ಕಲಬುರಗಿ: ಕಾರ್ಮಿಕ ಇಲಾಖೆಯಲ್ಲಿ ಆಕ್ರಮವೇಸಗಿರುವ ಆರೋಪದಲ್ಲಿ ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಸೇರಿ ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.
ಕಲಬುರಗಿ ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿಗಿದ್ದ ರಮೇಶ್ ಸುಂಬಡ ಮತ್ತು ಚಿತ್ತಾಪುರ ತಾಲ್ಲೂಕಿನ ಡಿಓ ಶರಣು ಬೆಲ್ಲಾದ್ ಎಂಬ ಇಬ್ಬರು ಕಾರ್ಮಿಕ ಅಧಿಕಾರಿಗಳ ವಿರುದ್ಧ ಇಲಾಖೆಯ ವಿವಿಧ ಯೋಜನೆಗಳಲ್ಲಿ ಆಕ್ರಮ ನಡೆಸಿರುವ ಆರೋಪವಿದೆ. ಈ ಬಗ್ಗೆ ಆಂತರಿಕ ಅಧಿಕಾರಿಗಳ ಪ್ರಥಾಮಿಕ ತನಿಖೆಯಿಂದ ದೃಢಪಟ್ಟಿರುವುದರಿಂದ ಅಮಾನತು ಗೊಳ್ಳಿಸಲಾಗಿದೆ ಎಂದು ಸಚಿವರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ತಿಳಿಸಿದ್ದಾರೆ.
ಇಲಾಖೆಯಲ್ಲಿ ಸ್ವಚ್ಛ ಆಡಳಿತ ಅಗತ್ಯವಿದ್ದು, 45 ಲಕ್ಷ ಬೋಕಸ್ ಲೇಬರ್ ಕಾರ್ಡ್ ಪತ್ತೆಹಚ್ಚಲಾಗಿದೆ. ಇಷ್ಟೊಂದು ಕಾರ್ಡ್ ರದ್ದು ಮಾಡಲು ಕಾಲಾವಕಾಶ ಬೇಕು. ಎಲ್ಲಾ ಟ್ರೇಡ್ ಯೂನಿಯನ್ ಗಳು ಇಲಾಖೆಗೆ ಸಹಕರ ನೀಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.
ಕೋವಿಡ್ -19 ನಿರ್ವಹಣೆ, ಟೂಲ್ ಕಿಟ್ ವಿತರಣೆ, ಇಲಾಖೆಯಿಂದ ನಿಡಲಾಗುವ ವಿದ್ಯಾರ್ಥಿ ವೇತನಕ್ಕೆ ಅನುಮೋದನೆ ಸೇರಿ ಮದುವೆ ಮತ್ತು ಮರಣದ ಹಣ ಮಂಜೂರಾತಿ ಸೇರಿದಂತೆ ಕಾರ್ಮಿಕ ಕಾರ್ಡ್ ವಿತರಣೆಯಲ್ಲಿ ಆಕ್ರಮ ನಡೆಯುತ್ತಿದೆ ಎಂದು ಕಲಬುರಗಿ ಜಿಲ್ಲಾ ಕಾರ್ಮಿಕ ಇಲಾಖೆಯ ವಿರುದ್ಧ ಕಾರ್ಮಿಕರ ಸಂಘಟನೆಗಳು ಹಲವು ಬಾರಿ ಹೋರಾಟ ಮತ್ತು ತನಿಖೆಗೆ ಒತ್ತಾಯಿಸಲಾಗಿತು.