ಕಲಬುರಗಿ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಉಮೇಶ ಜಾಧವ್ ಅವರ ಪ್ರಕಾರ ಅಭಿವೃದ್ಧಿ ಅಂದರೆ, ಅಣ್ಣ, ಮಗನ, ತಮ್ಮನ, ಮತ್ತು ಅಳಿಯನ ಅಭಿವೃದ್ದಿ ಮಾಡುವುದೇ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದಾರೆ ಎಂದು ಸಿಪಿಎಂ ಪಕ್ಷದ ಮುಖಂಡ ಮಾರುತಿಮಾನ್ಪಡೆ ಆರೋಪಿಸಿದರು.
ಅವರು ಚಿಂಚೋಳಿಯಲ್ಲಿ ಶ್ರೀ ದಿ. ವಿರೇಂದ್ರ ಪಾಟಿಲ್ ಪಾಟೀಲ್ ಸಮಾದಿಯ ಕಟ್ಟಿ ಮೈದಾನದಲ್ಲಿ ಸಂವಿಧಾನ ಉಳಿಸಿ ದೇಶ ರಕ್ಷಿಸಿ ಹಾಗೂ ಸೌಹಾರದತೆಗಾಗಿ ಬಿಜೆಪಿ ಸೋಲಿಸಿ ರಾಜಕೀಯ ಸಮಾವೇಶದಲ್ಲಿ ಮಾತನಾಡಿ, ಜಾಧವ ಅವರು ಚಿಂಚೋಳಿ ಕ್ಷೇತ್ರ ಅಭಿವೃದ್ಧಿ ಮಾಡಿದೇನೆ ಎಂದು ಸುಳ್ಳು ಹೇಳುತ ಸುತುತ್ತಿದ್ದಾರೆ, ಎನೂ ಅಭಿವೃದ್ಧಿ ಮಾಡಿದ್ದಾರೆ ಎಂದು ಬಂದು ತೋರಿಸಲಿ ಎಂದು ಹರಿಹಾಯಿದ ಅವರು ಮುಲಾಮಾರಿ ನದಿ ಅಭಿವೃದ್ಧಿ ಮಾಡಿದಿರಾ ಅಥವಾ ಸಿಂಮೇಟ್ ಕಾರ್ಖಾನೆ ಪ್ರಾರಂಭ ಮಾಡಿದೀರಾ ಅಥವಾ ಚಿಂಚೋಳಿ ಕ್ಷೇತ್ರದಲ್ಲಿ ಮಕ್ಕಳ ಮಾರಾಟ ಕಳಂಕ ತೊಳೆಯಲು ಶ್ರಮಿಸಿದ್ರಾ ಅಥವಾ ಇಲ್ಲಿನ ತಾಂಡಗಳ ಜನರಿಗೆ ಉದ್ಯೋಗ ಕೂಡುವ ನೀಟ್ಟಿನಲ್ಲಿ ಕೆಲಸ ಮಾಡಿದೀರಾ ಎಂದು ಖಾರವಾಗಿ ಪ್ರಶ್ನಿಸಿದ್ದರು.
ನಂತರ ಸಿಪಿಎಂ ಪಕ್ಷ ಜಿಲ್ಲಾಧ್ಯಕ್ಷ ಶರಣಪ್ಪ ಮಮಶೆಟ್ಟಿ ಅವರು ಮಾತನಾಡಿ, ಪ್ರಧಾನಿ ಮೋದಿ ಅವರು ಮೇಕಿನ್ ಇಂಡಿಯಾ, ಸ್ಕೀಲ್ ಇಂಡಿಯಾ, ಡಿಜಿಟಲ್ ಇಂಡಿಯಾ, ಬೇಟಿ ಪಡಾವೂ ಬೇಟಿ ಬಚಾವೂ, ಜನಧನ್ ಯೋಜನ, ಸಬಕಾ ಸಾಥ್ ಸಬಕಾ ವಿಕಾಶ ಎಂಬ ಹೇಳಿದ ಮಾತುಗಳು ಈಡೇರಿಸಲಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು.
ರೈತರ ಸಾಲ ಮನ್ನ ಮಾಡದೇ, ರೈತರಿಗೆ ಕಡೆಗಣಿಸುವ ಪಕ್ಷ ಅಂದರೆ ಅದು ಬಿಜೆಪಿ ಪಕ್ಷ ಎಂದು ಆರೋಪಿಸಿ, ಸೈನಿಕರು ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ನೀಡುತ್ತಿದ್ದಾಗ, ದೇಶದೇಡೆಯಲ್ಲಿ ಸಂತಾಪ ಹಾಗೂ ದುಃಖದಲ್ಲಿ ಇದಾಗ ಬಿಜೆಪಿ ಪಕ್ಷದ ರಾಜ್ಯಧ್ಯಕ್ಷ ಯಡಿಯೂರಪ್ಪ ಅವರು ಸೈನಿಕರ ಸಾವಿನ ಮೇಲೆ ರಾಜಕಾರಣ ಮಾಡುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದ್ದರು. ಡಾ. ಉಮೇಶ್ ಜಾಧವ ಅವರು ತಿಂದ ಮನೆಗೆ ದ್ರೋಹ ಮಾಡಿದಲ್ಲದೇ, ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು.
ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…