ಆಗಸ್ಟ್ 31 ರೊಳಗೆ ಪಡಿತರ ಚೀಟಿಗೆ ಇ.ಕೆ.ವೈ.ಸಿ. ಮಾಡಿಸುವಂತೆ ಡಿ.ಸಿ.ಸೂಚನೆ

ಕಲಬುರಗಿ; ಜಿಲ್ಲೆಯ ಪಡಿತರ ಚೀಟಿ ಸದಸ್ಯರ ಪೈಕಿ ಇದೂವರೆಗೆ ಇ.ಕೆ.ವೈ.ಸಿ. ಮಾಡದ 58,449 ಜನ ಇದ್ದು, ಇವರೆಲ್ಲರು ಇದೇ ಆಗಸ್ಟ್ 31 ರೊಳಗೆ ಇ.ಕೆ.ವೈ.ಸಿ. ಮಾಡಿಸಿಕೊಳ್ಳಬೇಕು. ಎಫ್.ಪಿ.ಎಸ್. ಮಟ್ಟದಲ್ಲಿ ಪಡಿತರ ಚೀಟಿದಾರರಿಗೆ ಹೆಚ್ಚಿನ ಮಾಹಿತಿ ನೀಡಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯ ತರನ್ನುಮ್ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ತಮ್ಮ ಕಚೇರಿಯಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದಂತೆ ಇ.ಕೆ.ವೈ.ಸಿ. ಮಾಡಿಸಿಕೊಳ್ಳದ ಸದ್ಯಸರ ಹೆಸರನ್ನು ಪಡಿತರ ಚೀಟಿಯಿಂದ ಕೈಬಿಡಬೇಕೆಂದು ತಿಳಿಸಿದರು.

ಸಿರಿವಂತರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ.ಪಿ.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಹಾರ ಇಲಾಖೆ ಅಧಿಕಾರಿಗಳಿಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಖಡಕ್ ಸೂಚನೆ ನೀಡಿದರು.

ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರು ಮಾತನಾಡಿ ಈಗಾಗಲೆ ಜಿಲ್ಲೆಯಲ್ಲಿ 1.25 ಲಕ್ಷ ಆದಾಯಕ್ಕಿಂತ ಹೆಚ್ಚಿರುವ 76 ಸಾವಿರ ಪಡಿತರ ಚೀಟಿಯ ವಿವರವನ್ನು ಜಿಲ್ಲೆಯ 990 ಪಡಿತರ ಅಂಗಡಿಯಲ್ಲಿ ಪ್ರಕಟಿಸಿ ಆಕ್ಷೇಪಣೆ ಕೋರಲಾಗಿದೆ ಎಂದರು. ಆಗ ಡಿ.ಸಿ. ಅವರು ಮಾತನಾಡಿ ಕ್ಷೇತ್ರ ತಪಾಸಣೆ ಮಾಡಿ, ಅರ್ಹತೆ ಇದ್ದವರಿಗೆ ಮಾತ್ರ ಬಿ.ಪಿ.ಎಲ್. ಪಡಿತರ ಚೀಟಿ ವಿತರಿಸಬೇಕು ಎಂದರು.

15,535 ಪಡಿತರ ಚೀಟಿ ಅಮಾನತ್ತು: ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ ಕಲ್ಲೂರ ಮಾತನಾಡಿ ಕಳೆದ 6 ತಿಂಗಳಿನಿಂದ ಪಡಿತರ ಪಡೆಯದ 15,535 ಪಡಿತರ ಚೀಟಿ ಅಮಾನತ್ತು ಮಾಡಲಾಗಿದೆ. ಮೃತ 5,313 ಜನರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗಿದ್ದು, ಇದರಿಂದ 265 ಕ್ವಿಂಟಾಲ್ ಪಡಿತರ ಧಾನ್ಯ ಉಳಿಯಲಿದೆ. 1,565 ಆದಾಯ ತೆರಿಗೆ ಪಾವತಿ ಮಾಡುವವರ ಬಿ.ಪಿ.ಎಲ್. ಪಡಿತರ ಚೀಟಿಯನ್ನು ಎ.ಪಿ.ಎಲ್ ಪಡಿತರ ಚೀಟಿಗೆ ಬದಲಾಯಿಸಿದೆ. ಅದೇ ರೀತಿ ಸರ್ಕಾರಿ-ಅರೇ ಸರ್ಕಾರಿ ನೌಕರರು ಹೊಂದಿರುವ 360 ಬಿ.ಪಿ.ಎಲ್. ಪಡಿತರ ಚೀಟಿ ಎ.ಪಿ.ಎಲ್. ಚೀಟಿಗೆ ಬದಲಾಯಿಸಿ ಸರ್ಕಾರಿ ಸೌಲಭ್ಯ ದುರಪಯೋಗ ಮಾಡಿಕೊಂಡಿದಕ್ಕೆ ನೋಟಿಸ್ ಸಹ ಜಾರಿ ಮಾಡಲಾಗಿದೆ ಎಂದರು.

ಜಿಲ್ಲೆಯ ಒಟ್ಟಾರೆ 19,64,642 ಪಡಿತರ ಚೀಟಿಯ ಸದಸ್ಯರ ಪೈಕಿ 19,06,193 ಜನ ಇ.ಕೆ.ವೈ.ಸಿ. ಮಾಡಿಕೊಂಡಿದ್ದು, ಶೇ.97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪ್ರಗತಿ ವಿವರವನ್ನು ಸಭೆಗೆ ಮಾಹಿತಿ ನೀಡಿದ ಅವರು, ಅರ್ಹತೆ ಇಲ್ಲದಿದ್ದರೂ ಬಿ.ಪಿ.ಎಲ್. ಪಡಿತರ ಚೀಟಿ ಪಡೆದಿದ್ದಲ್ಲಿ ಕೂಡಲೆ ಪಡಿತರ ಅಂಗಡಿ, ತಹಶೀಲ್ದಾರ(ಆಹಾರ) ಕಚೇರಿಗೆ ಸರೆಂಡರ್ ಮಾಡಲು ಅವಕಾಶ ನೀಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ನಿರ್ದೇಶಕರಾದ ಡಿ.ಬಿ.ಪಾಟೀಲ, ರೇಖಾ, ಕರ್ನಾಟಕ ಆಹಾರ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸಿದ್ದಮ್ಮ ಸೇರಿದಂತೆ ಆಹಾರ ಇಲಾಖೆಯ ಆಹಾರ ಶಿರಸ್ತೆದಾರರು, ಆಹಾರ ನಿರೀಕ್ಷಕರು ಇದ್ದರು.

emedialine

Recent Posts

ಟ್ರಾಮಾ‌ ಕೇರ್ ನಲ್ಲಿ ನಿರಂತರ ಚಿಕಿತ್ಸೆ, : ವೈದ್ಯರ ಪರಿಶ್ರಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಕಲಬುರಗಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸುಮಾರು 45 ದಿನಗಳ ಕಾಲ ಐಸಿಯು‌ನಲ್ಲಿ‌‌ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದ ಕ್ಲಿಷ್ಟಕರ…

5 hours ago

ಇಂದಿನ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಅನಿವಾರ್ಯ

ಕಲಬುರಗಿ; ಕ್ರೀಡ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸರ್ವೋತೊಅಭಿವೃದ್ದಿಗೆ ಮುಂದಾಗಿರುವುದು ಸಂತೋಷದಾಯಕ ಜೊತೆಗೆ ಮಕ್ಕಳಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಹ…

5 hours ago

ಗ್ರಾಮೀಣ ಪ್ರದೇಶದಲ್ಲಿ ಘನ-ತಾಜ್ಯ ನಿರ್ವಹಣೆ ಕುರಿತು ತರಬೇತಿ

ಕಲಬುರಗಿ: ನಗರದಲ್ಲಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ, ಅಬ್ದುಲ್‌…

5 hours ago

ಶ್ರೀ ವಿನಾಯಕ ಮಿತ್ರ ಮಂಡಳಿಯಿಂದ ಗಣೇಶ್ ವಿಸರ್ಜನೆ

ಕಲಬುರಗಿ: ಬಿದ್ದಾಪುರ ಕಾಲೋನಿಯಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿ ವತಿಯಿಂದ ಗಣೇಶ್ ವಿಸರ್ಜನೆ ಕಾರ್ಯಕ್ರಮವನ್ನು ನೆರವೇರಿತು. ವಿನಾಯಕ ಪುರಾಣಿಕ್, ಅನಿಲ್…

5 hours ago

ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ನಾಗನಹಳ್ಳಿ ಕ್ರಾಸ್‍ನಲ್ಲಿರುವ ಗುರುಸ್ವಾಮಿಗಳಾದ ಅಶೋಕ ಹೊನ್ನಳ್ಳಿ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಮಹಾ ಪೂಜಾ ಕಾರ್ಯಕ್ರಮದಲ್ಲಿ ಮುಗುಳನಾಗಾವ ಅಭಿನವ ಶ್ರೀ…

6 hours ago

ಹುಂಡೈ ಅಲ್ಕಾಜರ್ ನೂತನ ಮಾದರಿ ಕಾರು ಮಾರುಕಟ್ಟೆಗೆ

ಕಲಬುರಗಿ: ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಶಹಾ ಹುಂಡೈ ಶೋರೂಂನಲ್ಲಿ ಹುಂಡೈ ಕಂಪನಿಯ ಹೊಸ ಮಾದರಿಯ ಅಲ್ಕಾಜರ್  ನೂತನ ಮಾದರಿ ಕಾರನ್ನು…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420