ಆರೋಗ್ಯಕರ ಸಮಾಜ ನಿರ್ಮಿಸಲು ಎನ್‌ಎಸ್‌ಎಸ್ ಸಹಕಾರಿ: ನವೀನ್

ಕಲಬುರಗಿ: ಎನ್‌ಎಸ್‌ಎಸ್ ಆಯೋಜಿಸುವ ಮಹತ್ವದ ಕಾರ್ಯಕ್ರಮಗಳಲ್ಲಿ ಯುವಕರು ಹೆಚ್ಚಾಗಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸುವ ಜವಾಬ್ದಾರಿ ರಾಸೇಯೋ ಸ್ವಯಂ ಸೇವಕರ ಮೇಲಿದೆ. ಯುವ ಜನಾಂಗ ಸ್ವಯಂ ಆಸಕ್ತಿಯಿಂದ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ಸಂರಕ್ಷಣೆ ಜೊತೆಗೆ ಸದೃಢ ಸಮಾಜ ಸೇವಾ ಕಾರ್ಯದಲ್ಲಿ ತೋಡಗಿಸಿ ಕೊಳ್ಳಲು ಪ್ರೋತ್ಸಾಹ ಸಿಗಲಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನವೀನ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಯುನಿಸೆಫ್ ಇವುಗಳ ಸಂಯುಕ್ತಾಶ್ರಯದಲ್ಲಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನ.6 ರಿಂದ ಎರಡು ದಿನಗಳವರೆಗೆ ಏರ್ಪಡಿಸಿದ ರರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ‘ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸಾಮಾಜಿಕ ನಡವಳಿಕೆಯ ಬದಲಾವಣೆಗಾಗಿ ಎನ್‌ಎಸ್‌ಎಸ್ ಸ್ವಯಂ ಸೇವಕರ ತೊಡಗಿಸಿಕೊಳ್ಳುವಿಕೆಯ ವಿಷಯ ಕುರಿತು ಮಾತನಾಡಿದರು.

ಪ್ರಾದೇಶಿಕವಾಗಿ ಸಂಸ್ಕೃತಿ ಮತ್ತು ಆಹಾರ ಪದ್ಧತಿಗಳಲ್ಲಿ ಭಿನ್ನತೆಯಿದೆ. ಜೀವನಶೈಲಿ ಜೊತೆಗೆ ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಸಂರಕ್ಷಣೆ ಸಾಧ್ಯವಿದ್ದು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಇವತ್ತಿನ ಸಂದರ್ಭದಲ್ಲಿ ಮಕ್ಕಳು ಮತ್ತು ಯುವಕರಿಗೆ ನೈಸರ್ಗಿಕ ಆಹಾರ ಪದ್ಧತಿ ಮಹತ್ವವನ್ನು ತಿಳಿಸಬೇಕಾಗಿರುವುದು ಸ್ವಯಂ ಸೇವಕರ ಮುಖ್ಯ ಹೊಣೆಯಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನೈಸರ್ಗಿಕ ಆಹಾರ ಸೇವನೆ ಉಪಕ್ರಮವನ್ನು ಪಾಲಿಸುವಂತೆ ಉತ್ತೇಜಿಸಬೇಕಾಗಿದೆ. ಹಣ್ಣುಗಳು, ಹಸಿರು ತರಕಾರಿ, ಸೊಪ್ಪಿನ ಆಹಾರ ಪದಾರ್ಥಗಳ ಹೆಚ್ಚು ಸೇವನೆಯಿಂದ ಬಲಹೀನತೆ ಹಾಗೂ ರಕ್ತಹೀನತೆ ಪ್ರಮಾಣ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.

ಪ್ರಾದೇಶಿಕ ಮಕ್ಕಳ ಆರೋಗ್ಯ ಅಧಿಕಾರಿ ಡಾ. ಶರಣಬಸಪ್ಪಾ ಖ್ಯಾತನಾಳ ಮಾತನಾಡಿ ಮಕ್ಕಳಿಗೆ ಬಾಧಿಸುವ ಮಲೇರಿಯಾ, ದಡಾರ, ಪ್ಲೇಗ್, ಪೋಲಿಯೋ, ಕೋವಿಡ್‌ನಂತಹ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಬಲಹೀನತೆ ಮತ್ತು ರಕ್ತಹೀನತೆ ತಡೆಗಟ್ಟಲು ಹಾಲು, ಮೊಟ್ಟೆ, ತರಕಾರಿ ಮತ್ತು ಹಣ್ಣುಗಳ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೊತೆಗೆ ರಾಷ್ಟಯ ಸೇವಾ ಯೋಜನೆ ಕೋಶದ ಸ್ವಯಂಸೇವಕರ ಸಹಕಾರ ಹೆಚ್ಚು ಅಗತ್ಯ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಂಯೋಜಕ ಡಾ. ಎನ್.ಜಿ. ಕಣ್ಣೂರು ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶ ಸೇವೆಗೆ ಯುವಶಕ್ತಿಯನ್ನು ಸಂಪೂರ್ಣವಾಗಿ ತೊಡಗಿಸಲು ದೈಹಿಕ ಮತ್ತು ಮಾನಸಿಕವಾಗಿ ಸಶಕ್ತರನ್ನಾಗಿ ಬೆಳೆಸಬೇಕಿದೆ. ಶಿಕ್ಷಣ ಎಷ್ಟು ಮುಖ್ಯವೋ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ಆದರಿಂದ ಆರೋಗ್ಯದ ಬಗೆ ಕಾಳಜಿ ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಲು ಸ್ವಯಂ ಸೇವಕರು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಯುನಿಸೆಫ್‌ನ ಸಾಮಾಜಿಕ ನಡವಳಿಕೆಗಳ ಸಮಾಲೋಚಕ ಮನೋಜ ಸೆಬಸ್ಟಿಯನ್, ಯುನಿಸೆಫ್‌ನ ಎಸ್.ಬಿ.ಸಿ. ವಾಶ್ ಕನಸಲಟೆಂಟ್ ಕನ್ಸಲ್ಟಟೆಂಟ್ ಕುಲಂದಿ ರಾಜು ಮುಂತಾದವರಿದ್ದರು.

emedialine

Recent Posts

ಟ್ರಾಮಾ‌ ಕೇರ್ ನಲ್ಲಿ ನಿರಂತರ ಚಿಕಿತ್ಸೆ, : ವೈದ್ಯರ ಪರಿಶ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಕಲಬುರಗಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸುಮಾರು 45 ದಿನಗಳ ಕಾಲ ಐಸಿಯು‌ನಲ್ಲಿ‌‌ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದ ಕ್ಲಿಷ್ಟಕರ…

5 hours ago

ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ

ಕಲಬುರಗಿ; ಕ್ರೀಡ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವೋತೊಅಭಿವೃದ್ದಿಗೆ ಮುಂದಾಗಿರುವುದು ಸಂತೋಷದಾಯಕ ಜೊತೆಗೆ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಹ…

5 hours ago

ಗ್ರಾಮೀಣ ಪ್ರದೇಶದಲ್ಲಿ ಘನ-ತಾಜ್ಯ ನಿರ್ವಹಣೆ ಕುರಿತು ತರಬೇತಿ

ಕಲಬುರಗಿ: ನಗರದಲ್ಲಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್‌…

5 hours ago

ಶ್ರೀ ವಿನಾಯಕ ಮಿತ್ರ ಮಂಡಳಿಯಿಂದ ಗಣೇಶ್ ವಿಸರ್ಜನೆ

ಕಲಬುರಗಿ: ಬಿದ್ದಾಪುರ ಕಾಲೋನಿಯಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಗಣೇಶ್ ವಿಸರ್ಜನೆ ಕಾರ್ಯಕ್ರಮವನ್ನು ನೆರವೇರಿತು. ವಿನಾಯಕ ಪುರಾಣಿಕ್, ಅನಿಲ್…

5 hours ago

ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ನಾಗನಹಳ್ಳಿ ಕ್ರಾಸ್‍ನಲ್ಲಿರುವ ಗುರುಸ್ವಾಮಿಗಳಾದ ಅಶೋಕ ಹೊನ್ನಳ್ಳಿ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮದಲ್ಲಿ ಮುಗುಳನಾಗಾವ ಅಭಿನವ ಶ್ರೀ…

6 hours ago

ಹುಂಡೈ ಅಲ್ಕಾಜರ್ ನೂತನ ಮಾದರಿ ಕಾರು ಮಾರುಕಟ್ಟೆಗೆ

ಕಲಬುರಗಿ: ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಶಹಾ ಹುಂಡೈ ಶೋರೂಂನಲ್ಲಿ ಹುಂಡೈ ಕಂಪನಿಯ ಹೊಸ ಮಾದರಿಯ ಅಲ್ಕಾಜರ್  ನೂತನ ಮಾದರಿ ಕಾರನ್ನು…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420