ಶಹಾಬಾದ; ನಗರಸಭೆಯ ವಾರ್ರ್ಡ ನಂ. 25 ರ ಉಪಚುನಾವಣೆ ಬಹುತೇಖ ಶಾಂತಿಯುತವಾಗಿ ನಡೆದಿದ್ದು, ಶೇ 54.52 %ರಷ್ಟು ಮತದಾನವಾಗಿದೆ.
ನಗರದ ಅಪ್ಪರಮಡ್ಡಿ ಪ್ರದೇಶದ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿತ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು, ಬೆಳಗಿನ ಜಾವದಲ್ಲಿಯೇ ಮತದಾರರು ಬಂದು ಬಿರುಸಿನ ಮತ ಚಲಾಯಿಸಿದರು.
ಮಧ್ಯಾಹ್ನ ಹೊತ್ತಿಗೆ ಮತದಾನ ನೀರಸ ಪ್ರಕ್ರಿಯೆ ಕಂಡು ಬಂದರೂ, ಮತ್ತೆ ನಾಲ್ಕು ಗಂಟೆಯಿಂದ ಬಿರುಸಿನ ಮತದಾನ ಕಂಡುಬಂದಿತು.ಹೊಟ್ಟೆ ಪಾಡಿಗಾಗಿ ಪಟ್ಟಣಕ್ಕೆ ಹೋದ ಜನರನ್ನು ಅಭ್ಯರ್ಥಿಗಳು ಕರೆಯಿಸಿ, ತಮ್ಮ ಪರವಾಗಿ ಮತದಾನ ಮಾಡಲು ಹರಸಾಹಸ ಪಟ್ಟರು.
ಬೆಳಿಗ್ಗೆ ಬೇಗನೆ ಬಂದು ಮತ ಚಲಾಯಿಸಿ ಕೃಷಿ, ಕಲ್ಲಿನ ಗಣಿ ಕೆಲಸಕ್ಕೆ ಹೋಗುವಂತ ದೃಶ್ಯ ಕಂಡುಬಂದಿತು. ಮತದಾರರು ಮತದಾನ ಕೇಂದ್ರಕ್ಕೆ ಒಬ್ಬೊಬ್ಬರಾಗಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆಯ ದೂರದಲ್ಲಿ ಅಭ್ಯರ್ಥಿಗಳು ನಿಂತು ಮತದಾನ ಕೇಂದ್ರಕ್ಕೆ ಬರುವ ಮತದಾರರನ್ನು ಓಲೈಸಲು ಮುಂದಾಗುತ್ತಿದ್ದರು.
ಬೆಂಗಳೂರು, ಪೂನಾ, ಮುಂಬಯಿ, ಸೋಲಾಪೂರ, ಹೈದ್ರಾಬಾದನಲ್ಲಿ ಕೆಲಸಕ್ಕೆ ಹೋದ ಮತದಾರರನ್ನು ಗ್ರಾಮಕ್ಕೆ ಬರಲು ಅಭ್ಯರ್ಥಿಗಳು ವಾಹನಗಳ ವ್ಯವಸ್ಥೆ ಮಾಡಿದ್ದರು.ಅಲ್ಲದೇ ಅಭ್ಯರ್ಥಿಗಳು ಮತದಾರರಿಗೆ ಕರೆ ಮಾಡಿ ಮತ ಚಲಾಯಿಸಲು ಹೇಳುತ್ತಿರುವುದು ಕಂಡು ಬಂದಿತು.ಅಲ್ಲದೇ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಮತಗಟ್ಟೆಗೆ ಬರುತ್ತಿದ್ದ ಮತದಾರರನ್ನು ಸೆಳೆಯಲು ಅವರ ಬೆಂಬಲಿಗರು ಕಸರತ್ತು ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಆರಕ್ಷಕ ನಿರೀಕ್ಷಕ ನಟರಾಜ ಲಾಡೆ ಹಾಗೂ ಸಿಬ್ಬಂದಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ವಾರ್ಡ ನಂ.25ರಲ್ಲಿ ಒಟ್ಟು 2386 ಮತದಾರರಿದ್ದು, ಅದರಲ್ಲಿ 1301 ಮತದಾರರು ಮತ ಚಲಾಯಿಸಿದರು. 620 ಪುರುಷ ಮತದಾರರು ಮತ್ತು 681 ಮಹಿಳಾ ಮತದಾರರು ಮತ ಚಲಾಯಿಸಿದರು. ತಾಲೂಕಿನಲ್ಲಿ ಒಟ್ಟು ಶೇ 54.52 %ರಷ್ಟು ಮತದಾರರು ಮತ ಚಲಾಯಿಸಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…