ವಾಡಿ; ನಾಯ್ಕಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸದಸ್ಯರಿಗೆ ನಾಲ್ಕು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮಕ್ಕೆ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗವಾರ್ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಸ್ವಹಾಸಾಯ ಸಂಘದ ಸದಸ್ಯರು ಉದ್ಯಮಿಗಳು ಆದಾಗ ಮಾತ್ರ ಅವರ ಕುಟುಂಬಗಳು ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಏನ್ ಎಲ್ ಆರ್ ಎಂ ಸಂಜೀವಿನಿ ಸಂಘಗಳಿಗೆ ಸರ್ಕಾರಿ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳನ್ನು ಖಂಡಿತವಾಗಿಯೂ ನಾಯಕಲ್ ಗ್ರಾಮದ ಸ್ವಹಸಹ ಸಂಘಗಳಿಗೆ ಕೊಡಿಸುತ್ತೇನೆ ಮತ್ತು ಗ್ರಾಮದಲ್ಲಿ ಮಿನಿ ಬಿಗ್ ಬಜಾರ್ ತೆರೆಯಿರಿ ಮತ್ತು ನಿಮಗೆ ಮಳಿಗೆಗಳು ಬೇಕಾಗಿದ್ದರೆ ಗ್ರಾಮ ಪಂಚಾಯತಿ ವತಿಯಿಂದ ಉಪಯೋಗಿಸಲು ಅನುಕೂಲ ಮಾಡಿಕೊಡುತ್ತೇನೆ ಮತ್ತು ಎಲ್ಲಾ ಸದಸ್ಯರು ಸ್ವಯಂ ಉದ್ಯೋಗಗಳನ್ನು ಮಾಡಬೇಕು. ನಾಲ್ಕು ದಿನ ತರಬೇತಿಯಲ್ಲಿ ಉತ್ತಮವಾದ ಮಾಹಿತಿಯನ್ನು ಪಡೆದು ನೀವು ಬೆಳವಣಿಗೆ ಆಗಬೇಕೆಂದು ತಿಳಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಗಿರಿ ಸರ್ ಕಾರ್ಯಕ್ರಮ ವ್ಯವಸ್ಥಾಪಕರು ಜಿಲ್ಲಾ ಪಂಚಾಯತಿ ಯಾದಗಿರಿ ಇವರು ಮಾತನಾಡಿ ಸಂಜೀವಿನಿ ಯೋಜನೆ ಅಡಿಯಲ್ಲಿ ಸಂಘದ ಸದಸ್ಯರಿಗೆ ಹಣಕಾಸಿನ ಬಗ್ಗೆ ಅಲ್ಲದೆ ಪೌಷ್ಟಿಕ ಆಹಾರ ಲಿಂಗ ತಾರತಮ್ಯ ಮಹಿಳಾ ದೌರ್ಜನ್ಯ ಅವರ ಕುಟುಂಬಗಳಲ್ಲಿ ಇದ್ದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಕೆಲಸವನ್ನು ಮಾಡುತ್ತೇವೆ ಆದ್ದರಿಂದ ಈ ಕಾರ್ಯಕ್ರಮವು ಮಾದರಿ ಗ್ರಾಮ ಪಂಚಾಯತಿ ಒಕ್ಕೂಟ ಆಗಿದ್ದರಿಂದ ಇಲ್ಲಿ ತರಬೇತಿ ನೀಡಲಾಗುತ್ತಿದೆ ಇದರ ಒಂದು ಸೌಲಭ್ಯವನ್ನು ಸಂಘಗಳು ಪಡೆದುಕೊಂಡು ಇಡೀ ಜಿಲ್ಲೆಯಲ್ಲಿಯೇ ಉತ್ತಮವಾದ ಒಕ್ಕೂಟ ಎಂದು ಎಣಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಶಿ ರಾಜ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೆಹುರುನ್ನಿಸ ಶೇಕ್ ಅಬ್ದುಲ್ ನಬಿ ಇದ್ದರು.
ಪವನ್ ಕುಮಾರ್ ಮೇಲ್ವಿಚಾರಕರು ಎಲ್ಲಾ ಗಣ್ಯರಿಗೆ ಸ್ವಾಗತಿಸಿ ನಿರೂಪಿಸಿದರು. ಶಶಿಕಲಾ ಎಂಬಿಕೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ಸಂಗಮ ಮಲ್ಲಪ್ಪ ಇವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾರ್ಯದರ್ಶಿಯಾದ ಪದ್ಮಾವತಿ ಕಟ್ಟಿಮನಿ ಹಾಗೂ ಎಲ್ ಸಿ ಆರ್ ಪಿ ಪರ್ವೀನ್ ಹಾಗೂ ಕೃಷಿಸಕಿ ಬಾಗಮ್ಮ ಭಿಮಾಣ ಮತ್ತು ಸಂಪನ್ಮೂಲ ವ್ಯಕ್ತಿಗಳು ಭಾಗ್ಯಶ್ರೀ ಕುರುಕುಂದ ಪಾರ್ವತಿ ವಿಶ್ವಕರ್ಮ ಇದ್ದರು.
ಸೇಡಂ: ಜಗತ್ತಿನಲ್ಲಿ ಎರಡು ಸುರಕ್ಷಿತ ಸ್ಥಳ ಅಪ್ಪನ ಹೆಗಲು, ಅಮ್ಮನ ಮಡಿಲು ಹಾಗಾಗಿ ತಾಯಿ, ತಂದೆಯರ ಹೆಸರಿನಲ್ಲಿ ನೀಡುವ ಪ್ರಶಸ್ತಿ…
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…