ನಿದಿರೆ ಇರದ ಇರಳು ಗಜಲ್ ಸಂಕಲನ ಲೋಕಾರ್ಪಣೆ

ಶಹಾಬಾದ: ನಿದಿರೆ ಇರದೆ ಇರುಳನ್ನು ನಾವು ಕಳೆಯುತ್ತೇವೆ ಎಂದರೆ ಮನದಲ್ಲಿ ಚಿಂತೆ ಇದೆ ಎಂದರ್ಥ. ಈ ಇರುಳ ಚಿಂತೆಯನ್ನು ಯಾರು ಚಿಂತನವಾಗಿ ಬದಲಾಯಿಸಿಕೊಳ್ಳುತ್ತಾರೋ ಅವರು ನಿದಿರೆ ಇರದ ಇರುಳುಗಳನ್ನು ಸಾರ್ಥಕವಾಗಿ ಕಳೆಯುತ್ತಾರೆ. ಅವರ ಕತ್ತಲ ಚಿಂತನೆಗಳು ಎμÉ್ಟೂೀ ಜನರಿಗೆ ಬೆಳಕಾಗಿ ಬಿಡುತ್ತವೆ ಎಂದು ಹಿರಿಯ ಕಲಾವಿದ ಸಂಜೀವ.ಎಮ್ ಹೇಳಿದರು.

ಅವರು ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಹಮ್ಮಿಕೊಂಡಿದ್ದ ಮಂಡಲಗಿರಿ ಪ್ರಸನ್ನ ಅವರ ರಚಿತ ನಿದಿರೆ ಇರದ ಇರಳು ಗಜಲ್ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.

ಒಬ್ಬರಿಗೆ ಸಾಹಿತ್ಯ ರಚನೆಯ ಹವ್ಯಾಸ ಇರುತ್ತದೆ. ಅಪ್ಪಟ ಕನ್ನಡ ಪ್ರೇಮಿ, ಕಥೆ, ಕವಿತೆ ಬರಿಯುತ್ತಿರುತ್ತಾರೆ. ಆದರೆ ಬದುಕು ನಡೀಬೇಕಲ್ವಾ!? ಅದಕ್ಕೆ ನೌಕರಿಗಾಗಿ ಅದರಲ್ಲಿ ತಲ್ಲೀನರಾಗಿ ಬರವಣಿಗೆಯನ್ನು ಮೊಟಕುಗೊಳಿಸುತ್ತಾರೆ, ಪ್ರಸನ್ನ ಅವರು ವೃತ್ತಿಯನ್ನೇ ಬದಿಗೊತ್ತಿ ಅದರಿಂದ ಮುಕ್ತಿ ಪಡೆದು ಸಾಹಿತ್ಯವನ್ನೇ ಬದುಕಾಗಿಸಿ ಕೊಂಡವರು ಎಂದರು.

ಡಾ. ಮಲ್ಲಿನಾಥ ತಳವಾರ ಮಾತನಾಡಿ, ಮೂಲ ಅರೆಬಿಕ್, ಪರ್ಷಿಯನ್ ಉರ್ದುವಿನಲ್ಲಿನ ಗಜಲ್ ಗಳನ್ನು ಸುಂದರವಾಗಿ, ಮಧುರವಾಗಿ ಹಾಡಲಾಗುತ್ತದೆ, ಮೂಲತ ಇದು ಹಾಡುಗಬ್ಬ. ಹಾಡಲಿಕ್ಕೆ ಬರುವಂತೆಯೇ ಮೂಲ ಗಜಲ್ ಇರಬೇಕಾದ್ದು ಅತ್ಯವಶ್ಯಕ ಎಂದರು.
ಕನ್ನಡ ಕಾವ್ಯಲೋಕಕ್ಕೆ ಕಾಲಿರಿಸಿದ್ದು ಅರಬ್ಬೀ ಮೂಲದ “ ಗಜಲ್ “ ಕಾವ್ಯ ಪ್ರಕಾರ. ಇದೂ ಸಹ ಕನ್ನಡಕ್ಕೆ ಕಾವ್ಯಲೋಕದಲ್ಲಿ ಹೊಸ ಪ್ರಯೋಗವೇ. ಉರ್ದು ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದಿದ್ದ ಖ್ಯಾತ ಕವಿ ಶಾಂತರಸರು ಗಜಲ್ ನ್ನು ಕನ್ನಡಕ್ಕೆ ಒಗ್ಗಿಸಲು ಯತ್ನಿಸಿ ಸಫಲರಾದರು. ಮಂಡಲಗಿರಿ ಪ್ರಸನ್ನ ಅವರ ನಿದಿರೆ ಇರದ ಇರಳು. 61 ಗಜಲ್ಗಳ ಈ ಕೃತಿ. ಬದುಕಿನ ಅನೇಕ ಮಜಲ್ಗಳ ಕನ್ನಡಿ. ಪ್ರೇಮವಿದೆ, ಮೋಹವಿದೆ, ಸರಸವಿದೆ, ವಿರಸವಿದೆ, ವಿರಹದ ನೋವಿನ ಜೊತೆ, ತುಸು ಕ್ರೋಧವೂ ಇದೆ. ಈ ಎಲ್ಲಾ ಲಕ್ಷಣಗಳುಳ್ಳ ಗಜಲ್ಗಳನ್ನು ಓದುತ್ತಾ ಸಾಗಿದರೆ ಕೆಲವಷ್ಟು ಗಜಲ್ ಗಳ ಸಾಲುಗಳು ಮುಂದೆ ಓದುವಾಗಲೂ ಮತ್ತೆ ಮತ್ತೆ ಕಾಡುತ್ತವೆ, ಪುಟ ಹಿಂದೆ ತಿರುಗಿಸಿಕೊಂಡು ಓದಿಸಿಕೊಳ್ಳುತ್ತವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ ವಹಿಸಿಕೊಂಡಿದ್ದರು. ಗಜಲ್ ಲೇಖಕಕರಾದ ಮಂಡಲಗಿರಿ ಪ್ರಸನ್ನ ಮಾತನಾಡಿದರು.

ವಾಸುದೇವ ಚಹ್ವಾಣ ಸ್ವಾಗತಿಸಿದರು, ಲೋಹಿತ ಕಟ್ಟಿ ನಿರೂಪಿಸಿದರು, ಮರಲಿಂಗ ಯಾದಗಿರಿ ವಂದಿಸಿದರು. ಈ ಸಂಧರ್ಭದಲ್ಲಿ ಕನಕಪ್ಪ ದಂಡಗುಲಕರ, ಶರಣು ವಸ್ತ್ರದ, ಬಸವರಾಜ ಮದ್ದರಕಿ, ನಿಂಗಪ್ಪ ಹುಳಗೋಳ, ರಾಜಶೇಖರ ದೇವರಮನಿ, ಅನಿಲ ಮೈನಾಳಕರ, ವಿಶ್ವನಾಥ ತೊಟ್ನಳ್ಳಿ, ರವಿ ದಾಚಂಪಲ್ಲಿ, ಖಾಜಾಪಟೇಲ, ಗುರುಪ್ರಸಾದ ಇದ್ದರು.

ಪ್ರೇಮ, ಭಾವ, ವಿರಹ ಇರಬೇಕು ಅದು ಹೇಗಿರಬೇಕೆಂದರೆ ಓದುಗನ, ಕೇಳುಗನ ಮನಸನ್ನು ಕರಗಿಸಬೇಕು, ಗಜಲ್ ನ ಸಾಗರದ ಅಲೆ ಓದುಗನ ಮನದಾಳದ ತೀರವನ್ನು ತಲುಪಿ ಸೆಳೆಯಬೇಕು. ತನ್ನ ಮೃದು ಮಧುರ ಭಾವದಿಂದಲೇ ಸಹೃದಯನ ಕಣ್ಣಂಚಿನಲ್ಲಿ ಒಂದು ಹನಿ ತಂದರೆ, ಹೃದಯ ಅರಿಯದ ನೋವಿನ ಭಾವದಿಂದ ನಲುಗಿದರೆ ಅದು ಗಜಲ್ ನ ಸಾರ್ಥಕತೆ- ಮಂಡಲಗಿರಿ ಪ್ರಸನ್ನ ಗಜಲ್ ಲೇಖಕರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

4 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

7 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

7 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

7 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

7 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420