ಬಿಸಿ ಬಿಸಿ ಸುದ್ದಿ

ಸೀರತ್ ಉನ್ ನಬಿ ಪ್ರತಿಭಾ ಪುರಸ್ಕಾರ: 75 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 2 ಲಕ್ಷ ರೂ ಪ್ರತಿಭಾ ಪುರಸ್ಕಾರ ವಿತರಣೆ

ಕಲಬುರಗಿ: ಕರ್ನಾಟಕ ಸೀರತ್ ಉನ್ ನಬಿ ಸ್ಟಡೀ ಮತ್ತು ರಿಸರ್ಚ್ ಸೆಂಟರ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮರ್ಖಜಿ ಸೀರತ್ ಸಮಿತಿ ಹಾಗೂ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಗರದ ಮೊಗಲ್ ಗಾರ್ಡನ್ ದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರತಿ ವರ್ಷದಂತೆ ವಿತರಿಸಲಾಯಿತು.

ಖುರಾನ್ ದಲ್ಲಿ ಪ್ರವಾದಿ‌ ಮೊಹಮ್ಮದ ಕುರಿತ ಆಯೋಹಿಸಲಾದ ಪ್ರಬಂಧ, ಖುರಾನ್ ಕ್ವೀಜ್, ಸೀರತ್ ಕ್ವೀಜ್ ಹಾಗೂ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ತಲಾ ಆರು‌ ಸಾವಿರ, ನಾಲ್ಮು ಸಾವಿರ, ಮೂರು ಸಾವಿರ, ಎರಡು ಸಾವಿರ ಬಹುಮಾನ ಪುರಸ್ಕರಿಸಲಾಯಿತು.

ವಿವಿಧ ಸ್ಪರ್ಧೆಗಳಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪಠ್ಯೇತರ ಸಲಕರಣೆ ಸ್ಕೂಲ್ ಬ್ಯಾಗ್, ಟೀಫಿನ್ ಬಾಕ್ಸ್, ಕಂಪಾಸ್ , ನೋಟ್ ಬುಕ್ ಸೇರಿದಂತೆ ಇತರ ಸಾಮಾಗ್ರಿಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.

ಖಾಜಾ ಬಂದೇನವಾಜ್ ದರ್ಗಾದ ಮುಫ್ತಿ ಸೈಯದ್ ಅಬ್ದುಲ್ ರಸೀದ ಮತ್ತು ಖಾಲಿದ್ ಸೈಫುಲ್ಲಾ ರಹಿಮಾನರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಸ್ಲಿಂ ಪಸ್ರ್ನಲ್ ಲಾ ಬೋರ್ಡ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೌಲಾನಾ ಖಾಲಿದ ಸೈಫುಲ್ಲಾ ರಹಮಾನಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ ಸೈಯದ್ ಶಾಃ ಗೇಸುದರಾಜ್ ಖುಸ್ರೋ ಹುಸೇನಿ, ಉಸ್ಮಾನಿಯಾ ಯೂನಿವರ್ಸಿಟಿಯ ಅರೆಬಿಕ್ ವಿಭಾಗದ ಮಾಜಿ ಅಧ್ಯಕ್ಷ ಡಾ. ಮುಸ್ತಫಾ ಶರೀಫ್ ಹೈದ್ರಾಬಾದ್, ಸಫಾ ಬೈತುಲ್ ಮಾಲ್ ಹೈದ್ರಾಬಾದ್ ಅಧ್ಯಕ್ಷ ಮತ್ತು ಮೆಂಬರ-ಓ-ಮೆಹರಾಬ ಫೌಂಡೇಷನ್ ಇಂಡಿಯಾದ ಅಧ್ಯಕ್ಷರಾಗಿರುವ ಮೌಲಾನಾ ಗಯಾಸ್ ಅಹ್ಮದ್ ರಶ್ಶಾದಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಖಾಲಿ ಮೌಲಾನಾ ಸೈಫುಲ್ಲಾ ರಹಮಾನಿ ಅವರು ಈ ಸಂದರ್ಭದಲ್ಲಿ ‌ಮಾತನಾಡಿ, ಶಿಕ್ಷಣ ವೇ ಬದುಕಿದೆ ಆಧಾರ.‌ ಶಿಕ್ಷಣ ದಿಂದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ.‌ಹೀಗಾಗಿ ಎಲ್ಲರೂ ಶಿಕ್ಷಣ ಕ್ಕೆ ಹೆಚ್ಚಿನ ಆದ್ಯತೆ ‌ನೀಡಬೇಕೆಂದು ಕರೆ ನೀಡಿದರು.

ಇದೊಂದು ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿದೆ‌ ಎಂದು ಮಹ್ಮದ ಅಜಗರ ಚುಲ್ ಬುಲ್ ಕಾರ್ಯವನ್ನು ಶ್ಲಾಘಿಸಲಾಯಿತು. ಈ ವೇಳೆಯಲ್ಲಿ ಇಂಗ್ಲಿಷ್ ಗೆ ಭಾಷಾಂತರಿಸಿದ ಪುಸ್ತಕಗಳನ್ನು ಚುಲ್ ಬುಲ್ಅವರಿಗೆ ಹಸ್ತಾಂತರಿಸಲಾಯಿತು.

ಸಧ್ಯ ದೇಶದಲ್ಲಿ‌ ಅಲ್ಪಸಂಖ್ಯಾತರ ಹಾಗೂ ದಲಿತ ಮತ್ತು ಹಿಂದುಳಿದ ವರ್ಗದವರು, ಸಂವಿಧಾನದ‌ ಮೇಲೆ ನಂಬಿಕೆ ಇದ್ದವರು ಒಗ್ಗಟ್ಟುವಿದ್ದರೆ ಕೋಮುವಾದ ಶಕ್ತಿ ಗಳಿಗೆ ತಕ್ಕ ಉತ್ತರ ನೀಡಬಹುದಾಗಿದೆ ಎಂದು ಹೇಳಿದರು.

ಕರ್ನಾಟಕ ಸೀರತ್ ಉನ್ ನಬಿ ಸ್ಟಡಿ & ರಿಸರ್ಚ್ ಸೆಂಟರ್ ಅಧ್ಯಕ್ಷ ಮಹ್ಮದ ಅಜಗರ ಚುಲ್ ಬುಲ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಅಜೀಜುಲ್ಲಾ ಸರ್ಮಸ್ತ್ ಸನ್ಮಾನಿತರ ಪರಿಚಯ ಓದಿದರು. ಇಂಜನೀಯರ್ ಮುಸ್ತಾಖ್ ಅಹ್ಮದ ನಿರೂಪಿಸಿದರು.‌

ವೇದಿಕೆ‌ ಮೇಲೆ ಸಜ್ಜಾದಗಳು, ಉಲ್ಮಾಗಳು ಬುದ್ದಿ ಜೀವಿಗಳು ಹಾಗೂ ವಿವಿಧ ಸಂಸದ ಅಧ್ಯಕ್ಷರು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರು, ವಿದ್ಯಾರ್ಥಿಗಳ ಪಾಲಕರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೌಲಾನಾ ಮೊಹಮ್ಮದ್ ಇಸ್ಮಾಯಿಲ್ ಮುದ್ದಸ್ಸಿರ್, ಅತೀಖ್ ಏಜಾಜ್, ಅಫಜಾಲ್ ಮಹಮೂದ್ ಮತ್ತು ಸೈಯದ್ ಅರ್ಸಲಾನ್ ಅಹ್ಮದ ವಜೀರ ಮತ್ತು ಅನೇಕರು ಹಾಜರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago