ಕಲಬುರಗಿ: ಚಿತ್ತಾಪೂರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ‘ನಡಗಟ್ಟಿ ಬಸವ ಸಮಿತಿ’ ನೇತೃತ್ವದಲ್ಲಿ ಇಂದು ಕಲಬುರಗಿ ತಾಲೂಕಿನ ಫರಹತಾಬಾದ ಬಸ್ ನಿಲ್ದಾಣದಿಂದ ನಾಡ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪ ತಹಸೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಲಾಯಿತು.
ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಹಾಗರಗುಂಡಗಿ ಮತ್ತು ಕಲಬುರಗಿ ಗಾಜಿಪೂರ ಗದ್ದುಗೆ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಬಸವಾದಿ ಶರಣರ ಪ್ರತಿಮೆಗಳಿಗೆ ನಿರಂತರ ಅಪಮಾನ ಮಾಡಲಾಗುತ್ತಿದೆ. ಇದು ಇಲ್ಲಿಗೆ ನಿಲ್ಲಬೇಕು. ಇಂತಹ ಮಹಾನ್ ನಾಯಕರು ಯಾವುದೇ ಒಂದು ಜಾತಿಗೆ ಸೇರಿದವರಲ್ಲ, ಅವರು ಇಡೀ ಮಾನವಕುಲದ ವಿಮೋಚಕರು. ಹಾಗಾಗಿ ಪೆÇಲೀಸ್ ಇಲಾಖೆ ಇಂಥ ವಿಕೃತ ಮನಸ್ಸಿನ ವ್ಯಕ್ತಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಡಾ. ಶಿವಕುಮಾರ ಶರ್ಮಾ, ಮಲ್ಲಿಕಾರ್ಜುನ ಎಸ್ ಅವಂಟಗಿ, ನಾಗೇಂದ್ರಪ್ಪ ನಿಂಬರಗಿ, ಕೇಶವ ಮೋಟಗಿ, ಸುರೇಶ್ ತಿಬಶಟ್ಟಿ, ಬಸವಶಟ್ಟಿ ಮಹಾಶಟ್ಟಿ ಮಾತನಾಡಿದರು.
ಗ್ರಾಮದ ಪ್ರಮುಖರಾದ ಶರಣಬಸಪ್ಪ ಸಿ ಸಜ್ಜನ್, ರವೀಂದ್ರ ಹಾಲಕಾಯಿ, ಸಾಗರ ಅಂಗಡಿ, ಶರಣು ಕೆ ಸಜ್ಜನ್, ರಾಜಶೇಖರ್ ನೆಲೋಗಿ, ಲಕ್ಷ್ಮಿಕಾಂತ್ ಪತ್ತಾರ್, ಶಂಕರ್ ಪವಾರ್, ರಾಜಶೇಖರ್ ಗುಡೂರ, ಶಿವಾನಂದ ಮೈಂದರ್ಗಿ, ವೀರೇಶ್ ನಾಸಿ, ಪ್ರಭುದೇವ ಹೊಸಮನಿ, ಮಾಳಪ್ಪ ಪೂಜಾರಿ, ಅಣವೀರ(ಮೇಘಾ), ಸಿದ್ದು ತಳವಾರ, ಈಶ್ವರಾಜ ಬಾಳಿ, ಶರಣು ಸುಬೇದಾರ್, ಶಿವಯೋಗಿ ಪೂಜಾರಿ ಸೇರಿದಂತೆ ನೂರಾರು ಬಸವಾಭಿಮಾನಿಗಳು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…