ಹೈದರಾಬಾದ್ ಕರ್ನಾಟಕ

ಬಾಬಾ ಸಾಹೇಬರ ರಥ ಮುಂದೆ ಸಾಗಲಿ: ಕೆ ನೀಲಾ

ಜೇವರ್ಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡುವುದರ ಮೂಲಕ ರಥವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಸಾಹಿತಿ ಕೆ. ನೀಲಾ ಹೇಳಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜೇವರ್ಗಿ ಮತ್ತು ಯಡ್ರಾಮಿ ತಾಲೂಕಾ ಸಮಿತಿ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ “ಸಂವಿಧಾನದ ರಕ್ಷಣೆ ಭಾರತದ ಐಕ್ಯತೆ” ದಿ. ಶಾಂತಪ್ಪ ಕಟ್ಟಿಮನಿ ಮುದೋಳ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸಂವಿಧಾನ ಜಾರಿಗೆ ಬಂದ ಮೇಲೆ ಮಹಿಳೆಯರಿಗೆ ಎಲ್ಲ ಅವಕಾಶಗಳು ಸಿಗುತ್ತಿವೆ. ಅವಕಾಶವಾದಿ ಜನರು ಸಂವಿಧಾನ ಪೂರ್ಣವಾಗಿ ಜಾರಿಗೆ ಬರಲು ಬಿಡುತ್ತಿಲ್ಲ. ದೇಶದ ಜನರು ತಮ್ಮ ಹಕ್ಕುಗಳನ್ನು ಪಡೆಯುವುದರ ಜೊತೆಗೆ ಕರ್ತವ್ಯಗಳನ್ನು ಮಾಡಬೇಕು.

ನಂತರ ಮಾತನಾಡಿದ ಉಪನ್ಯಾಸಕ ನಿಜಲಿಂಗ ದೊಡ್ಮನಿ ಸಂವಿಧಾನದ ಜಾಗ್ರತಿ ಕಾರ್ಯಕ್ರಮಗಳು ನಿತ್ಯ ಜರುಗಬೇಕು. ಸರ್ವ ಜನರಿಗೆ ಶಾಂತಿಯ ತೋಟ ನಿರ್ಮಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ. ದೇಶದ ಎಲ್ಲ ವರ್ಗದ ಮಹಿಳೆಯರು ಸೇರಿ ದಮನಿತರಿಗೆ ಬದುಕುವ ಹಕ್ಕು ನೀಡಿದ್ದಾರೆ. ವಿಶ್ವದ ಎಲ್ಲ ಸಂವಿಧಾನ ಓದಿಕೊಂಡ ಬಾಬಾ ಸಾಹೇಬರು ಸಮರ್ಥವಾದ ಗ್ರಂಥ ನೀಡಿದ್ದಾರೆ ಎಂದರು.

ದಸಂಸ ರಾಜ್ಯ ಅಧ್ಯಕ್ಷ ಅರ್ಜುನ ಭದ್ರೆ ಮಾತನಾಡಿ ಡಾ.ಅಂಬೇಡ್ಕರ್ ಅವರು ದೇಶದ ಜ್ಞಾನದ ಜ್ಯೋತಿಯಾಗಿದ್ದಾರೆ. ಎಲ್ಲರಿಗೂ ಧ್ವನಿಯಾದ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ ವಹಿಸಿದ್ಡರು. ಮಹೇಶ ಕೋಕಿಲೆ ಕಾರ್ಯಕ್ರಮ ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ಮಲ್ಲಿಕಾರ್ಜುನ ಕ್ರಾಂತಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಕಾಶೀಮ ಪಟೇಲ ಮುದೋಳˌ ಶಿವಶರಣಪ್ಪ ಕೋಬಾಳˌ ಶರಣಬಸವ ಕಲ್ಲಾ, ಮಲ್ಲಿಕಾರ್ಜುನ ಪೂಜಾರಿ, ಶಿವಕಾಂತಮ್ಮ ದಿ. ಶಾಂತಪ್ಪ ಕಟ್ಟಿಮನಿˌ ಗುರಣ್ಣ ಕಾಚಾಪುರˌ ಶಾಂತಪ್ಪ ಯಲಗೋಡ, ಪುಂಡಲೀಕ ಗಾಯಕವಾಡ, ಭೀಮರಾಯ ನಗನೂರˌ ದವಲಪ್ಪ ಮದನ್‌ˌ ಮಲ್ಲಿಕಾರ್ಜುನ ಕೆಲ್ಲೂರˌ ಸಿದ್ರಾಮ ಕಟ್ಟಿˌ ಶ್ರೀಹರಿ ಕರಕಿಹಳ್ಳಿˌ ರವಿ ಕುಳಗೇರಿˌ ಶ್ರೀಮಂತ ಧನ್ನಕರ್ˌ ಶಿಕ್ಷಕ ಗಂಗಪ್ಪ ಬಳಗಾನೂರˌ ಮಲ್ಲಮ್ಮ ಕೊಂಬಿನ್ˌ ಸೇರಿದಂತೆ ಹಲವರು ಉಪಸ್ಥಿತರಿರುವರು.

ಇದೇ ವೇಳೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ದಂಪತಿಗಳಾದ ಡಾ. ಮಹಾಲಿಂಗಪ್ಪ ಬಿ. ಮಂಗಳೂರುˌ ಡಾ. ಸೌಭಾಗ್ಯ ಎಂ. ಮಂಗಳೂರು ದಂಪತಿಗಳನ್ನು ಸನ್ಮಾನಿಸಲಾಯಿತು.

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

32 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

40 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago