ವಾಡಿ: ಲಾಡ್ಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹೋಗುಲು ರಸ್ತೆ ಮತ್ತು ಆಟವಾಡಲು ಮೈದಾನ ಸರಿಪಡಿಸಿಕೊಂಡುವಂತೆ ಹಾಗೂ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ AIDSO ವತಿಯಿಂದ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸದರು.
ಲಾಡ್ಲಾಪೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಸುತ್ತಮುತ್ತಲಿನ ತಾಂಡಗಳಿಂದ ಹಳ್ಳಿಗಳಿಂದ ಓದಲು ಬರುತ್ತಾರೆ. ಈ ಶಾಲೆಯು ಬಸ್ ಸ್ಟ್ಯಾಂಡ್ ನಿಂದ ಒಂದು ಕೀ.ಮಿ ದೂರದಲ್ಲಿದೆ. ಅಲ್ಲಿಗೆ ಹೋಗಲು ನಿರ್ಮಿಸಿದ ರಸ್ತೆಯು ತುಂಬಾ ದೂರವಿದ್ದು ನೆಡೆದುಕೊಂಡು ಹೋಗಲು ಪ್ರತಿ ದಿನ ವಿದ್ಯಾರ್ಥಿಗಳು ಕಷ್ಟ ಪಡುವಂತಾಗಿದೆ. ಅಲ್ಲೇ ಕೆರೆಯ ಪಕ್ಕದಲ್ಲಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಕಾಲ್ ದಾರಿ ಮಾಡಿಕೊಟ್ಟರೆ ವಿದ್ಯಾರ್ಥಿಗಳಿಗೆ ನೆಡೆದುಕೊಂಡು ಹೋಗಲು ಅನುಕೂಲವಾಗುತ್ತದೆ.
ಇನ್ನೊಂದೆಡೆ ಓದಿನ ಜೊತೆಗೆ ದೈಹಿಕ ಆಟಗಳು ಕೂಡ ಮಕ್ಕಳಿಗೆ ಬಹಳ ಮುಖ್ಯವಾದದ್ದು, ಈ ಶಾಲೆಯ ಮೈದಾನದಲ್ಲಿ ತೆಗ್ಗು-ವಡ್ಡುಗಳಿದ್ದು, ಗುಡ್ಡದ ಕಲ್ಲುಗಳಿಂದ ತುಂಬಿದೆ. ವಿದ್ಯಾರ್ಥಿಗಳು ಆಟವಾಡಲು ಆಗುತ್ತಿಲ್ಲ ಆಗಾಗಿ ಆ ಮೈದಾನವನ್ನು ಸ್ವಚ್ಛಗೊಳಿಸಿ ಮೈದಾನವನ್ನು ಸರಿಪಡಿಸಬೇಕು. ಹಾಗೂ ಶಾಲೆಗೆ ಸುತ್ತಲೂ ಕಾಂಪೌಂಡ್ ನಿರ್ಮಿಸಿ, ಶಾಲೆಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಮಾಡುವಂತೆ ಆಗ್ರಹಿಸಿ ಇಂದು ಲಾಡ್ಲಾಪೂರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ ಡಿ. ಕಟ್ಟಿಮನಿ ಅವರಿಗೆ ಇಂದು ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಪಾಲ ಡಿ. ಕಟ್ಟಿಮನಿ ಅವರು ಅಮೃತ ಸ್ವರ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನಾವು ಆದಷ್ಟು ಬೇಗ ಈ ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ AIDSO ವಾಡಿ ಸಮಿತಿ ಅಧ್ಯಕ್ಷರಾದ ವೆಂಕಟೇಶ ದೇವದುರ್ಗ, ಸದಸ್ಯರಾದ ಸಿದ್ದಾರ್ಥ್ ತಿಪ್ಪನೋರ, ಅರುಣ ಕುಮಾರ್ ಮಲ್ಕಂಡಿ, ಮಲ್ಲಿಕಾರ್ಜುನ, ಭಾಗಮ್ಮ ಹಾಗೂ ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.