ಬಿಸಿ ಬಿಸಿ ಸುದ್ದಿ

ಕುರಿಕೋಟಾದಲ್ಲಿ ನೆರೆ ಹಾವಳಿ ರಾಜ್ಯ ಮಟ್ಟದ ಅಣುಕು ಪ್ರದರ್ಶನ

  • ಸಂಭಾವ್ಯ ಪರಿಸ್ಥಿತಿಗೆ ಸನ್ನಧವಾಗುತ್ತಿದೆ ಜಿಲ್ಲಾ ವಿಪ್ಪತ್ತು ನಿರ್ವಹಣಾ ತಂಡ

ಕಲಬುರಗಿ: ಭಾರಿ ಮಳೆ, ಪ್ರವಾಹ ಮುನ್ಸೂಚನೆ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ರಕ್ಷಿಸಿದ ಎನ್.ಡಿ.ಆರ್.ಎಫ್. ಪಡೆ, ಕಾಳಜಿ ಕೇಂದ್ರಕ್ಕೆ ನಿರಾಶ್ರಿತರ ಸುರಕ್ಷಿತ ರವಾನೆ, ಪರಿಹಾರ ಕೇಂದ್ರದಲ್ಲಿ ಊಟೋಪಚಾರದ ಜೊತೆಗೆ ವೈದ್ಯಕೀಯ ಆರೈಕೆ, ಸಾಂತ್ವನ ನುಡಿಗಳ ಜೊತೆಗೆ ಆತ್ಮಸ್ಥೈರ್ಯ ತುಂಬುವ ದೃಶ್ಯಾವಳಿ.

ಹೌದು, ಇದೆಲ್ಲವು ಕಂಡುಬಂದಿದ್ದು ಗುರುವಾರ ಜಿಲ್ಲೆಯ ಕಮಲಾಪೂರ ತಾಲೂಕಿನ ಬೆಣ್ಣೆತೋರಾ ನದಿಗೆ ಹತ್ತಿಕೊಂಡಿರುವ ಕುರಿಕೋಟಾ ಎಂಬ ಪುಟ್ಟ ಗ್ರಾಮದಲ್ಲಿ.

ಅಂದಾಗ್ಗೆ ಇದು ವಾಸ್ತವವಾಗಿ ನೆರೆ ಹಾವಳಿಯಿಂದ ಉಂಟಾದ ದೃಶ್ಯಾವಳಿಗಳಲ್ಲ. ಇದು ಸಂಭಾವ್ಯ ನೆರ ಹಾವಳಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷಾ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಕಲಬುರಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎನ್.ಡಿ.ಆರ್.ಎಫ್. ತಂಡ, ಪೊಲೀಸ್, ಅಗ್ನಿಶಾಮಕ ಹೀಗೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಆಯೋಜಿಸಿದ ನೆರೆ ಹಾವಳಿ ರಕ್ಷಣಾ ಕಾರ್ಯಾಚರಣೆಯ ರಾಜ್ಯ ಮಟ್ಟದ ಅಣಕು ಪ್ರದರ್ಶನದಲ್ಲಿ ಕಂಡುಬಂದ ನೋಟ.

ಬೆಣ್ಣೆತೋರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಯಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ಸಂಭಾವ್ಯ ನೆರೆ ಹಾವಳಿ ಹಿನ್ನೆಲೆಯಲ್ಲಿ ಇಂದಿಲ್ಲಿ ಅಣುಕು ಪ್ರದರ್ಶನ ಏರ್ಪಡಿಸಿ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ಪರಿಹಾರ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆ ಹೇಗೆಲ್ಲ ಮಾಡಬೇಕು ಎಂಬುದರ ಕುರಿತು ಅರಿವು ನೀಡುವುದರ ಜೊತೆಗೆ ಅಧಿಕಾರಿ ಸಿಬ್ಬಂದಿಗೆ ಪುನರ್‍ಮನನ ಕಾರ್ಯ ಇದಾಗಿತ್ತು.

ನೆರೆ ಹಾವಳಿಗೆ ಸಿಲುಕಿದವರ ರಕ್ಷಿಸಲು ಬಂದ 25 ಜನರ ತಂಡವುಳ್ಳ ವಿಜಯವಾಡಾದ 10ನೇ ಬಟಾಲಿಯನ್ ಪಡೆ ಜನರನ್ನು ರಕ್ಷಿಸಿ ಸುರಕ್ಷಿತ ಕೇಂದ್ರಕ್ಕೆ ತರೆತರುವ ದೃಶ್ಯ ಸಾಮಾನ್ಯವಾಗಿತ್ತು. ರಕ್ಷಿತರನ್ನು ರಿಲೀಫ್ ಕ್ಯಾಂಪಿಗೆ ತಂದು ಅಲ್ಲಿ ವೈದ್ಯಕೀಯ ಚಿಕಿತ್ಸೆ, ಉಪಚಾರ ನೀಡಲಾಯಿತು.

ಅಣಕು ಪ್ರದರ್ಶನ ಭಾಗವಾಗಿ ಒಟ್ಟಾರೆ 9 ಜನರನ್ನು ರಕ್ಷಿಸಲಾಗಿ ಇದರಲ್ಲಿ ಓರ್ವನಿಗೆ ಸ್ಥಳದಲ್ಲಿಯೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಇಬ್ಬರನ್ನು ಮಹಾಗಾಂವ ಪಿ.ಎಚ್.ಸಿ.ಗೆ ಮತ್ತು 6 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಿಲೀಫ್ ಕ್ಯಾಂಪಿನಲ್ಲಿರುವ ವೈದ್ಯಕೀಯ ನೋಡಲ್ ಅಧಿಕಾರಿ ಮತ್ತು ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ ಮಾಹಿತಿ ನೀಡಿದರು.

ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ಡಿ. ಅವಟಿ ನೇತೃತ್ವದ ಪಶು ವೈದ್ಯರ ತಂಡ ರೆಸ್ಕ್ಯೂ ಮಾಡಲಾದ ಜಾನುವಾರುಗಳಿಗೆ ತಾತ್ಕಲಿಕ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರು. ಕಾಳಜಿ ಕೇಂದ್ರದ ಸಂಪೂರ್ಣ ಉಸ್ತುವಾರಿಯನ್ನು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ವಹಿಸಿದ್ದರು.

ತುಂಬಾ ಸಹಕಾರಿ: ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮಾತನಾಡಿ ಇಂದಿಲ್ಲಿ ನೆರೆ ಹಾವಳಿ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ. ಇದಕ್ಕಾಗಿ ಸಹಕರಿಸಿದ ಪೊಲೀಸ್, ಅಗ್ನಿಶಾಮಕ, ಎನ್.ಡಿ.ಆರ್.ಎಫ್. ತಂಡ, ಸ್ಥಳೀಯ ಆಡಳಿತ ಸೇರಿದಂತೆ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಅಭಿನಂದಿಸುವೆ. ಮುಂದಿನ ದಿನದಲ್ಲಿ ಬರುವಂತಹ ನೆರೆ ಹಾವಳಿ ಸನ್ನಿವೇಶದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಂದಿನ ಅಣುಕು ಪ್ರದರ್ಶನ ತುಂಬಾ ನೆರವಿಗೆ ಬರಲಿದೆ ಎಂದರು.

ರಕ್ಷಣೆ ಕಾರ್ಯಾಚರಣೆ ಯಶಸ್ವಿ: ಅಣಕು ಪ್ರದರ್ಶನದ ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತಿದ ವಿಜಯವಾಡಾದ ಎನ್.ಡಿ.ಆರ್.ಎಫ್. 10ನೇ ಬಟಾಲಿಯ್ ಕಮಾಂಡರ್ ರಾಬಿನ್ ಮಾತನಾಡಿ, ಜಿಲ್ಲಾಡಳಿತದಿಂದ ಕರೆ ಬಂದ ಕೂಡಲೆ ನಮ್ಮ ತಂಡ ಇಲ್ಲಿಗೆ ಧಾವಿಸಿದೆ. ನೆರ ಹಾವಳಿ ಪೂರ್ವ, ನೆರ ಹಾವಳಿ ಹಾಗೂ ನಂತರದ ಪರಿಸ್ಥಿತಿಯಲ್ಲಿ ಸ್ಥಳದಲಿಯೆ ನಮ್ಮ ತಂಡ ಬಿಡಾರ ಹೂಡಿ ನೆರೆ ಹಾವಳಿಯಲ್ಲಿ ಸಿಲುಕಿದ ಜನ-ಜಾನುವಾರುಗಳನ್ನು ರಕ್ಷಿಸಲಾಗಿದೆ. ಸ್ಥಳೀಯ ಆಡಳಿತ, ಜನರ ಸಹಕಾರ ಮರೆಯಲಾಗದು ಎಂದು ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

ರಕ್ಷಣೆಗೆ ಸದಾ ರೆಡಿ: ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಮಾತನಾಡಿ ಇಂದಿಲ್ಲಿ ಆಯೋಜಿಸಿದ ಅಣಕು ಪ್ರದರ್ಶನದಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ಎನ್.ಡಿ.ಆರ್.ಎಫ್., ಅಗ್ನಿಶಾಮಕ, ಹೋಂ ಗಾರ್ಡ್ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ರಕ್ಷಣೆ ಕಾರ್ಯಚರಣೆ ಯಶಸ್ವಿಗೊಳಿಸಿದ್ದಾರೆ.

ಒಳಾಡಳಿತ ಭಾಗದಲ್ಲಿ ಯಾವುದೇ ಸಂದರ್ಭದಲ್ಲಿ ನೈಸರ್ಗಿಕ ವಿಕೋಪ, ವಿಪತ್ತು ಬಂದಾಗ ಜನರ ರಕ್ಷಣೆಗೆ ಪೊಲೀಸ್ ಇಲಾಖೆ ಯಾವಾಗಲು ಸನ್ನಧವಾಗಿರುತ್ತದೆ ಮತ್ತು ಇಂದಿನ ಅಣಕು ಪ್ರದರ್ಶನ ಪೊಲೀಸ್ ಸಿಬ್ಬಂದಿಗೆ ಮುಂದಿನ ದಿನದಲ್ಲಿ ತುಂಬಾ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಅಣಕು ಪ್ರದರ್ಶನದಲ್ಲಿ ಹೆಚ್ಚುವರಿ ಎಸ್.ಪಿ. ಶ್ರೀನಿಧಿ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ರೂಪಿಂದರ್ ಕೌರ್, ಕಮಲಾಪೂರ ತಹಶೀಲ್ದಾರ ಮೊಸೀನ್ ಅಹ್ಮದ್, ಡಿ.ಐ.ಸಿ. ಜಂಟಿ ನಿರ್ದೇಶಕ ಸತೀಷಕುಮಾರ, ಡಿ.ಯು.ಡಿ.ಸಿ ಪಿ.ಡಿ ಮುನಾವರ್ ದೌಲಾ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

emedialine

Recent Posts

ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ

ಶಹಾಬಾದ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ ಎಂದು ತಹಸೀಲ್ದಾರ ಜಗದೀಶ ಚೌರ್ ಹೇಳಿದರು. ಅವರು…

5 hours ago

ಪಾಲಿಕೆ ಸದಸ್ಯ ಸಚಿನ್ ಶಿರವಾಳಗೆ ಭೀಮನಗೌಡ ಪರಗೊಂಡ ಸನ್ಮಾನ

ಕಲಬುರಗಿ: ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಹಾನಗರದ ವಿದ್ಯಾನಗರ ವಾರ್ಡ್ ದ ಮಹಾನಗರ ಪಾಲಿಕೆಯ ಸದಸ್ಯ ಆಗಿರುವ ಸಚಿನ್ ಶಿರವಾಳ ಅವರು…

6 hours ago

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ ಎಸ್.ಡಿ ನೇಮಕ

ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.…

7 hours ago

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

9 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

9 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420