ಬಿಸಿ ಬಿಸಿ ಸುದ್ದಿ

ಆಳಂದ-ಹಾವೇರಿ ಸಾರಿಗೆ ಬಸ್ ಕಾರ್ಯಾಚರಣೆಗೆ ಬಿ.ಆರ್.ಪಾಟೀಲ್ ಚಾಲನೆ

ಕಲಬುರಗಿ: ಆಳಂದ-ಹಾವೇರಿ ವಾಯಾ ಮಾದನಹಿಪ್ಪರಗಾ ಮಾರ್ಗದ ಸಾರಿಗೆ ಬಸ್ ಕಾರ್ಯಾಚರಣೆಗೆ ಗುರುವಾರ ಆಳಂದ ತಾಲೂಕಿನ ಮಾದನಹಿಪ್ಪರಗಾ ಬಸ್ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ಶಾಸಕ‌ ಬಿ.ಆರ್.ಪಾಟೀಲ ಅವರು ಚಾಲನೆ ನೀಡಿದರು.

ಈ ಬಸ್ ಪ್ರತಿ ದಿನ ಆಳಂದ ಬಸ್‌ ನಿಲ್ದಾಣದಿಂದ ಮದ್ಯಾಹ್ನ 3.30ಕ್ಕೆ ಹೊರಟು, ಮಾದನ ಹಿಪ್ಪರಗಾಗೆ 4.30ಕ್ಕೆ ತಲುಪಿ ಅಲ್ಲಿಂದ ಅಫಜಲಪುರ- ಸಿಂದಗಿ-ವಿಜಯಪುರ- ಜಮಖಂಡಿ- ಲೋಕಾಪುರ, ಸವದತ್ತಿ- ಧಾರವಾಡ- ಹುಬ್ಬಳ್ಳಿ ಮಾರ್ಗವಾಗಿ ಮರು ದಿನ ಬೆಳಿಗ್ಗೆ 6 ಗಂಟೆಗೆ ಹಾವೇರಿಗೆ ತಲುಪಲಿದೆ. ಇದೆ ಮಾರ್ಗದಲ್ಲಿ ಪ್ರತಿ ದಿನ ಸಂಜೆ 5.30 ಗಂಟೆಗೆ ಹಾವೇರಿಯಿಂದ ಹೊರಟು ಮರು ದಿನ ಬೆಳಿಗ್ಗೆ 7 ಗಂಟೆಗೆ ಆಳಂದ ತಲುಪಲಿದೆ.

ಈ ಸಂದರ್ಭದಲ್ಲಿ ಮಾದನಹಿಪ್ಪರಗಾ ವಿರಕ್ತ ಮಠದ ಪೂಜ್ಯ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಲಬುರಗಿ ವಿಭಾಗ-2ರ ಸಿದ್ದಪ್ಪ ಜಿ. ಗಂಗಾಧರ, ವಿಭಾಗೀಯ ಸಂಚಾರ ಅಧಿಕಾರಿ ರವೀಂದ್ರ ಕುಮಾರ ಡಿಗ್ಗಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಶೇಖ ಹುಸೇನ್, ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ, ಅಂಕಿ ಸಂಖ್ಯೆ ಅಧಿಕಾರಿ ಮಲ್ಲಿನಾಥ ಸರಸಂಬಿ ಮತ್ತಿತರರು ಇದ್ದರು.

emedialine

Recent Posts

ಅನರ್ಹ ಬಿ.ಪಿ.ಎಲ್ ಪಡಿತರ ಚೀಟಿ ಪತ್ತೆ ಹಚ್ಚಿ: ಅಕ್ರಮ‌ ಮದ್ಯ ಮಾರಾಟಕ್ಕೆ ಬ್ರೆಕ್ ಹಾಕಿ| ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಉಳ್ಳವರು ಸಹ ಸರ್ಕಾರಿ ಸೌಲಭ್ಯ ಪಡೆಯಲು ಬಿ‌.ಪಿ‌.ಎಲ್ ಪಡಿತರ ಚೀಟಿ ಪಡೆದಿರುವ ಸಾಧ್ಯತೆ ಇದ್ದು, ಕೂಡಲೆ ಇಂತಹ ಅನರ್ಹ…

5 hours ago

ಕುಂಬಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ನೀಡಲು ಒತ್ತಾಯ

ಶಹಾಬಾದ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಕುಂಬಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ಅನುದಾನ ನೀಡುವ ಮೂಲಕ ಕಲಬುರಗಿ…

7 hours ago

ಪರಿಸರಸ್ನೇಹಿ ಪರ್ಯಾಯ ಇಂಧನಗಳ ಬಳಕೆ ಅಗತ್ಯ

ಶಹಬಾದ: ಪರಿಸರ ಮಾಲಿನ್ಯ ಉಂಟು ಮಾಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿಯಾಗುವ ಪರ್ಯಾಯ ಇಂಧನಗಳ ಬಳಕೆ ಮಾಡಿದಲ್ಲಿ…

7 hours ago

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. 'ವ' ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ…

7 hours ago

ಮೋಹರಂ ಭಾವೈಕ್ಯತೆಯ ಸಂಕೇತದ ಉತ್ಸವ

ಕಲಬುರಗಿ: ಭಾರತ ಅನೇಕ ಜಾತಿ, ಧರ್ಮಗಳಿಂದ ಕೂಡಿದ್ದ ದೇಶವಾಗಿದ್ದು, ಹಬ್ಬ, ಜಾತ್ರೆ, ಉತ್ಸವಗಳು ಪರಸ್ಪರ ಬೆಸೆಯುತ್ತವೆ. ತ್ಯಾಗ, ಭಾವೈಕ್ಯತೆಯ ಸಂಕೇತವಾಗಿ…

7 hours ago

ತಾಜಸುಲ್ತಾನಪುರ: ಶಾಲಾ ಸಂಸತ್ತು ರಚನೆ

ಕಲಬುರಗಿ: ನಗರ ಹೊರವಲಯದ ತಾಜಸುಲ್ತಾನಪುರ ಗ್ರಾಮದ ಕೆಎಸ್ ಆರ್ ಪಿ ಸರಕಾರ ಪ್ರೌಢ ಶಾಲೆ ಕೆ. ಎಸ್. ಆರ್. ಪಿ…

7 hours ago