ಕಲಬುರಗಿ: ಗ್ರಾಮೀಣ ಭಾಗದ ಜನಪದ ಕಲಾವಿದರು ಬಡತನ ಜೀವನ ಸಾಗಿಸಿ ಜನಪದ ಜೀವಂತವಾಗಿರಿಸಿದ್ದಾರೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು ನುಡಿದರು.

ಕಲಬುರಗಿ ತಾಲೂಕಿನ ತಾಜ ಸುಲ್ತಾನಪುರ ಗ್ರಾಮದ ಚಿನ್ನದಕಂತಿ ಚಿಕ್ಕವರೇಶ್ವರ ಸಂಸ್ಥಾನ ಹಿರೇಮಠದ ಆವರಣದಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಾಗೂ ಶ್ರೀಮಠದ ಸಂಯುಕ್ತ ಆಶ್ರಯದಲ್ಲಿ ಸಮಾಜ ಸೇವಕ ನ್ಯಾಯವಾದಿ ಹಣಮಂತರಾಯ ಅಟ್ಟೂರ ಅವರ 26 ವರ್ಷದ ಸುಧೀರ್ಘ ಸಮಾಜ ಸೇವೆಯ ನಿಮಿತ್ಯ “ಜನಪದ ರಕ್ಷಕ” ಪ್ರಶಸ್ತಿ ನೀಡಿ ಆಶೀರ್ವಚನ ನೀಡುತ್ತಾ  ಜನಪದ ಕಲಾವಿದರು ಪತ್ರಿಕೆ ಹಾಗೂ ಮಾಧ್ಯಮದ ಯಾವುದೇ ಪ್ರಚಾರವಿಲ್ಲದೆ ನಿರಂತರವಾಗಿ ಹಗಲಿರುಳು ಸೇವಗೈದ  ಸಮಾಜದ ಬಹುದೊಡ್ಡ ಆಸ್ತಿಯಾಗಿದ್ದಾರೆ.

ಹಲವಾರು ಜನ ಕಲಾವಿದರು ಬಡತನ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ ಸರಕಾರ ಇಂತಹ  ಕಲಾವಿದರನ್ನು ಗುರುತಿಸಿ, ಮಶಾಸನ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಜೊತೆಗೆ ಅವರಿಗಾಗಿಯೇ ಒಂದು ಗ್ಯಾರಂಟಿ ಯೋಜನೆ ಜಾರಿಗೆ ಮಾಡಿ ಕಲಾವಿದರ ಬಾಳಿಗೆ ಬೆಳಕಾಗಲಿ. ಸಂಘದ ಅಧ್ಯಕ್ಷರಾದ ನ್ಯಾಯವಾದಿ ಅಟ್ಟೂರರು ಯಾವುದೇ ಪ್ರಚಾರ ಬಯಸದೆ ಸಮಾಜ ಸೇವೆ ಹಾಗೂ ಹೋರಾಟ ಮಾಡಿ ಎಲ್ಲೊ ಇರುವ ಕಲಾವಿದರನ್ನು ಗೌರವಿಸಿ ವೇದಿಕೆ ಕೊಟ್ಟು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಾ ನಿಜವಾದ ಸಮಾಜ ಸೇವಕರಾಗಿದ್ದಾರೆ. ಸಂಘವು ಹಮ್ಮಿಕೊಂಡಿರುವ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸರ್ವರಿಗೂ ಮಾದರಿಯಾಗಲಿ ಎಂದು ಮಾರ್ಮಿಕವಾಗಿ ನುಡಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಲವಾರು ಜನ ಕಲಾವಿದರಿಗೆ “ಜನಪದ ರಕ್ಷಕ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಾದ ಜಂಬಗಾ (ಬಿ) ಗ್ರಾಮದ ಬಸವರಾಜ ಪೊಲೀಸ ಪಾಟೀಲ, ಮಾಶಾಳ ಗ್ರಾಮದ  ಬಸಣ್ಣಾ ವಗ್ಗಾಲೆ, ಜನಪದ ಕಲಾವಿದ ರಾಜು ಹೆಬ್ಬಾಳ, ತಾಜ ಸುಲ್ತಾನಪುರ ಗ್ರಾಮದ  ರೇವಣಸಿದ್ದಯ್ಯ ಸ್ವಾಮಿ ಬೇಲೂರ, ನಾಗೇಂದ್ರಪ್ಪಾ ನಾಗೂರ, ಲಕ್ಷ್ಮಿಬಾಯಿ ಮಡಿವಾಳ, ಶ್ರೀಕಾಂತಮ್ಮ ಮಡಿವಾಳ, ಮಹಾದೇವಿ ಚಿಮಾಣಿ ಇವರಿಗೆ  ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಿವಶರಣಪ್ಪಾ ಹಿರೇಮನಿ, ರವಿಕುಮಾರ ಶಹಪುರಕರ, ಬಾಬುರಾವ ಕಲಕೋರಿ, ನಾಗೇಂದ್ರ ದೇಗಲಮಡ್ಡಿ, ವೀರಯ್ಯ ಬಾಳಿ, ಭೀಮಾಶಂಕರ ಹಾಂವಾ, ಹಣಮಂತರಾಯ ಅಟ್ಟೂರ, ಮಲ್ಲಿಕಾರ್ಜುನ ಮುದ್ದಾಳ, ವಿಠ್ಠಲ ಕುಂಬಾರ, ಚಂದ್ರಕಾಂತ ಚಿತಪಳ್ಳಿ, ವಿಠಾಬಾಯಿ ಅಟ್ಟೂರ, ಯಶವಂತರಾವ ಭೂತೆ, ಸಂಗೀತಾ ಹಂಗರಗಿ, ರಾಮೇಶ್ವರಿ ಅಟ್ಟೂರ, ಕಾಂಚನಾ ಹಂಗರಗಿ, ಸೇರಿದಂತೆ ಅನೇಕ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

8 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

11 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

11 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

11 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

11 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

11 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420