುತ್ತುದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಿವಶರಣಪ್ಪ ಹೆಡಿಗಿನಾಳ, ವಿರಭದ್ರಪ್ಪ ಕುಂಬಾರ, ಶಿವರಾಜ ಕಲಿಕೇರಿ, ಶಾಂತುನಾಯಕ, ಅಂಬ್ರೇಶ ಕುಂಬಾರ, ಬಸವರಾಜ ಚನ್ನಪಟ್ನ, ಅಂಬರೇಶ ಪರತಾಬಾದ ಸೇರಿದಂತೆ ಇತರರು ಇದ್ದರು. ಮೌನೇಶ ಐನಾಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಹೃದಯಾಘಾತದಿಂದ ನಿಧನ

ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…

21 mins ago

ಜಲಮೂಲ, ಪರಿಸರ ಸಂರಕ್ಷಣೆಯತ್ತ ಯುವಜನತೆ ಸಕ್ರಿಯರಾಗಲಿ: ಹುಲಿಕುಂಟೆ ಮೂರ್ತಿ

ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…

44 mins ago

ಕಲಬುರಗಿ ಜಿಲ್ಲಾ ಗಾಣಿಗ ನೌಕರರ ಸಭೆ 17ಕ್ಕೆ: ಸಂಗನಗೌಡ ಪಾಟೀಲ್‌

ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…

3 hours ago

371 (ಜೆ) ಸಮರ್ಪಕ ಅನುಷ್ಠಾನಗೊಳಿಸದಿದ್ದರೆ ಮತ್ತೊಮ್ಮೆ ಉಗ್ರ ಹೋರಾಟದ ಎಚ್ಚರಿಕೆ

ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…

3 hours ago

ಆದರ್ಶದ ಬದುಕಿಗೆ ಯಾವೊತ್ತೂ ಬೆಲೆ: ಮಹಾಂತ ಸ್ವಾಮೀಜಿ

ಕಲಬುರಗಿ: ಮನುಷ್ಯ ಆದರ್ಶದ ಬದುಕನ್ನು ಕಳೆದಾಗ ಬೆಲೆಯುಳ್ಳ ಬದುಕಾಗುತ್ತದೆ. ಆಗ ಆ ಬದುಕಿಗೆ ಮೌಲ್ಯ, ಅರ್ಥ ಬರುತ್ತದೆ ಎಂದು ಮುದಗಲ್-…

3 hours ago

ರೈತರ, ವಿದ್ಯಾರ್ಥಿಗಳ ಸಮಸ್ಯ ಪರಿಹಾರಕ್ಕೆ ಒತ್ತಾಯ: ಶರಣಬಸಪ್ಪ ದೊಡ್ಮನಿ

ಕಲಬುರಗಿ : ಬಡವರ ಪರವಾಗಿ ಹಾಗೂ ಶಾಲಾ ಕಾಲೇಜು ವಸತಿ ನಿಲಯಗಳಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಮಾಜಕಲ್ಯಾಣ…

16 hours ago