ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಲು ಆಗ್ರಹ

ಶಹಾಬಾದ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ ಸೇವಾ ಭದ್ರತೆ ನೀಡಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ಸಂಘದ ನಾಯಕ ರವೀಂದ್ರ ನರೋಣಿ ಆಗ್ರಹಿಸಿದ್ದಾರೆ.

ರಾಜ್ಯದಾದ್ಯಂತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸೇವಾ ಭದ್ರತೆ ಇಲ್ಲದೆ, ಕಡಿಮೆ ಸಂಬಳಕ್ಕೆ ಜೀತದಾಳುಗಳಂತೆ ದುಡಿಯುತ್ತಿರುವ ಉಪನ್ಯಾಸಕರನ್ನು ಸರ್ಕಾರ ಕೂಡಲೇ ಕಾಯಂ ಮಾಡಬೇಕು’ ಎಂದು ಆಗ್ರಹಿಸಿದರು.ಅಲ್ಲದೇ ಇದೇ ದಿಸೆಂಬರ್ 7 ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಪ್ರತಿಭಟನೆಯೂ ಹಮ್ಮಿಕೊಂಡಿದ್ದೆವೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ 430 ಪ್ರಥಮ ದರ್ಜೆ ಕಾಲೇಜುಗಳು ಬಹುತೇಕ ಅತಿಥಿ ಉಪನ್ಯಾಸಕರ ಕರ್ತವ್ಯವನ್ನು ಅವಲಂಬಿಸಿವೆ. ಆದರೆ, ಹತ್ತಾರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಅತಿಥಿ ಎಂಬ ಅನಿಷ್ಟ ಪದ್ಧತಿಯಿಂದ ನಮ್ಮನ್ನು ಮುಕ್ತಿಗೊಳಿಸಿ ಕಾಯಂಗೊಳಿಸುವ ಮೂಲಕ, ಸೇವಾ ಭದ್ರತೆ ಒದಗಿಸಬೇಕು’ ಎಂದರು.

ನಮ್ಮ ಬೇಡಿಕೆ ಈಡೇರಿಸುವಂತೆ ಸತತವಾಗಿ ಎಲ್ಲಾ ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಅದರಂತೆ, ಈಗಿನ ಸರ್ಕಾರಕ್ಕೂ ಮನವಿ ಕೊಟ್ಟು ಒತ್ತಾಯಿಸಿದ್ದೇವೆ. ಆದರೆ, ಬೇಡಿಕೆಗೆ ಸ್ಪಂದಿಸದಿರುವುದರಿಂದ ತರಗತಿಗಳನ್ನು ಬಹಿಷ್ಕರಿಸಿ, ಬೀದಿಗಿಳಿದು ಅನಿರ್ದಿμÁ್ಟವಧಿ ಹೋರಾಟ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಉಪನ್ಯಾಸಕರ ಪರವಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್ತಿನ ಸದಸ್ಯರು ಸಹ ಅಧಿವೇಶನಗಳಲ್ಲಿ ಗಮನ ಸೆಳೆದಿದ್ದಾರೆ. ಇμÁ್ಟದರೂ ಯಾವ ಸರ್ಕಾರವನ್ನೂ ನಮ್ಮನ್ನು ಕಾಯಂಗೊಳಿಸುವ ಕುರಿತು ಹೆಜ್ಜೆ ಇಟ್ಟಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಈಗಿನ ಸರ್ಕಾರವಾದರೂ ನಮಗೆ ಕಾಯಂ ಭಾಗ್ಯ ಕರುಣಿಸಬೇಕು’ ಎಂದು ಹೇಳಿದರು.

ಹಿಂದೆ ವಿರೋಧ ಪಕ್ಷದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅತಿಥಿ ಉಪನ್ಯಾಸಕರ ನಿಯೋಗವು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭೇಟಿ ಮಾಡಿತ್ತು. ಆಗ ಅಧಿವೇಶನದಲ್ಲಿ ನಮ್ಮ ಪರ ದನಿ ಎತ್ತಿದ್ದ ಇಬ್ಬರೂ ನಾಯಕರು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಉಪನ್ಯಾಸಕರ ಸಮಸ್ಯೆ ಬಗೆಹರಿಸುವ ಕುರಿತು ತನ್ನ ಪ್ರಣಾಳಿಕೆಯಲ್ಲೂ ಭರವಸೆ ನೀಡಿತ್ತು. ಅದರಂತೆ ಈಗ ಪಕ್ಷವು ಅಧಿಕಾರಕ್ಕೆ ಬಂದಿದೆ. ಹಿಂದೆ ಕೊಟ್ಟ ಭರವಸೆಯಂತೆ ಇಬ್ಬರೂ ನಾಯಕರು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ ನುಡಿದಂತೆ ನಡೆಯಬೇಕು ಎಂದು ಒತ್ತಾಯಿಸಿದರು.

emedialine

Recent Posts

ಶರಣಬಸವ ವಿಶ್ವವಿದ್ಯಾಲಯದಲ್ಲಿ 14ರಂದು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ; ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಜಂಟಿಯಾಗಿ, ನಗರದ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ…

21 mins ago

ಕಾ.ಸೀತಾರಾಮ ಯೇಚೂರಿಗೆ ಸಿಪಿಐಎಂ ಕಚೇರಿಯಲ್ಲಿ ಶೃದ್ಧಾಂಜಲಿ

ಕಲಬುರಗಿ: ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರದಾನ ಕಾರ್ಯದರ್ಶಿಗಳಾಗಿದ್ದ 72 ವಯಸ್ಸಿನ ಕಾ.ಸೀತಾರಾಮ ಯೇಚೂರಿಯವರು ಇಂದು ಸಂಜೆ ನಿಧನ ಹೊಂದಿದ್ದು,…

28 mins ago

ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಧೃಡ ಆರೋಗ್ಯವಾಗಿ ಇಡುತ್ತವೆ

ಕಲಬುರಗಿ: ಕ್ರೀಡೆಗಳು ವಿದ್ಯಾರ್ಥಿಗಳು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅವರು ದೈನಂದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅನಿರೀಕ್ಷಿತ ರೋಗಗಳು…

41 mins ago

PDA ಕಾಲೇಜಿನಲ್ಲಿ ಸೆ. 13,14 ರಂದು ವಿಚಾರ ಸಂಕಿರಣ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ ಕಾಲೇಜಿನಲ್ಲಿ ನಾಳೆಯಿಂದ ಎರಡುದಿನಗಳ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ…

44 mins ago

ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತ ನೂತನ ಸಮಿತಿ ರಚನೆ

ಕಲಬುರಗಿ: ಲಿಂಗಾಯತ ದೀಕ್ಷ ಪಂಚಮಸಾಲಿ ವಕೀಲರ ಪರಿಷತ್ತಿನ ಸಭೆಯಲ್ಲಿ ಜಿಲ್ಲಾ ಸಮಿತಿ ರಚಿಸಲಾಯಿತು. ಈ ವೇಳೆಯಲ್ಲಿ ಜಿಲ್ಲಾ ಅಧ್ಯಕ್ಷರಾಗಿ ರವೀಂದ್ರ…

48 mins ago

ಕಲಬುರಗಿ: ಸೆ. 13 ರಿಂದ “ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ”ರು ಅಭಿಯಾನ

ಕಲಬುರಗಿ: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರ್ಯವಂತ" ಎಂಬ ಧ್ಯೇಯವಾಕ್ಯದಡಿ ರಾಜ್ಯವ್ಯಾಪಿ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420