ಬಿಸಿ ಬಿಸಿ ಸುದ್ದಿ

ಬಸವಣ್ಣನವರನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮೌಢ್ಯದಿಂದ ಹೊರಬರಲು ಸಾಧ್ಯ

ಶಹಾಬಾದ: ಲಿಂಗಾಯತರು ಬಸವಣ್ಣನವರನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಮೌಢ್ಯದಿಂದ ಹೊರಬರಲು ಸಾಧ್ಯ ಎಂದು ಶಹಾಪೂರದ ಬಸವ ಮಾರ್ಗ ಪ್ರತಿಷ್ಠಾನದ ಶರಣ ಚಿಂತಕ ಹಾಗೂ ಬರಹಗಾರ ವಿಶ್ವರಾಧ್ಯ ಸತ್ಯಂಪೇಟೆ ಹೇಳಿದರು.

ಅವರು ತಾಲೂಕಿನ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಪರ್ಯಂತ ಆಯೋಜಿಸಲಾದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.

ಇಂದಿಗೂ ಬಸವಣ್ಣನವರನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದರಿಂದ ಮೌಢ್ಯಕ್ಕೆ ಒಳಗಾಗಿ ಬದುಕಿನಲ್ಲಿ ಜಂಜಾಟವನ್ನು ಎದುರಿಸುತ್ತಾ ಜೀವನ ಕಳೆಯುತ್ತಿದ್ದೆವೆ. ಸಮಾಜ ಪರಿವರ್ತನೆಯ ಹರಕಾರ ಬಸವಣ್ಣನವರು ಪಟ್ಟಭದ್ರರರನ್ನು ಮಟ್ಟ ಹಾಕುವ ಮೂಲಕ ಸಮಾಜದಲ್ಲಿದ್ದ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಿದರು. ಸ್ಥಾವರ ಗುಡಿಯಲ್ಲಿರುವ ದೇವರು ಕೇವಲ ಕೆಲವರ ಸ್ವತ್ತು ಎಂಬುದನ್ನು ಮನಗಾಣಿಸಿದರು. ಜನ ಸಾಮಾನ್ಯರಿಗೆ ಕಾಲೇಕಂಬ ದೇಹವೇ ದೇಗುಲ ಎಂಬ ಅರಿವನ್ನುಂಟು ಮಾಡಿ ಮನುಷ್ಯನನ್ನು ದೇವರ ಎತ್ತರಕ್ಕೆ ಏರಿಸಿದರು.

ಪಟ್ಟಭದ್ರ ಶಕ್ತಿಗಳು ಜೋತಿಷ್ಯ, ವಾಸ್ತು,ಪಂಚಾಂಗ, ಸ್ವರ್ಗ- ನರಕಗಳ ಭ್ರಾಮಕ ಲೋಕದಲ್ಲಿ ಇರುವಂತೆ ಹುನ್ನಾರ ಹೂಡಿ ಜನರನ್ನು ವಾಸ್ತವದತ್ತ ಮುಖ ಮಾಡದಂತೆ ತಡೆದರು. ನಿಜವಾದ ಧರ್ಮ ಜನತೆಯಲ್ಲಿ ನಿರ್ಭಯತೆಯನ್ನು ಬೆಳೆಸಬೇಕು. ವೈಚಾರಿಕತೆಯನ್ನು ವೈಜ್ಞಾನಿಕ ಮನೋಭಾವವನ್ನು ಉಂಟು ಮಾಡಬೇಕು. ಆದರೆ ಧರ್ಮದ ವಿಶಾಲಾರ್ಥ ಇಂದು ಮರೆಯಾಗಿ ಭಯವೇ ಧರ್ಮದ ಶಕ್ತಿ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ರಾಹು ಕಾಲ ಗುಳಿಕ ಕಾಲಗಳನ್ನು ಸೃಷ್ಟಿ ಮಾಡಿದ್ದಾನೆ ಹೊರತು ದೇವರು ಇದನ್ನು ಸೃಜಿಸಲಿಲ್ಲ. ಆಚಾರವೇ ಸ್ವರ್ಗ- ಅನಾಚಾರವೆ ನರಕ ಎನ್ನುವ ಮಾತುಗಳ ಮೂಲಕ ಶರಣರು ಇಂದಿನ ಬದುಕು ವಾಸ್ತವವಾದುದು. ಸತ್ತ ಮೇಲೆ ಸ್ವರ್ಗ ನರಕ ಕಲ್ಪನೆಯನ್ನು ಶರಣರು ಅಲ್ಲಗಳೆಯುತ್ತಾರೆ. ಆಚಾರ ವಿಚಾರ ಸದ್ಗುಣ ಸಂಪನ್ನ ವ್ಯಕ್ತಿತ್ವ ಸ್ವರ್ಗವನ್ನು ಉಂಟು ಮಾಡುತ್ತದೆ. ಕೆಟ್ಟವರ ಗೆಳೆತನ, ಅವಿಚಾರ, ಅಸಂಗತ ನಡವಳಿಕೆಗಳು ನರಕವನ್ನು ಸೃಷ್ಟಿಸುತ್ತವೆ ಎಂದವರು ವಚನಗಳೊಂದಿಗೆ ವಿವರಿಸಿದರು.

ರಾವೂರಿನ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ, ಕಾಯಕ-ದಾಸೋಹ ತತ್ವವನ್ನು ಇಡೀ ಜಗತ್ತಿಗೆ ಸಾರುವ ಮೂಲಕ ಪ್ರತಿಯೊಬ್ಬರೂ ಕಾಯಕ ಜೀವಿಗಳಾಗಬೇಕೆಂದು ತಿಳಿಸಿದವರು ಬಸವಣ್ಣನವರು.ವೈಜ್ಞಾನಿಕತೆ,ವೈಚಾರಿಕತೆ, ಬೆಳೆಸುವ ಮೂಲಕ ಸಮಾಜದಲ್ಲಿನ ಜಿಡ್ಡುಗಟ್ಟಿದ್ದ ಮೌಢ್ಯವನ್ನು ತೊಲಗಿಸಿ ಸುಂದರ ಸಮಾಜದ ನಿರ್ಮಾಣ ಮಾಡಿದರು.ಅವರ ತತ್ವಗಳ ಅನುಕರಣೆ ಮಾಡುವ ಅವಶ್ಯಕತೆಯಿದೆ ಎಂದರು.

ಗದುಗಿನ ಪ್ರವಚನಕಾರರಾದ ಗಿರಿಜಕ್ಕ ಧರ್ಮರೆಡ್ಡಿ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಮತ್ತು ವೀರಶೈವ ಸಮಾಜದ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಉದ್ಯಮಿ ಶಶಿಕಾಂತ ಪಾಟೀಲ ವೇದಿಕೆಯ ಮೇಲಿದ್ದರು.ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್ ಅಧ್ಯಕ್ಷತೆ ವಹಿಸಿದ್ದರು.

ಬಸವ ಸಮಿತಿಯ ಪದಾಧಿಕಾರಿಗಳಾದ ಅಮೃತ ಮಾನಕರ್,ರೇವಣಸಿದ್ದಪ್ಪ ಮುಸ್ತಾರಿ,ಶಿವಪುತ್ರ ಕುಂಬಾರ, ಅಮರಪ್ಪ ಹೀರಾಳ ಸೇರಿದಂತೆ ಶಾಲಾ ಶಿಕ್ಷಕರು, ಮಕ್ಕಳು ಸಾರ್ವಜನಿಕರು ಇದ್ದರು.

emedialine

Recent Posts

ಸಮಸ್ತ ಲಿಂಗಾಯತರ ಪ್ರಗತಿಗೆ ಲಿಂಗಾಯತ ಸ್ವತಂತ್ರ ಧರ್ಮ ಅಗತ್ಯ: ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…

17 mins ago

ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯ ಶ್ರೀ ಪುರಸ್ಕೃತ ಡಾ. ಶರಣಬಸಪ್ಪ ಕ್ಯಾತನಾಳ ಪುರಸ್ಕಾರ

ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…

57 mins ago

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

3 hours ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

3 hours ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

5 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

5 hours ago