ಬಿಸಿ ಬಿಸಿ ಸುದ್ದಿ

ಕಲಬುರಗಿ: ಜಿಲ್ಲಾ ಕಾರ್ಮಿಕ ಅಧಿಕಾರಿ ಸೇರಿ ಇಬ್ಬರ ಅಮಾನತು

ಕಲಬುರಗಿ: ಕಾರ್ಮಿಕ ಇಲಾಖೆಯಲ್ಲಿ ಆಕ್ರಮವೇಸಗಿರುವ ಆರೋಪದಲ್ಲಿ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸೇರಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.

ಕಲಬುರಗಿ ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿಗಿದ್ದ ರಮೇಶ್ ಸುಂಬಡ ಮತ್ತು ಚಿತ್ತಾಪುರ ತಾಲ್ಲೂಕಿನ ಡಿಓ ಶರಣು ಬೆಲ್ಲಾದ್ ಎಂಬ ಇಬ್ಬರು ಕಾರ್ಮಿಕ ಅಧಿಕಾರಿಗಳ ವಿರುದ್ಧ ಇಲಾಖೆಯ ವಿವಿಧ ಯೋಜನೆಗಳಲ್ಲಿ ಆಕ್ರಮ ನಡೆಸಿರುವ ಆರೋಪವಿದೆ. ಈ ಬಗ್ಗೆ ಆಂತರಿಕ ಅಧಿಕಾರಿಗಳ ಪ್ರಥಾಮಿಕ ತನಿಖೆಯಿಂದ ದೃಢಪಟ್ಟಿರುವುದರಿಂದ ಅಮಾನತು ಗೊಳ್ಳಿಸಲಾಗಿದೆ ಎಂದು ಸಚಿವರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ತಿಳಿಸಿದ್ದಾರೆ.

ಇಲಾಖೆಯಲ್ಲಿ ಸ್ವಚ್ಛ ಆಡಳಿತ ಅಗತ್ಯವಿದ್ದು, 45 ಲಕ್ಷ ಬೋಕಸ್ ಲೇಬರ್ ಕಾರ್ಡ್ ಪತ್ತೆಹಚ್ಚಲಾಗಿದೆ. ಇಷ್ಟೊಂದು ಕಾರ್ಡ್ ರದ್ದು ಮಾಡಲು ಕಾಲಾವಕಾಶ ಬೇಕು. ಎಲ್ಲಾ ಟ್ರೇಡ್ ಯೂನಿಯನ್ ಗಳು ಇಲಾಖೆಗೆ ಸಹಕರ ನೀಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.

ಕೋವಿಡ್ -19 ನಿರ್ವಹಣೆ, ಟೂಲ್ ಕಿಟ್ ವಿತರಣೆ, ಇಲಾಖೆಯಿಂದ ನಿಡಲಾಗುವ ವಿದ್ಯಾರ್ಥಿ ವೇತನಕ್ಕೆ ಅನುಮೋದನೆ ಸೇರಿ ಮದುವೆ ಮತ್ತು ಮರಣದ ಹಣ ಮಂಜೂರಾತಿ ಸೇರಿದಂತೆ ಕಾರ್ಮಿಕ ಕಾರ್ಡ್ ವಿತರಣೆಯಲ್ಲಿ ಆಕ್ರಮ ನಡೆಯುತ್ತಿದೆ ಎಂದು ಕಲಬುರಗಿ ಜಿಲ್ಲಾ ಕಾರ್ಮಿಕ ಇಲಾಖೆಯ ವಿರುದ್ಧ ಕಾರ್ಮಿಕರ ಸಂಘಟನೆಗಳು ಹಲವು ಬಾರಿ ಹೋರಾಟ ಮತ್ತು ತನಿಖೆಗೆ ಒತ್ತಾಯಿಸಲಾಗಿತು.

emedialine

Recent Posts

ಸೆ. 23ಕ್ಕೆ ಕಲಬುರಗಿಯಲ್ಲಿ ಮುಖ್ಯಮಂತ್ರಿಗಳ ಜನಸ್ಪಂದನಾ ಸಭೆ: ಬಾಕಿ ಕಡತ ತ್ವರಿತ ವಿಲೇವಾರಿಗೆ ಡಿ.ಸಿ. ಸೂಚನೆ

ಕಲಬುರಗಿ; ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೆಪ್ಟೆಂಬರ್ 23 ರಂದು ಕಲಬುರಗಿಯಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವ “ಜನಸ್ಪಂದನಾ” ಸಭೆ ನಡೆಸಲಿದ್ದು, ಈ…

35 mins ago

ನೂತನ ಪೊಲೀಸ್ ಆಯುಕ್ತರಾಗಿ ಡಾ.ಶರಣಪ್ಪ ಎಸ್.ಡಿ ಅಧಿಕಾರ ಸ್ವೀಕಾರ

ಕಲಬುರಗಿ; ಕಲಬುರಗಿ ನಗರ ನೂತನ ಪೊಲೀಸ್ ಆಯುಕ್ತರಾಗಿ 2009ನೇ ಬ್ಯಾಚಿನ್ ಐ.ಪಿ.ಎಸ್. ಅಧಿಕಾರಿ ಡಾ.ಶರಣಪ್ಪ ಎಸ್.ಡಿ ಅವರು ಶುಕ್ರವಾರ ಪೊಲೀಸ್…

37 mins ago

ಮಹಿಳಾ ವೈದ್ಯರ ಸುರಕ್ಷತೆಗಾಗಿ ಶೀಘ್ರದಲ್ಲೇ ಮಾರ್ಗಸೂಚಿ: ಡಾ. ಶರಣ ಪ್ರಕಾಶ್ ಪಾಟೀಲ್

ಬೆಂಗಳೂರು: ಕೊಲ್ಕತ್ತಾದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶವ್ಯಾಪಿನಡೆದ ಪ್ರತಿಭಟೆನೆಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ…

60 mins ago

ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಮಹತ್ವದ ಸಭೆ

ಬೆಂಗಳೂರು: ರಾಯಚೂರು ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಇಂದು ವಿಧಾನ ಸೌಧದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮಾನ್ಯ ವೈದ್ಯಕೀಯ…

1 hour ago

ರಾಜ್ಯದಲ್ಲಿ ಮಂಕಿ ಫಾಕ್ಸ್ ಆತಂಕ ಬೇಡ: ವಿಮಾನ ನಿಲ್ದಾಣ, ಬಂದರು ಸೇರಿ ಹಲವು ಕಡೆ ಬಿಗಿಕ್ರಮ

ಬೆಂಗಳೂರು: ಆಫ್ರಿಕಾ ಖಂಡದಲ್ಲಿ ಆತಂಕ ಮೂಡಿಸಿರುವ ಮಂಕಿಫಾಕ್ಸ್ ಬಗ್ಗೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯಸಂಸ್ಥೆ ಘೋಷಿಸಿದ್ದರೂ…

1 hour ago

ಆಗಸ್ಟ್ 31 ರೊಳಗೆ ಪಡಿತರ ಚೀಟಿಗೆ ಇ.ಕೆ.ವೈ.ಸಿ. ಮಾಡಿಸುವಂತೆ ಡಿ.ಸಿ.ಸೂಚನೆ

ಕಲಬುರಗಿ; ಜಿಲ್ಲೆಯ ಪಡಿತರ ಚೀಟಿ ಸದಸ್ಯರ ಪೈಕಿ ಇದೂವರೆಗೆ ಇ.ಕೆ.ವೈ.ಸಿ. ಮಾಡದ 58,449 ಜನ ಇದ್ದು, ಇವರೆಲ್ಲರು ಇದೇ ಆಗಸ್ಟ್…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420